ಬಸವತತ್ವ ಮಂದಿರ ಟ್ರಸ್ಟ್‌ಗೆ ಆಂಬುಲೆನ್ಸ್ ಕೊಡುಗೆ

ಬಸವ ಮೀಡಿಯಾ
ಬಸವ ಮೀಡಿಯಾ

ಚನ್ನಮ್ಮನ ಕಿತ್ತೂರು:

ಗ್ರಾಮೀಣ ಜನತೆಗೆ ತುರ್ತು ವೈದ್ಯಕೀಯ ಸೇವೆ ಒದಗಿಸುವ ಉದ್ಧೇಶದಿಂದ ಬೈಲೂರಿನ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳ ಪ್ರಯತ್ನದ ಫಲವಾಗಿ ಬೈಲೂರು ಶ್ರೀ ಬಸವತತ್ವ ಮಂದಿರ ಟ್ರಸ್ಟ್‌ಗೆ ಆಂಬುಲೆನ್ಸ್ ವಾಹನ ಹಸ್ತಾಂತರಿಸಲಾಯಿತು.

ಬೈಲೂರು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನರಿಗೆ ಆಂಬುಲೆನ್ಸ್ ವಾಹನದ ಅವಶ್ಯಕತೆ ಇರುವುದನ್ನು ಮನಗಂಡು ಪೂಜ್ಯ ನಿಜಗುಣಾನಂದ ಸ್ವಾಮೀಜಿ ಬೆಂಗಳೂರಿನ ರೋಟರಿ ಸಂಸ್ಥೆಯ ಗಮನಕ್ಕೆ ತಂದಿದ್ದರು.

ಸ್ವಾಮೀಜಿ ಮನವಿಗೆ ಸ್ಪಂದಿಸಿದ ರೋಟರಿ ಸಂಸ್ಥೆ ಸಮಾಜಸೇವಾ ಕಾರ್ಯಗಳಿಗೆ ‘ಅನುಕೂಲವಾಗುವಂತೆ ಆಂಬುಲೆನ್ಸ್ ವಾಹನ ಕೊಡುಗೆಯಾಗಿ ನೀಡಿದೆ.

ಈಚೆಗೆ ಬೆಂಗಳೂರಿನ ಬಸವ ಸಮಿತಿಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಆಂಬುಲೆನ್ಸ್ ವಾಹನವನ್ನು ಬೈಲೂರಿನ ಶ್ರೀ ಬಸವತತ್ವ ಮಂದಿರ ಟ್ರಸ್ಟ್ ಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಬಸವ ಸಮಿತಿಯ ಅರವಿಂದ ಜತ್ತಿ, ಪೂಜ್ಯ ನಿಜಗುಣಾನಂದ ಸ್ವಾಮೀಜಿ, ರೋಟರಿ ಸಂಸ್ಥೆಯ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
Leave a comment

Leave a Reply

Your email address will not be published. Required fields are marked *