ಬೆಳಗಾವಿ :
ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ರವಿವಾರ ವಿಶ್ವದಾಖಲೆ ಪ್ರಶಸ್ತಿ ಪುರಸ್ಕೃತರಾದ ಡಾ. ರಾಜೇಶ್ವರಿ ಹಿರೇಮಠ ಅವರು ‘ಜಾನಪದ ಸಿರಿ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

ಮಾನವ ಜನಾಂಗದ ಹುಟ್ಟಿನಿಂದಲೇ ಜನಪದ ಹುಟ್ಟಿದ್ದು, ಜನರಿಂದ ಜನರಿಗೆ ಬಾಯಿಂದ ಬಾಯಿಗೆ ಹರಿದು ಬಂದಿದೆ. ಈ ರೀತಿ ಸಾಮಾನ್ಯ ಜನರಿಂದ ಜನರಿಗೆ ಹರಿದು ಬಂದುದೇ ‘ಜನಪದʼ ಸಾಹಿತ್ಯವಾಗಿದೆ ಎಂದರು.
ಈ ಜನಪದರ ಸಂಸ್ಕೃತಿ, ಜೀವನ ಪದ್ಧತಿ, ಆಚಾರ, ವಿಚಾರಗಳನ್ನು ಅಧ್ಯಯನ ಮಾಡುವುದೇ “ಜಾನಪದ” ಸಾಹಿತ್ಯವೆಂದು ಅವುಗಳ ನಡುವಿನ ವ್ಯತ್ಯಾಸವನ್ನು ಉಪನ್ಯಾಸಕರು ತಿಳಿಸಿದರು.
ಜನಪದರು ದೇವರನ್ನು ಅತಿಯಾಗಿ ನಂಬಿದವರು. ಆದರೆ ಅವರು ಗುಡಿಗಳನ್ನು ಕಟ್ಟಲಿಲ್ಲ, ಬಸವಾದಿ ಶರಣರಂತೆ ನಿಸರ್ಗವನ್ನೇ ದೇವರೆಂದು ಕಂಡವರು. ಅವರು ತಮ್ಮ ಜೀವನದ ಅನುಭವಗಳನ್ನು ಸರಳವಾಗಿ, ನೇರವಾಗಿ ಪದಗಳನ್ನಾಗಿಸಿದರು. ಅದರಿಂದ ಮೂಡಿಬಂದ ನಂಬಿಕೆಗಳನ್ನು ಸಾರಿದರೇ ವಿನಾಃ ಮೂಢನಂಬಿಕೆಗಳನ್ನು ಬಿತ್ತಲಿಲ್ಲ.

ಎಲ್ಲಿಯೂ ಎಂದಿಗೂ ಜನಪದರು ತಮ್ಮ ಹೆಸರನ್ನು ಉಲ್ಲೇಖಿಸದೇ ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ಅದ್ಭುತ ತತ್ವಸಂದೇಶಗಳನ್ನು ಜಗತ್ತಿಗೆ ಕೊಟ್ಟಿದ್ದಾರೆ. ಅಂತಹ ಹಲವಾರು ಜನಪದ ಗೀತೆಗಳನ್ನು, ಗಾದೆ ಮಾತುಗಳನ್ನು ಹಾಸ್ಯರೂಪದಲ್ಲಿ ಮನಮುಟ್ಟುವಂತೆ ವಿವರಿಸಿ, ಡಾ.ರಾಜೇಶ್ವರಿ ಅವರು ನೆರೆದಿದ್ದ ಶರಣರನ್ನು ರಂಜಿಸಿದರು.
ಸುರೇಶ ನರಗುoದ ಅವರ ಪ್ರಾಥ೯ನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಆರಂಭದಲ್ಲಿ ಶoಕರ ಗುಡಸ, ಆನoದ ಕರಕಿ, ದ್ರಾಕ್ಷಾಯಣಿ ಪೂಜಾರ, ಜಯಶ್ರೀ ಚವಲಗಿ ವಚನ ವಿಶ್ಲೇಷನೆ ಮಾಡಿದರು. ಶಿವಕುಮಾರ ಅವರು ಮುಖ್ಯ ಅತಿಥಿಗಳ ಪರಿಚಯ ಭಾಷಣ ಮಾಡಿದರು.
ಕಾರ್ಯಕ್ರಮದ ವಿಶೇಷ ಅತಿಥಿಯಾಗಿದ್ದ ಪೊಲೀಸ್ ಇಲಾಖೆಯ ಜ್ಯೋತಿರ್ಲಿಂಗ ಹೊನಕಟ್ಟಿ ಅವರು ಜನಪದ ಗೀತೆಯನ್ನು ಹಾಡಿ ಎಲ್ಲರ ಮನರಂಜಿಸಿದರು.

ಅಧ್ಯಕ್ಷತೆಯನ್ನು ಲಿಂಗಾಯತ ಸಂಘಟನೆ ಅಧ್ಯಕ್ಷರಾದ ಈರಣ್ಣ ದೇಯನ್ನವರ ವಹಿಸಿದ್ದರು. ಸಂಗಮೇಶ ಅರಳಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಶಾಂತಾ ಚಿನಿವಾಲರ ದಾಸೋಹ ಸೇವೆಗೈದರು.
ಶಶಿಭೂಷಣ ಪಾಟೀಲ, ಸದಾಶಿವ ದೇವರಮನಿ, ವಿ. ಕೆ. ಪಾಟೀಲ, ಬಸವರಾಜ ಬಿಜ್ಜರಗಿ, ಶಿವಾನoದ ನಾಯಕ, ಶಿವಪುತ್ರಯ್ಯ ಪೂಜಾರ, ಪ. ಬ. ಕರಿಕಟ್ಟಿ, ಶೇಖರ ವಾಲಿಇಟಗಿ, ಶ್ರೀದೇವಿ ನರಗುoದ, ಸುವಣಾ೯ ಗುಡಸ, ನoದಾ ಬಗಲಿ, ಶಿವಲೀಲಾ ಗೌಡರ, ಸುಧೀರ ರಘಶೆಟ್ಟಿ, ಗುರುಸಿದ್ದ ರೇವಣ್ಣವರ, ಬಾಬಣ್ಣ ತಿಗಡಿ, ಮಹದೇವ ಕೆoಪಿಗೌಡರ ದoಪತಿ ಮುಂತಾದ ಶರಣ ಶರಣೆಯರು, ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
