ಎಡಿಯೂರಲ್ಲಿ ಬಸವಧರ್ಮ ಸಮ್ಮೇಳನ

ಬಸವ ಮೀಡಿಯಾ
ಬಸವ ಮೀಡಿಯಾ

ಎಡಿಯೂರ:

ಇಷ್ಟಲಿಂಗಯೋಗಿ ಶ್ರೀ ತೋಂಟದ ಸಿದ್ಧಲಿಂಗ ಯತಿಗಳ ಕ್ಷೇತ್ರ ಕಗ್ಗೇರಿ, ಎಡಿಯೂರಲ್ಲಿ ‘ಬಸವ ಧರ್ಮ ಸಮ್ಮೇಳನ’4ರಂದು ನಡೆಯಲಿದೆ.

ಧರ್ಮ ಸಮ್ಮೇಳನದಲ್ಲಿ ‘ಇಷ್ಟಲಿಂಗ ಯೋಗ ಅನುಸಂಧಾನ ಮತ್ತು ಅನುಷ್ಠಾನ’ಕಾರ್ಯಕ್ರಮ ನಡೆಯಲಿದ್ದು, ಬಸವಧರ್ಮ ಪೀಠ ಮತ್ತು ರಾಷ್ಟ್ರೀಯ ಬಸವದಳ ಸಂಘಟನೆಗಳು ಸಮ್ಮೇಳನ ಆಯೋಜಿಸಿವೆ.

ಸಾಮೂಹಿಕ ಇಷ್ಟಲಿಂಗ ಪೂಜೆ, ಧ್ಯಾನ ಹಾಗೂ ಯೋಗ ಅನುಷ್ಠಾನ, ಧರ್ಮಸಭೆ, ವಚನ ಚಿಂತನ, ಪ್ರಮುಖ ಪೂಜ್ಯರು ಹಾಗೂ ಬಸವತತ್ವ ಚಿಂತಕರ ಉಪನ್ಯಾಸ, ವಚನ ಗಾಯನ ಮತ್ತು ಶರಣ ಸಂಸ್ಕೃತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಜಗಜ್ಯೋತಿ ಬಸವೇಶ್ವರರು ಹಾಗೂ ೧೨ನೇ ಶತಮಾನದ ಶಿವಶರಣರ ಸಮಾನತೆ, ಕಾಯಕ ಮತ್ತು ದಾಸೋಹದ ತತ್ವಗಳನ್ನು ಜನರಿಗೆ ತಲುಪಿಸುವುದು ಈ ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ.

ಈ ಧಾರ್ಮಿಕ ಹಾಗೂ ವೈಚಾರಿಕ ಸಮ್ಮೇಳನಕ್ಕೆ ಸಮಸ್ತ ಬಸವಭಕ್ತರು, ಶರಣ ಬಂಧುಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *