ಬಸವ ಜನ್ಮಸ್ಥಳದ ಮುಂದೆ ಬಸವ ಮ್ಯೂಸಿಯಂ ನಿರ್ಮಾಣ: ಕನ್ನೇರಿ ಸ್ವಾಮಿ

ಬಸವರಾಜ ನಂದಿಹಾಳ
ಬಸವರಾಜ ನಂದಿಹಾಳ

ಒಂದು ಗಂಟೆಯಲ್ಲಿ ಬಸವಣ್ಣನವರ ಜೀವನ, ವಚನಕ್ರಾಂತಿ ಬಗ್ಗೆ ಮಾಹಿತಿ

ಬಸವನಬಾಗೇವಾಡಿ :

ಬಸವಣ್ಣನವರ ಜನ್ಮಸ್ಥಳವಾದ ಬಸವನ ಬಾಗೇವಾಡಿಯಲ್ಲಿ ಬಸವಣ್ಣನವರ ಜೀವನ ಚರಿತ್ರೆ, ವಚನಕ್ರಾಂತಿ ಹಾಗೂ ಇತರ ಶರಣರ ಸಾಧನೆಗಳನ್ನು ಸಾರುವ ಅಪರೂಪದ ‘ಬಸವ ದರ್ಶನ’ ಸಂಗ್ರಹಾಲಯ ನಿರ್ಮಿಸುವ ಸಂಕಲ್ಪ ಹೊಂದಲಾಗಿದೆ ಎಂದು ಕನ್ನೇರಿ ಸ್ವಾಮಿ ಹೇಳಿದರು.

ಪಟ್ಟಣದ ಸಮರ್ಥ ಸದ್ಗುರು ಸಿದ್ಧರಾಮೇಶ್ವರ ಮಹಾರಾಜರ ಮಠದಲ್ಲಿ ಸಿದ್ಧರಾಮೇಶ್ವರ ಮಹಾರಾಜರ 89ನೇ ಸಪ್ತಾಹ ಮಹೋತ್ಸವದ ಅಂಗವಾಗಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವನಬಾಗೇವಾಡಿಯಲ್ಲಿ ಬಸವ ಜನ್ಮಸ್ಮಾರಕದ ಎದುರಿನ ಸಮರ್ಥ ಸಿದ್ದರಾಮೇಶ್ವರ ಮಠವನ್ನು 70ರಿಂದ 75 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಪುನರ್‌ ನಿರ್ಮಿಸಲಾಗುತ್ತಿದೆ.

ಮಠದ ಕೆಳಭಾಗದಲ್ಲಿ ಮಂದಿರವಿದ್ದು ಮೇಲಿನ ಎರಡು ಮಹಡಿಗಳಲ್ಲಿ 30 ಸಾವಿರ ಚದರ ಅಡಿ ಜಾಗದಲ್ಲಿ ಬಸವಣ್ಣನವರ ಜೀವನದರ್ಶನ ಬಿಂಬಿಸುವ ಮೂರ್ತಿಗಳು, ಚಿತ್ರಗಳು ಹಾಗೂ ಡಿಜಿಟಲ್ ಮಾಧ್ಯಮಗಳ ಮೂಲಕ ಸಂಗ್ರಹಾಲಯ ರೂಪಿಸಲಾಗುವುದು.

770 ಅಮರಗಣಂಗಳ ವಚನ ಹಾಗೂ 12ನೇ ಶತಮಾನದ ವಚನಕ್ರಾಂತಿ ಇತಿಹಾಸವನ್ನು ಒಂದು ಗಂಟೆಯಲ್ಲಿಯೇ ಅರಿಯಲು ಸಂಗ್ರಹಾಲಯ ವಿನ್ಯಾಸಗೊಳಿ ಸುವ ಉದ್ದೇಶವಿದೆ ಎಂದುದರು.

ಬಸವೇಶ್ವರರ ಜನ್ಮಸ್ಮಾರಕದ ಮುಂದೆ ಭವ್ಯವಾಗಿ ನಿರ್ಮಾಣವಾಗುತ್ತಿರುವ ಸಿದ್ಧರಾಮೇಶ್ವರ ಮಹಾರಾಜರ ಮಠ ಮುಂದಿನ ದಿನಗಳಲ್ಲಿ ಆಕರ್ಷಣಿಯ ಸ್ಥಳವಾಗಲಿದೆ ಎಂದು ಹೇಳಿದರು.

ಈ ನೆಲವು ಜಗತ್ತಿಗೆ ಹೊಸ ಧರ್ಮವನ್ನು ನೀಡಿದ ಬಸವೇಶ್ವರರಿಗೆ ಜನ್ಮನೀಡಿದ ತಾಣವಾಗಿದೆ. ಈಗಾಗಲೇ ಬಸವೇಶ್ವರರು ಜನಿಸಿದ ಮನೆಯನ್ನು ರಾಜ್ಯ ಸರ್ಕಾರ ಜನ್ಮಸ್ಮಾರಕವಾಗಿ ನಿರ್ಮಿಸಿದೆ. ಬಸವ ಜನ್ಮ ಸ್ಮಾರಕದ ಮುಂಭಾಗವೇ ಸಿದ್ದರಾಮೇಶ್ವರ ಮಹಾರಾಜರ ಮಠವಿದೆ.

‘ಶ್ರೀಮಠದಲ್ಲಿ ನಿರ್ಮಾಣವಾಗುವ ಭಾರತೀಯ ಸಂಸ್ಕೃತಿ ದರ್ಶನ ಹಾಗೂ ಚರಿತ ಪುರುಷ ಬಸವೇಶ್ವರರ ಮೂಜಿಯಂ ವೀಕ್ಷಿಸಲು ಅಸಂಖ್ಯಾತ ಜನರು ಬರಲಿದ್ದಾರೆ. ಕನ್ನೇರಿಯ ಸಿದ್ಧಗಿರಿ, ಕೊಲ್ಲಾಪುರದಂತೆ ಇದೊಂದು ಪ್ರವಾಸಿ ತಾಣವಾಗಲಿದೆ,’ ಎಂದರು.

ಮುಂಬರುವ ದಿನಗಳಲ್ಲಿ ಭಕ್ತರ ಸಹಕಾರದಿಂದ ನವೆಂಬರ್‌ ಇಲ್ಲವೇ ಡಿಸೆಂಬರ್‌ ತಿಂಗಳಲ್ಲಿ ಮಹಾರಾಜರ ನೂತನ ಕಟ್ಟಡ ಉದ್ಘಾಟನೆಯಾಗಲಿದೆ ಎಂದರು.

ಆರ್.ಎಸ್.ಎಸ್. ಕರ್ನಾಟಕ ಉತ್ತರ ಪ್ರಾಂತದ ಗ್ರಾಮವಿಕಾಸ ಪ್ರಮುಖ ದಾಮೋದರಜಿ, ಶ್ರೀಮಠದ ವಿಶ್ವಸ್ಥ ಮಂಡಳಿಯ ಸೇವಕರಾದ ಬಸವರಾಜ ಗಚ್ಚಿನವರ, ಬಸವರಾಜ ನಾಯ್ಕೋಡಿ, ವಿನೂತ್ ಕಲ್ಲೂರ, ಶಿವಾನಂದ ತೋಳನೂರ, ಎಸ್.ಬಿ.ಚಿಂಚೊಳ್ಳಿ ಹಾಗೂ ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
6 Comments
  • ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ ಶರಣು ಶರಣಾರ್ಥಿ ಶಾಖಾ

  • ಅಲ್ಲಿ ಬಸವಣ್ಣನವರಿಗೆ ಜನಿವಾರ ಹಾಕದಿದ್ದರೆ ಸಾಕು 🤔

  • ಬಸವಣ್ಣನವರ ಮತ್ತು ಶರಣರ ಇತಿಹಾಸ ತಿರುಚುವ ಕೆಲಸವನ್ನೇ ಮಾಡುತ್ತಾನೆ ಕನ್ಹೆರಿ,RSS ನವರನ್ನು ಸೇರಿಸಿ ಸಭೆ ಮಾಡಿದ್ದಾನೆ ಅಂದ್ರೆ ಬಸವಣ್ಣನವರು ಬಾಲಕರಿದ್ದಾಗ ತಾರತಮ್ಯದ ಜನಿವಾರ ತಿರಸ್ಕರಿಸಲಿಲ್ಲ ಎಂದೇ ಸ್ಮಾರಕ ಮಾಡುತ್ತಾರೆ.

  • ಬಸವಣ್ಣ ಧರ್ಮ ಸ್ಥಾಪಕ ಎಂದು ಹೇಳಿದ್ದು ಸ್ವಾಗತ್ ಇದನ್ನು ನಿಜ ಮಾಡಿ ತೋರಿದರೆ ಅವರಿಗೆ ತುಂಬಾ ಚಿರಋಣಿ ಆಗುವೆ 👏🏻ಧನ್ಯವಾದಗಳು 🙏🏻

  • ಕಣ್ಣೇರಿ ಸ್ವಾಮಿ, ಮೊದಲು ಬಸವ ತತ್ವ ಅಧ್ಯಯನ ಮಾಡಿ ಅರ್ಥ ಮಾಡಿಕೊಂಡು, ಮೊದಲು ತಾನು ಕೊರಳಲ್ಲಿ ಇಷ್ಟಲಿಂಗ, ಹಣೆಯ ಮೇಲೆ ವಿಭೂತಿ ಹಚ್ಚಿಕೊಳ್ಳುವುದು ಕಲಿತು ಕೊಳ್ಳಲಿ ,
    ಬರಿ ಹಣದ ಅಹಂಕಾರ ದಿಂದಾ ಮತ್ತು RSS ಬಿಜೆಪಿ ಅವರ ಗುಲಾಮ ರಾಗಿ ತುತಂತ್ರ ಮಾಡಲು ಬರುತ್ತಿದ್ದಾನೆ ,, ಬಸವಾದಿ ಶರಣರ ವಿಚಾರಗಳಿಗೆ, ವಿರೋಧ ವಾಗಿ ಮಾಡಿ ಜನರಲ್ಲಿ ತಪ್ಪು ದಾರಿಗೆ ಹಾಕುತ್ತಿದ್ದಾನೆ ನೋಡಿ, ಜನರು ಜಾಗೃತ ರಾಗಬೇಕಾಗಿದೆ , ತತ್ವ ಸಿದ್ಧಾಂತದ ವೈಜ್ಞಾನಿಕ ವೈಚಾರಿಕ ಲಿಂಗಾಯತ ಧರ್ಮ ವಚನ ಸಾಹಿತ್ಯ ರಕ್ಷಣೆ ಮಾಡಿಕೊಳ್ಳಬೇಕಾಗಿದೆ ,
    ಶರಣು ಶರಣಾರ್ಥಿಗಳು

  • ವಿಶ್ವ ಗುರು ಬಸವಣ್ಣ ಬ್ರಾಹ್ಮಣ ತ್ವ.ದ ಜನಿವಾರ ,ಚಾತುರ್ವಣ ಪದ್ದತಿ ತೊರೆದು ದುಡಿಯುವ ವರ್ಗದ ಜನರಿಗಾಗಿ ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ದಾರೆ. ದೇವರನ್ನು ತನ್ನಲ್ಲೇ ಕಾಣುವ ಸಾಧನವಾಗಿ ಇಷ್ಟ ಲಿಂಗ ಅವಿ ಕಂಡು ಹಿಡಿದು ಲಿಂಗಾಯತರ ಕೈಗೆ ಕೊಟ್ಟಿದ್ದಾರೆ. ಕನೇರಿ ಸ್ವಾಮೀಜಿಯವರು ಮೊದಲು ವಚನ ಸಾಹಿತ್ಯ ಸರಿಯಾಗಿ ಅರಿತು ಅದಕ್ಕೆ ಅಪಚಾರ ಆಗದಂತೆ ಮ್ಯೂಸಿಯಮ್ ಮಾಡಲು ಮುಂದಾಗಲಿ. ಹಿಂದುತ್ವದ ಛಾಯೆ ತರುವುದು ಬೇಡ.

Leave a Reply

Your email address will not be published. Required fields are marked *