ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳ ಆಯೋಜನೆ

ಬಸವ ಮೀಡಿಯಾ
ಬಸವ ಮೀಡಿಯಾ

ಸ್ಪರ್ಧೆಗೆ ನೋಂದಣಿ ಆರಂಭ

ಚಿತ್ರದುರ್ಗ:

ಚಿತ್ರದುರ್ಗದ ಬಸವಕೇಂದ್ರ, ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ವತಿಯಿಂದ ಇದೇ ೧೪ರಿಂದ ೨೨ರವರೆಗೆ ೯ ದಿನಗಳ ಕಾಲ ನಡೆಯುವ ಮಧ್ಯಕರ್ನಾಟಕದ ವೈಚಾರಿಕ, ಅರ್ಥಪೂರ್ಣ ಎಂದೇ ಬಿಂಬಿತವಾಗಿರುವ ಶರಣ ಸಂಸ್ಕೃತಿ ಉತ್ಸವಕ್ಕೆ ಪೂರಕವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಅಕ್ಟೋಬರ್ ೧೩ರಂದು ಬೆಳಿಗ್ಗೆ ಮಕ್ಕಳು ಹಾಗೂ ವಯಸ್ಕರಿಗಾಗಿ ವಚನ ಕಂಠಪಾಠ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಇದರೊಂದಿಗೆ ಇದೇ ದಿನ ಎರಡು ಹಂತದಲ್ಲಿ ೧೨ನೇ ಶತಮಾನದ ಬಸವಾದಿ ಶಿವಶರಣರ ವೇಷಭೂಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ೭೦೨೨೦೬೩೩೮೧ ಹಾಗೂ ೯೯೪೫೧೨೨೪೧೪ಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.

ಅಕ್ಟೋಬರ್ ೧೪ರಂದು ಬೆಳಿಗ್ಗೆ ಶ್ರೀಮಠದ ಆವರಣದಲ್ಲಿ ಯಾವುದೇ ವಯಸ್ಸಿನ ನಿರ್ಬಂಧವಿಲ್ಲದಂತೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ೯೪೮೨೦೬೬೫೬೫ಗೆ ಸಂಪರ್ಕಿಸಿ ತಿಳಿದುಕೊಳ್ಳಬಹುದಾಗಿದೆ.

ಇದೇ ದಿನ ಬೆಳಿಗ್ಗೆ ದೇಹಾರೋಗ್ಯ ಸಮಸ್ಥಿತಿಯ ಹಿನ್ನೆಲೆಯಲ್ಲಿ ಸಾವಯವ ಪದಾರ್ಥಗಳನ್ನು ಬಳಸುವ ಹಾಗೂ ಪ್ರೋತ್ಸಾಹಿಸುವ ಹಿನ್ನೆಲೆಯಿಂದ ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆ ಸ್ಪರ್ಧೆಯನ್ನು ಆಯೋಜಿಸಿದ್ದು ಇದಕ್ಕೆ ಪೂರಕ ಮಾಹಿತಿಗಾಗಿ ೯೮೮೦೩೧೨೫೯೫ ಹಾಗೂ ೭೦೧೯೪೮೦೩೫೬ ಸಂಪರ್ಕಿಸಬಹುದಾಗಿದೆ. ಜಮುರಾ ಕ್ರೀಡಾಕೂಟವೂ ಆರಂಭವಾಗಲಿದೆ.

೧೫ರ ಗುರುವಾರ ಬಸವಾದಿ ಶಿವಶರಣರ ಚಿತ್ರವನ್ನು ಸ್ಥಳದಲ್ಲೇ ಬಿಡಿಸುವ ಸ್ಪರ್ಧೆಯನ್ನು ಎರಡು ಹಂತದಲ್ಲಿ ಏರ್ಪಡಿಸಿದೆ. ಇದಕ್ಕೆ ಅಗತ್ಯ ಮಾಹಿತಿಗಾಗಿ ೭೮೯೯೦೭೯೯೫೫ ಹಾಗೂ ೯೪೮೧೯೧೧೩೬೦ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಹಾಗೆಯೇ ಮಹಿಳೆಯರಿಗಾಗಿ ಜೂನಿಯರ್, ಸೀನಿಯರ್ ಎಂದು ಎರಡು ವಿಭಾಗದಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಅದಕ್ಕೆ ಬೇಕಾದ ಮಾಹಿತಿಯನ್ನು ೭೨೫೯೬೦೫೬೦೫ ಹಾಗೂ ೯೭೩೧೩೩೨೧೮೩ಗೆ ಸಂಪರ್ಕಿಸಲು ಕೋರಿದೆ.

ಸಂಜೆ ಜಮುರಾ ಕ್ರೀಡಾಕೂಟ, ಮಹಿಳಾ ಕ್ರೀಡಾಕೂಟ ಹಾಗೂ ಹಿಂದೆ ನಡೆದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಫಲಕ ಹಾಗೂ ನಗದು ವಿತರಣೆಯ ಸಮಾರೋಪ ನಡೆಯಲಿದೆ. ಅಂದು ಜೀ ಕನ್ನಡ ಸರಿಗಮಪ ಗ್ರಾಂಡ್ ಜ್ಯೂರಿಗಳಿಂದ ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಗೀತನಮನ ಕಾರ್ಯಕ್ರಮ ನಡೆಯಲಿದೆ.

೧೬ರಂದು ಕೃಷಿಮೇಳದಲ್ಲಿ ಸಾಕುಪ್ರಾಣಿಗಳ ಹಾಗೂ ಜೋಡೆತ್ತುಗಳ ಪ್ರದರ್ಶನವಿದೆ. ಭಾಗವಹಿಸಲಿಚ್ಚಿಸುವವರು ೯೮೪೫೩ ೯೬೫೮೮ಗೆ ಸಂಪರ್ಕಿಸಲು ಕೋರಿದೆ.

೧೭ರಂದು ಬೆಳಗ್ಗೆ ೧೦.೩೦ ಗಂಟೆಗೆ ಶ್ರೀಮಠದ ಅನುಭವ ಮಂಟಪದಲ್ಲಿ ಏಕಕಾಲದಲ್ಲಿ ಹತ್ತು ಸಾವಿರ ಜನರಿಂದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಆಯ್ದ ವಚನಗಳ ಸಾಮೂಹಿಕ ಗಾಯನ ನಡೆಯಲಿದೆ. ಈ ಗಾಯನದಲ್ಲಿ ಭಾಗವಹಿಸಲು ೭೮೪೬೦ ೩೩೩೧೫ಗೆ ಸಂಪರ್ಕಿಸಿ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.

ಅಕ್ಟೋಬರ್ ೧೩ ರಿಂದ ೨೨ರವರೆಗೆ ಹತ್ತುದಿನಗಳ ಕಾಲ ಯೋಗಗುರು ವೈದ್ಯಶ್ರೀ ಚೆನ್ನಬಸವಣ್ಣ ಅವರಿಂದ ಬೆಳಗ್ಗೆ ೫.೧೦ ರಿಂದ ೬.೪೫ರವರೆಗೆ ಯೋಗ ಆರೋಗ್ಯ ಆಧ್ಯಾತ್ಮ ಶಿಬಿರ ನಡೆಯಲಿದೆ. ೯೪೪೮೧ ೩೦೭೮೮ ಹಾಗೂ ೭೦೧೯೪ ೮೦೩೫೬ಗೆ ಸಂಪರ್ಕಿಸಿ ಹೆಸರು ನೋಂದಾಯಿಸಬಹುದಾಗಿದೆ.

ಇದರೊಂದಿಗೆ ಜಯದೇವ ಜಂಗೀಕುಸ್ತಿ ಪಂದ್ಯಾವಳಿಯನ್ನು ಅಕ್ಟೋಬರ್ ೨೨ರಂದು ಶ್ರೀಮಠದಲ್ಲಿ ಏರ್ಪಡಿಸಲಾಗಿದೆ. ಅದರ ಮಾಹಿತಿಗಾಗಿ ೯೮೪೫೩ ೯೬೫೮೮ ಗೆ ಸಂಪರ್ಕಿಸಲು ಕೋರಿದೆ.

ಉಳಿದಂತೆ ಹತ್ತಾರು ಕಾರ್ಯಕ್ರಮಗಳನ್ನು ವಿಭಿನ್ನ ರೀತಿಯಲ್ಲಿ ಆಯೋಜಿಸಲಾಗಿದ್ದು ಮಹಾಜನತೆ ಸದುಪಯೋಗಪಡಿಸಿಕೊಳ್ಳಲು ಆಡಳಿತ ಮಂಡಳಿ ಕೋರಿದೆ.

ವಿಶೇಷ ಮಾಹಿತಿ ಏನೆಂದರೆ ಕೈಮಗ್ಗದಿಂದ ತಯಾರಾದ ಇಳಕಲ್ ಸೀರೆಗಳು ಶೇ. ೫೦ ರಿಯಾಯಿತಿ ದರದಲ್ಲಿ ದೊರೆಯಲಿದ್ದು, ಅದು ಶ್ರೀಮಠದಲ್ಲಿ ೧೭ರಂದು ನಡೆಯುವ ವಚನ ಝೇಂಕಾರದಲ್ಲಿ ಭಾಗವಹಿಸುವವರಿಗೆ ಮಾತ್ರ ನೀಡಲಾಗುವುದು ಹಾಗೂ ಪುರುಷರ ಬಿಳಿ ಷರ್ಟ್, ಲುಂಗಿ ಹಾಗೂ ವಸ್ತ್ರ ಕೂಡ ವಿತರಿಸಲಾಗುತ್ತದೆ. ಸಂಪರ್ಕಕ್ಕಾಗಿ ೯೯೦೨೯೨೯೭೦೧ ಸಂಪರ್ಕಿಸಲು ಶ್ರೀಮಠದ ಪ್ರಕಟಣೆಯಲ್ಲಿ ಕೋರಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *