ನಿಜಾಚರಣೆ: ಶರಣತತ್ವದಂತೆ ನಡೆದ ಶಿಶು ಮನೆ ತುಂಬಿಸಿಕೊಳ್ಳುವ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ನಂಜನಗೂಡು:

ಹೊಸದಾಗಿ ಹುಟ್ಟಿದ ಶಿಶುವನ್ನು ಮನೆ ತುಂಬಿಸಿಕೊಳ್ಳುವ ಶರಣತತ್ವದ ನಿಜಾಚರಣೆ ಕಾರ್ಯಕ್ರಮ ಶರಣ ಸಂಸ್ಕೃತಿ ಪ್ರಸಾರ ವೇದಿಕೆಯ ಬಸವ ಎಂ. ಸಿದ್ದಪ್ಪ (ಬಿ.ಎಂ. ಸಿದ್ದಪ್ಪ)ಅವರ ಮನೆಯಲ್ಲಿ ಈಚೆಗೆ ನಡೆಯಿತು.

ಬಿ.ಎಂ. ಸಿದ್ದಪ್ಪ ಅವರ ಮಗಳು ಎಸ್. ಶುಭ ಮಧುಕರ್ ಅವರ ನವಜಾತ ಗಂಡು ಶಿಶುವಿನ ಮನೆ ತುಂಬಿಸಿಕೊಳ್ಳುವ ಕಾರ್ಯಕ್ರಮವನ್ನು ಮನೆಯವರೆಲ್ಲ ಸಂತಸದಿಂದ ನಡೆಸಿದರು.

ಎಸ್. ಶುಭ, ಎಂ. ಮಧುಕರ್, ತಮ್ಮಡಹಳ್ಳಿ ವಿನೋದ, ರಾಜಮ್ಮ ಸಿದ್ದಪ್ಪ, ಎಸ್. ಶಾಂಭವಿ ಮಂಜುನಾಥ್ಯ, ರುಷಿಕ್ ಎಂ. ಆದ್ಯ, ಎಮ್. ಸೌಖ್ಯ ಇವರುಗಳೆಲ್ಲ ಶರಣರ ವಚನಗಳನ್ನು ಹಾಡಿದರು. ವಚನಗಳು ಪಠಿಸುತ್ತ ಬಸವ ಪೂಜೆ ನೆರವೇರಿಸಿ ಆನಂದಿಸಿದರು.

ವಿಶ್ವ ಬಸವ ಸೇನಾ ಅಧ್ಯಕ್ಷರಾದ ಬಸವಯೋಗೇಶ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ವಿಶೇಷವಾಗಿ ನಡೆಯಿತು.

ಈಚೆಗೆ ಇದೇ ಮಗುವಿನ ಗರ್ಭಲಿಂಗ ದೀಕ್ಷಾ ಕಾರ್ಯಕ್ರಮವನ್ನು ಮೈಸೂರಿನ ಜೆ.ಪಿ. ನಗರದಲ್ಲಿ ಪೂಜ್ಯ ಇಮ್ಮಡಿ ಉದ್ದಾನ ಸ್ವಾಮಿಗಳವರ ನೇತೃತ್ವದಲ್ಲಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *