ಕೇಂದ್ರ ಸಂಪುಟ ಸಭೆ ನೂತನ ಅನುಭವ ಮಂಟಪದಲ್ಲಿ ನಡೆಯಲಿ: ಶಾಸಕ ಬೆಲ್ದಾಳೆ

ಬಸವ ಮೀಡಿಯಾ
ಬಸವ ಮೀಡಿಯಾ

ಶರಣ ಉದ್ಯಾನದಲ್ಲಿ ಶ್ರಾವಣ ಪ್ರವಚನ ಮಂಗಲ ಸಮಾರಂಭ

ಬೀದರ:

ಇಂದಿನ ದೆಹಲಿಯ ಭಾರತ ಮಂಟಪಕ್ಕೆ ೧೨ನೇ ಶತಮಾನದ ಅನುಭವ ಮಂಟಪವೇ ಪ್ರೇರಣೆ. ಕೇಂದ್ರ ಸರ್ಕಾರ ಮಂತ್ರಿಮಂಡಲ ಸಭೆಯನ್ನು ಬಸವಕಲ್ಯಾಣದ ಅನುಭವ ಮಂಟಪದಲ್ಲಿ ನಡೆಸಬೇಕು ಸಕಲ ಜೀವಾತ್ಮರ ಒಳಿತನ್ನು ಬಯಸಬೇಕು ಎಂದು ಶಾಸಕ ಶೈಲೇಂದ್ರ ಬೆಲ್ದಾಳೆ ಹೇಳಿದರು.

ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ನಗರದ ಶರಣ ಉದ್ಯಾನದಲ್ಲಿ ಶ್ರಾವಣ ಮಾಸದ ಪರ್ಯಂತರ ನಡೆದ ಶಿವಯೋಗಿ ಸಿದ್ಧರಾಮರರು ಪ್ರವಚನ ಮಂಗಲ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರ್ಮಯೋಗಿಯಾಗಿದ್ದ ಸಿದ್ಧರಾಮೇಶ್ವರರು ಶಿವಯೋಗಿ ಸಿದ್ಧರಾಮೇಶ್ವರರು ಆಗಿದ್ದು ಪರಿವರ್ತನೆ. ತನ್ನ ತಾನರದಿಡೆ ತಾನೇ ದೇವ ನೋಡಾ ಎಂಬಂತೆ ನಾವೆಲ್ಲ ಕರ್ಮಯೋಗಿಗಳು ಹೋಗಿ ಶಿವಯೋಗಿಗಳಾಗಬೇಕು ಎಂದು ಮುಖ್ಯ ಅತಿಥಿಗಳಾಗಿ ಬಂದಿದ್ದ ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು.

ಬಸವಾದಿ ಶರಣರು ತನ್ನನ್ನು ತಾನು ಹೇಗೆ ಅರಿಯುವುದು ಎಂಬ ದಾರಿ ತೋರಿಸಿದ್ದಾರೆ. ನಾನು ಎಂಬುದು ಅಹಂಕಾರವಾಗಬಾರದು, ನಾನು ಎಂಬುದು ದೇವರ ಸ್ವರೂಪನೆಂಬ ಭಾವ ಬಲಿಯಬೇಕು, ಅಹಂಕಾರ ಮರೆತು ದೇವ ಸಾಕ್ಷಾತ್ಕಾರ ಭಾವ ಮೂಡಬೇಕು, ಎತ್ತೆತ್ತ ನೋಡಿದರೂ ದೇವರೇ ಕಾಣಬೇಕು ಎಂದು ಬಸವಣ್ಣನವರು ಹೇಳಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.

ಒಂದು ತಿಂಗಳ ಪರ್ಯಂತರ ಶಿವಯೋಗಿ ಸಿದ್ಧರಾಮೇಶ್ವರರು ಪ್ರವಚನ ಮಾಡಿದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಆಶೀರ್ವಚನ ನೀಡಿ, ಬಾಹ್ಯ ಪರಿವರ್ತನೆಗಿಂತ ಆಂತರಿಕ ಪರಿವರ್ತನೆ ಮುಖ್ಯ. ಶರಣರ ಸಂದೇಶ ಮಾನವೀಯ ಮೌಲ್ಯಗಳನ್ನು ಬಾಲ್ಯದಿಂದಲೇ ಬೆಳೆಸಬೇಕು ಎಂದು ನುಡಿದರು.

ಶಾಸಕರಾದ ರಹೀಂಖಾನ ಮಾತನಾಡಿ, ಬಸವತತ್ವ ಇಡೀ ಜಗತ್ತಿನಲ್ಲಿ ಆಚರಣೆಯಾದರೆ ಯಾವುದೇ ತೊಂದರೆ ಇರುವುದಿಲ್ಲ. ಸಕಲ ಜೀವಾತ್ಮರ ಒಳಿತನ್ನು ಬಯಸಬೇಕು. ನಡೆ-ನುಡಿಗಳು ಒಂದಾಗಿ ಮತ್ತು ಶುದ್ಧವಾಗಿಬೇಕು. ಏಕದೇವ ನಿಷ್ಠೆ ಗಟ್ಟಿಗೊಳ್ಳಬೇಕು ಎಂದರು.

ಬಸವಕಲ್ಯಾಣ ಕ್ಷೇತ್ರ ಸಮಿತಿ ಸಂಯೋಜಕ ಬಸವರಾಜ ಪಾಟೀಲ ಸೇಡಂ ಬಸವಜ್ಯೋತಿ ಬೆಳಗಿಸಿ ಮಾತನಾಡಿ, 12ನೇ ಶತಮಾನದಲ್ಲಿ ಶರಣರು ಪ್ರತಿಪಾದಿಸಿದ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಸೋಲಾಪುರದ ಶೈಲಜಾತಾಯಿ ಲಿಗಾಡೆ ಧ್ವಜಾರೋಹಣಗೈದರು. ಬಿಡಿಪಿಸಿ ನಿರ್ದೇಶಕ ವೀರಣ್ಣ ಹಲಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಲಿಕಿಲೆ, ಬಸವ ಸೇವಾ ಪ್ರತಿಷ್ಠಾನದ ಬಸವರಾಜ ರುದ್ರವಾಡಿ, ಜಗನ್ನಾಥ ರಾಚೋಟಿ, ರವೀಂದ್ರ ಶಿವಪೂಜೆ, ಸೊನ್ನಲಾಪೂರದ ವಿಜಯಕುಮಾರ ಹತ್ತೂರೆ, ಎಸ್.ಕೆ. ಪಾಟೀಲ, ಚಂದ್ರಕಾಂತ ಹೂಗಾರ, ರಾಜಕುಮಾರ ಟಿಳ್ಳೇಕರ, ನಿರ್ಮಲಾ ಚಂದನಹಳ್ಳಿ, ಯೋಗೀಶ ಸಿರಿಗೆರೆ ಉಪಸ್ಥಿತರಿದ್ದರು.

ಶಕುಂತಲಾ ಖಂಡ್ರೆ, ಶೋಭಾ ಬಶೆಟ್ಟಿ ಗುರುಪೂಜೆ ನಡೆಸಿಕೊಟ್ಟರು. ಶಿವಕುಮಾರ ಪಂಚಾಳ, ಆದಿತ್ಯ ಪಂಚಾಳ ವಚನ ಸಂಗೀತ ನಡೆಸಿಕೊಟ್ಟರು. ಸುಷ್ಮಾ ಪಾವಡಶೆಟ್ಟಿ ತಂಡದವರಿಂದ ವಚನ ನೃತ್ಯ ಜರುಗಿದವು. ಉಷಾ ಮಿರ್ಚೆ ಸ್ವಾಗತಿಸಿದರೆ, ವಿಜಯಲಕ್ಷ್ಮಿ ಸುಲೆಪೇಟ ನಿರೂಪಿಸಿದರು.

ಇದೇ ಸಂದರ್ಭದಲ್ಲಿ ಜ್ಞಾನದೇವಿ ಬಬಛೆಡೆ ಅವರಿಗೆ ಗಣನಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ

Leave a Reply

Your email address will not be published. Required fields are marked *