ಅಕ್ಟೊಬರ್ 4 ಕಲಬುರಗಿಯಲ್ಲಿ ‘ಇವ ನಮ್ಮವ ಬಸವ ಸಂಸ್ಕೃತಿ’

ಕಲಬುರಗಿ:

“ನಮ್ಮ ತಂದೆ ತಾಯಿಯವರ ಲಿಂಗೈಕ್ಯ ಸಂಸ್ಮರಣೆ ಸ್ಮರಣಾರ್ಥವಾಗಿ ಅಕ್ಟೋಬರ್ 4ರಂದು ಬಸವ ಸಮಿತಿ ಅನುಭವ ಮಂಟಪದಲ್ಲಿ ‘ಇವ ನಮ್ಮವ’ ಬಸವ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗಿದೆ,” ಎಂದು ಬೆಂಗಳೂರು ಲಿಂಗಾಯತ ಧರ್ಮ ಅಧ್ಯಯನ ಕೇಂದ್ರದ ಡಾ. ಶ್ರೀಶೈಲ ಮಸೂತೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದೇ ವೇಳೆಯಲ್ಲಿ ಡಾ. ಶ್ರೀಶೈಲ ಮಸೂತೆ ರಚಿಸಿದ ‘ಇವ ನಮ್ಮವ’ ಪುಸ್ತಕ ಬಿಡುಗಡೆ ಸಮಾರಂಭ ಕೂಡ ಜರುಗಲಿದ್ದು, ಇಳಕಲ್ ವಿಜಯಮಹಾಂತೇಶ್ವರ ಮಠದ ಪೂಜ್ಯ ಗುರುಮಹಾಂತ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ.

ಗುಳೇದಗುಡ್ಡದ ಗುರು ಸಿದ್ಧೇಶ್ವರ ಬೃಹನ್ಮಠದ ಪೂಜ್ಯ ಬಸವರಾಜ ಪಟ್ಟಾದಾರ್ಯ ಸ್ವಾಮಿಗಳು ನೇತೃತ್ವ ವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿದ್ಧರಾಮ ಬೆಲ್ದಾಳೆ ಶರಣರು ಅಧ್ಯಕ್ಷತೆ ವಹಿಸಲಿದ್ದಾರೆ. ಚನ್ನಬಸವಾನಂದ ಸ್ವಾಮೀಜಿ, ಸಿದ್ಧಬಸವ ಕಬೀರ ಸ್ವಾಮೀಜಿ, ಮಾತೆ ಸತ್ಯದೇವಿ, ಮಾತೆ ಮಹಾನಂದ ತಾಯಿ, ಪ್ರಭುಶ್ರೀ ತಾಯಿ, ಸಮ್ಮುಖ ವಹಿಸಲಿದ್ದು, ಶಾಸಕ ಅಲ್ಲಮಪ್ರಭು ಪಾಟೀಲ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಹೇಳಿದರು.

ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಸವತತ್ವ ಚಿಂತಕ ರಂಜಾನ್ ದರ್ಗಾ ಪುಸ್ತಕ ಬಿಡುಗಡೆ ಮಾಡಿ ಅನುಭಾವ ನುಡಿಗಳನ್ನಾಡಲಿದ್ದಾರೆ.

ಸದ್ಗುರು ಬಸವಪ್ರಭು ಮಹಾಸ್ವಾಮಿಗಳಿಗೆ ‘ಲಿಂಗಾನಂದಶ್ರೀ ಪ್ರಶಸ್ತಿ’, ಡಾ. ಸೀತವ್ವ ದುಂಡಪ್ಪ ಜೋಡಟ್ಟಿ ಅವರಿಗೆ ‘ಚಿನ್ಮೂಲಾದ್ರಿ ಚಿತ್ಕಳೆ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ, ಶಿವರುದ್ರಪ್ಪ ಎನ್.ಬಿ. ಹಾಗೂ ಕೆ.‌ ನೀಲಾ ಆಗಮಿಸಲಿದ್ದು, ಪ್ರೊ. ಆರ್.ಕೆ.‌ ಹುಡಗಿ, ಎಸ್.‌ದಿವಾಕರ, ಮೀನಾಕ್ಷಿ ಬಾಳಿ, ವಿಶ್ವಾರಾಧ್ಯ ಸತ್ಯಂಪೇಟೆ, ಜೆ.ಎಸ್. ಪಾಟೀಲ, ಡಾ.‌ದಯಾನಂದ ನೂಲಿ, ಸಂಜಯ ಮಾಕಲ್ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.

ದೇವದಾಸಿ ಯುವಕ ಯುವತಿಯರ ಮೂರು ಜೋಡಿಗಳ ಸರಳ‌ ವಚನ ಮಾಂಗಲ್ಯ ಕಾರ್ಯಕ್ರಮ ಹಾಗೂ ಪದವಿಪೂರ್ವದಿಂದ ಸ್ನಾತಕೋತ್ತರ ಪದವಿವರೆಗೆ ದೇವದಾಸಿ ಮಕ್ಕಳಿಗೆ ಶಿಕ್ಷಣದ ದತ್ತು ಸ್ವೀಕಾರ ಮಾಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಾಗೇಂದ್ರಪ್ಪ ನಿಂಬರ್ಗಿ, ಉದಯಕುಮಾರ ಸಾಲಿಮಠ, ಶಿವಲಿಂಗಪ್ಪ ಕೆಂಗನಾಳ, ಅಯ್ಯಣ್ಣ ನಂದಿ, ಜಗದೇವಿ ಚಟ್ಟಿ, ಬಾಬು ಉಪ್ಪಿನ ಮತ್ತಿತರರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *