ಶರಣರ ವಿಚಾರಧಾರೆ ಬದುಕಿಗೆ ದಾರಿದೀಪ: ಸಂಸದ ಖಂಡ್ರೆ

ಬಸವ ಮೀಡಿಯಾ
ಬಸವ ಮೀಡಿಯಾ

ಜೈನಾಪುರ ಶ್ರಾವಣ ಸಂಭ್ರಮದಲ್ಲಿ ಗಮನ ಸೆಳೆದ ಜೈ ಜವಾನ್ ರೂಪಕ

ಭಾಲ್ಕಿ:

ಬಸವಾದಿ ಶರಣರ ವಿಚಾರಗಳು ಮತ್ತು ವಚನಗಳು ಇಂದಿಗೂ ಮನುಕುಲದ ಬದುಕಿಗೆ ದಾರಿದೀಪವಾಗಿವೆ ಎಂದು ಬೀದರ ಸಂಸದ ಸಾಗರ ಖಂಡ್ರೆ ಹೇಳಿದರು.

ತಾಲೂಕಿನ ಜೈನಾಪುರ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ನಮ್ಮೂರಿನಲ್ಲಿ ಶ್ರಾವಣ ಸಂಭ್ರಮ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶ್ರಾವಣ ಮಾಸ ಪವಿತ್ರವಾದದ್ದು. ಪ್ರತಿಯೊಬ್ಬರೂ ದೇವರಲ್ಲಿ ನಂಬಿಕೆ, ಶ್ರದ್ಧೆ ಇಟ್ಟು ಪೂಜೆ, ಜಪ, ತಪ ಮಾಡಬೇಕು. ಧರ್ಮ, ಸಂಸ್ಕೃತಿ, ಆಚಾರ, ಸಂಪ್ರದಾಯಗಳನ್ನು ಬದುಕಿನಲ್ಲಿ ಪಾಲಿಸಬೇಕು. ಮಹಾತ್ಮರು, ಮಠಾಧೀಶರು ನಡೆಸಿಕೊಡುವ ಪ್ರವಚನ ಆಲಿಸಿ ಪ್ರತಿಯೊಬ್ಬರು ತಮ್ಮ ಬದುಕು ಹಸನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಮನಸ್ಸು ವಿಕಾರಗಳಿಂದ ಹೊರಬಂದು ವಿಕಾಸಗೊಳ್ಳುವುದಕ್ಕೆ ಶರಣರ ವಚನಗಳು, ಪ್ರವಚನಗಳು ಸೋಪಾನವಾಗಿ ಕಾರ್ಯರ್ನಿಹಿಸುತ್ತವೆ. ಬಸವಾದಿ ಶರಣರು ವಿಶ್ವಕ್ಕೆ ನೀಡಿದ ವಚನ ಸಾಹಿತ್ಯವನ್ನು ಪ್ರತಿಯೊಬ್ಬರು ಪಠಣ ಮಾಡಬೇಕು, ಅರಿತು ಅನುಸರಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಸಂಗಮೇಶ್ವರ ಜ್ಯಾಂತೆ, ಚಂದ್ರಶೇಖರ ಜ್ಯಾಂತೆ, ಗುಂಡಪ್ಪ ಬಿರಾದಾರ, ಬಾಪುರಾವ ದೇಶಮುಖ, ಸತೀಶ ದೇಶಮುಖ, ಸೋನು ದೇಶಮುಖ, ಮಲ್ಲಿಕಾರ್ಜುನ ಸಂಗಮೆ, ರವೀಂದ್ರ ಇಂಚೂರೆ, ವೀರೇಶ ರೆಡ್ಡಿ, ಮಲ್ಲಿಕಾರ್ಜುನ ಮರಕಲ್ಲೆ, ಶಿವಕಾಂತ ಮೂಲಗೆ, ಈಶ್ವರ ಮರಕಲ್ಲೆ, ವೀರಶೆಟ್ಟಿ ಪಾಟೀಲ, ದೇವೀಂದ್ರ ಕರಂಜೆ, ಇದ್ದಾರೆಡ್ಡಿ ನಾಗೋರಾ, ವಾಲ್ಮೀಕಿ ಭೋಯನೆ, ಶಾಂತಕಮಾರ ಬಿರಾದಾರ, ರಮೇಶ ಪ್ರಭಾ, ಧನರಾಜ ಪಾಟೀಲ, ಡಾ. ಶ್ರೇಯಾ ಮಹಿಂದ್ರಕರ, ಶಿಲ್ಪಾ ಮಜಗೆ, ಸಿದ್ದಾರೂಢ ಭಾಲ್ಕೆ, ರವೀಂದ್ರ, ರಾಜಕುಮಾರ ಜ್ಯಾಂತೆ, ಶಿವಕುಮಾರ ಜ್ಯಾಂತೆ, ಬಾಬುರಾವ ಪಾಟೀಲ, ಅಂಕುಶ ಇಂಚೂರೆ, ಸುಭಾಷ ಮರಕಲ್ಲೆ, ಪ್ರದೀಪ ಜ್ಯಾಂತೆ ಸೇರಿದಂತೆ ಮುಂತಾದವರು ಇದ್ದರು.

ಡಾ. ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಶಿಕ್ಷಕರು ಸೇರಿ ನೀಡಿದ ದೇಶಭಕ್ತಿ ಬಿಂಬಿಸುವ ಜೈ ಜವಾನ್ ರೂಪಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *