ದಾವಣಗೆರೆಯಲ್ಲಿ ವಿದ್ಯಾರ್ಥಿಗಳಿಗೆ ಶರಣರ ಚಿತ್ರ ಬಿಡಿಸುವ ಸ್ಪರ್ಧೆ

ನಿರ್ಮಲ ಶಿವಕುಮಾರ
ನಿರ್ಮಲ ಶಿವಕುಮಾರ

ಕದಳಿ ವೇದಿಕೆಯಿಂದ ವಿನೂತನ ಕಾರ್ಯಕ್ರಮ

ದಾವಣಗೆರೆ:

ಬುಧವಾರ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ 185ನೇ ಕದಳಿ ಕಮ್ಮಟದಲ್ಲಿ ಶಿಕ್ಷಕರ ದಿನಾಚರಣೆ, ಶರಣ ಮಡಿವಾಳ ಮಾಚಿದೇವ, ಶರಣ ಹೂಗಾರ ಮಾದಯ್ಯ ಅವರ ಸ್ಮರಣೋತ್ಸವ ಹಾಗೂ ಲಿಂಗೈಕ್ಯ ಶರಣ ಕೆ.ಜಿ ಕಲ್ಲಪ್ಪ ಹಾಗೂ ಶರಣೆ ಲೋಕೇಶ್ವರಮ್ಮನವರ ದತ್ತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ದೃಶ್ಯಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಬಸವಾದಿ ಶರಣರ ಚಿತ್ರ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಅನೇಕರು ಭಾಗವಹಿಸಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸತೀಶಕುಮಾರ ಪಿ. ವಲ್ಲೇಪುರ ಇವರು ಆಗಮಿಸಿ ಕದಳಿ ವೇದಿಕೆಯ ಬಗ್ಗೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಕದಳಿ ಮಹಿಳಾ ವೇದಿಕೆಯ ಪ್ರಥಮಾಧ್ಯಕ್ಷರಾದ ಯಶ ದಿನೇಶ್ ಅವರು ವಚನ ಪ್ರಾರ್ಥನೆಯನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ಹೇಳಿಕೊಡುವುದರ ಮೂಲಕ ನಡೆಸಿಕೊಟ್ಟರು. ಹಾಗೂ ಇಂತಹ ಒಂದು ಒಳ್ಳೆಯ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದೀರಿ ನೀವುಗಳು ಅದೃಷ್ಟವಂತರು. ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸಿದರು.

ಕದಳಿ ಸಹೋದರಿಯರು ವಚನ ಗಾಯನ ಪ್ರಸ್ತುತಪಡಿಸುವುದರ ಜೊತೆಗೆ ನಿಕಟ ಪೂರ್ವ ಅಧ್ಯಕ್ಷರಾದ ಮಮತಾ ನಾಗರಾಜ ಹಾಗೂ ಪೂರ್ವ ಅಧ್ಯಕ್ಷರಾದ ವಿನೋದ ಅಜಗಣ್ಣ ಅವರು ವಚನಗಳ ಚಿಂತನೆ, ಸಮಾನತೆ, ಆಶಯ ಮತ್ತು ಸಂದೇಶವನ್ನು ವಿಶ್ಲೇಷಿಸಿದರು.

ವೇದಿಕೆಯ ಮತ್ತೊಂದೆಡೆ ಸಂತೋಷಕುಮಾರ ಕುಲಕರ್ಣಿ ಹಾಗೂ ಶಿವಶಂಕರ ಈರಪ್ಪ ಸುತಾರ ಅವರುಗಳು ಶರಣರಾದ ಬಸವಣ್ಣ ಹಾಗು ಅಕ್ಕಮಹಾದೇವಿ ಅವರ ಚಿತ್ರಗಳನ್ನು ಬಿಡಿಸುವ ಮೂಲಕ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

ಶಿಕ್ಷಕರ ದಿನಾಚರಣೆ ಪ್ರಯುಕ್ತ ಸಂಗೀತ ಗುರುಗಳಾದ ರೇವಣಸಿದ್ದಪ್ಪ, ಕುಂಚ ಚಿತ್ರಕಲಾಕಾರರಾದ ಸಂತೋಷಕುಮಾರ ಕುಲಕರ್ಣಿ ಮತ್ತೋರ್ವ ಕುಂಚ ಚಿತ್ರಕಲಾಕಾರರಾದ ಶಿವಶಂಕರ ಈರಪ್ಪ ಸುತಾರ್ ಅವರುಗಳಿಗೆ ವೇದಿಕೆಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.

ದತ್ತಿ ದಾನಿಗಳಾದ ಪಲ್ಲವಿ ಉಮೇಶ ಪಾಟೀಲ ಅವರು ತಮ್ಮ ತಂದೆ ತಾಯಿಯವರು ಹಾಕಿ ಕೊಟ್ಟಿರುವ ವಚನ ಸಂಸ್ಕಾರವೇ ಇಂದು ನಾವು ಈ ಮಟ್ಟಿಗೆ ಬೆಳೆಯಲು ಸಾಧ್ಯ ಎಂದು ತಿಳಿಸಿದರು. ಹಾಗೂ ವೇದಿಕೆ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಅಧ್ಯಕ್ಷತೆಯನ್ನು ವಹಿಸಿದ ವೇದಿಕೆ ಜಿಲ್ಲಾಧ್ಯಕ್ಷೆ ನಿರ್ಮಲಾ ಶಿವಕುಮಾರ ಅವರು ಶರಣ ಮಡಿವಾಳ ಮಾಚಿದೇವ ಹಾಗೂ ಶರಣ ಹೂಗಾರ ಮಾದಯ್ಯನವರ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ದೃಶ್ಯ ಕಲಾ ಮಹಾವಿದ್ಯಾಲಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಜೈರಾಜ್ ಎಂ. ಚಿಕ್ಕಪಾಟೀಲ, ತಾಲೂಕು ಘಟಕದ ಅಧ್ಯಕ್ಷರಾದ ವಿಜಯ ಚಂದ್ರಶೇಖರ, ಸಲಹಾ ಸಮಿತಿ ಸದಸ್ಯರಾದ ನೀಲಗುಂದ ಜಯಮ್ಮ, ಮಂದಾಕಿನಿ ಸ್ವಾಮಿ, ಶರಣ ಸಾಹಿತ್ಯ ಪರಿಷತ್ತಿನ ಪದಾದಧಿಕಾರಿಗಳು, ಕದಳಿ ವೇದಿಕೆಯ ಸದಸ್ಯರು ಹಾಗೂ ದೃಶ್ಯಕಲಾಮಹಾವಿಧ್ಯಾಯಲಯದ ಅಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಂದಿನಿ ಗಂಗಾಧರ ಅವರು ಸ್ವಾಗತಿಸಿದರು, ರತ್ನ ರೆಡ್ಡಿ ದತ್ತಿದಾನಿಗಳ ಪರಿಚಯ ನಡೆಸಿಕೊಟ್ಟರು. ಚಂದ್ರಿಕಾ ಮಂಜುನಾಥ ಶರಣು ಸಮರ್ಪಿಸಿದರು. ಪೂರ್ಣಿಮಾ ಪ್ರಸನ್ನಕುಮಾರ ಕಾರ್ಯಕ್ರಮವನ್ನು ನಿರೂಪಿಸಿದರು.

ಸಾಹಿತ್ಯ, ಸಂಗೀತ ಹಾಗೂ ಚಿತ್ರಕಲೆ ಎಲ್ಲವೂ ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ಈ ಕಾರ್ಯಕ್ರಮವು ವಿಭಿನ್ನ, ವಿನೂತನವಾದದ್ದರಿಂದ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು ಎನ್ನಬಹುದು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ
    .ಜೈ ಬಸವ

Leave a Reply

Your email address will not be published. Required fields are marked *