ಯಡಿಯೂರು:
ಬಸವಧರ್ಮ ಪೀಠ, ರಾಷ್ಟ್ರೀಯ ಬಸವದಳ ಹಾಗೂ ಬಸವ ತತ್ವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಇಷ್ಟಲಿಂಗಯೋಗಿ, ಶಿವಯೋಗಿ ಸಿದ್ಧಲಿಂಗೇಶ್ವರರ ತಪೋಕ್ಷೇತ್ರವಾದ ಕಗ್ಗೇರಿಯಲ್ಲಿ ‘ಬಸವಧರ್ಮ ಸಮ್ಮೇಳನ’ವು ಭಕ್ತಿ, ಶ್ರದ್ಧೆ ಹಾಗೂ ಮಹಾ ಶರಣಾಗತಿಯೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ 4:30ಕ್ಕೆ ಗುರು ಬಸವಾರ್ಚನೆ, ಇಷ್ಟಲಿಂಗಯೋಗ ಅನುಸಂಧಾನ, ವಚನ ಪಠಣ ಹಾಗೂ ಮಹಾಮಂಗಲದೊಂದಿಗೆ ಪ್ರಾರಂಭವಾದವು.
ಬೆಳಿಗ್ಗೆ 9:30ಕ್ಕೆ ಪೂಜ್ಯರುಗಳ ಸಾನಿಧ್ಯದಲ್ಲಿ ಶಿಸ್ತಿನ ಪಥಸಂಚಲನ ನಡೆಯಿತು. ಬೆಳಿಗ್ಗೆ 10:30ಕ್ಕೆ ಬಸವ ಧ್ವಜಾರೋಹಣ ನೆರವೇರಿಸಿ, ಬಸವ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ‘ವಚನ ಅನುಭವ ಗೋಷ್ಠಿ’, ಗುರುಪೂಜೆ ಹಾಗೂ ಸಾಮೂಹಿಕ ಪ್ರಾರ್ಥನಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಸಮ್ಮೇಳನದಲ್ಲಿ ಸಾನಿಧ್ಯ ವಹಿಸಿದ್ದ ಪೂಜ್ಯ ಗಂಗಾದೇವಿ ಮಾತಾಜಿ ಅವರು ಪೂಜ್ಯ ತೋಂಟದ ಶಿವಯೋಗಿಗಳ ಜೀವನ, ಸಾಧನೆ ಹಾಗೂ ಅವರ ಸಂದೇಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಪೂಜ್ಯ ಪ್ರಭುಮಹಾಸ್ವಾಮಿಗಳು ತೋಂಟದಾರ್ಯ ಸಂಸ್ಥಾನಮಠ ಸಂಡೂರು,
ಪೂಜ್ಯ ಚನ್ನಬಸವಾನಂದ ಮಹಾಸ್ವಾಮೀಜಿ ಬಸವಧಾಮ ಶಿವಪುರ,
ಪೂಜ್ಯ ಬಸವರಾಜಪ್ಪ ಶರಣರು ಸಿರಗುಪ್ಪ,
ಪೂಜ್ಯ ದಯಾನಂದ ಮಹಾಸ್ವಾಮಿಗಳು ಬೆಂಗಳೂರು, ಪೂಜ್ಯ ಸಿದ್ಧರಾಮ ಚೈತನ್ಯ ಮಹಾಸ್ವಾಮಿಗಳು ಕುಣಿಗಲ್ಲ, ಪೂಜ್ಯ ಬಸವ ದೇವರು ಬಸವಕಲ್ಯಾಣ ಇವರುಗಳು ವಚನ ಚಿಂತನೆ ನಡೆಸಿಕೊಟ್ಟರು.

ಸಭೆಯಲ್ಲಿ ರಾಷ್ಟ್ರೀಯ ಬಸವದಳದ ರಾಜ್ಯಾಧ್ಯಕ್ಷರಾದ ಕೆ. ವೀರೇಶ ಅವರು ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳನ್ನು ಪೂಜ್ಯರ ಸಮ್ಮುಖದಲ್ಲಿ ಪ್ರಕಟಿಸಿದರು.
ಮಹಾಮಂಗಲದ ನಂತರ ನಡೆದ ಮಹಾದಾಸೋಹದಲ್ಲಿ ಸುಮಾರು 500ಕ್ಕೂ ಹೆಚ್ಚು ಬಸವಭಕ್ತರು ಪ್ರಸಾದ ಸ್ವೀಕರಿಸಿದರು. ಭಕ್ತಾದಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಬಸವಧರ್ಮ ಸಮ್ಮೇಳನವು ಯಶಸ್ಸು ಕಂಡಿತು.

ಸಮ್ಮೇಳನದ ಪ್ರಮುಖ ನಿರ್ಣಯಗಳು
1) ತುಮಕೂರು ವಿಶ್ವವಿದ್ಯಾಲಯದಲ್ಲಿ, ಯಡಿಯೂರು ಸಿದ್ದಲಿಂಗೇಶ್ವರರ ವಚನ ಅಧ್ಯಯನ ಪೀಠ ಪ್ರಾರಂಭಿಸಬೇಕು.
2) ಯಡಿಯೂರು ಸಿದ್ದಲಿಂಗೇಶ್ವರ ತಪೋಕ್ಷೇತ್ರದಲ್ಲಿ, ಅನುಭವ ಮಂಟಪ ಮಾದರಿಯಲ್ಲಿ, ಬಸವ ಮಂಟಪ ನಿರ್ಮಿಸಿ, ವಿಶ್ವಗುರು ಬಸವಣ್ಣನವರ ಪುತ್ಥಳಿ ಹಾಗೂ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಪುತ್ಥಳಿ ಸ್ಥಾಪಿಸಬೇಕು.
