ಆಳಂದ, ಮೈಸೂರಿನಲ್ಲಿ ರವಿ ಹಂಜ್, ವಿಶ್ವೇಶ್ವರ ಭಟ್ಟ ವಿರುದ್ಧ ಪೊಲೀಸ್ ದೂರು

ಬಸವ ಮೀಡಿಯಾ
ಬಸವ ಮೀಡಿಯಾ

ಆಳಂದ/ಮೈಸೂರು

ಕರ್ನಾಟಕದ ಸಾಂಸ್ಕೃತಿಕ ನಾಯಕರಾದ ವಿಶ್ವಗುರು ಬಸವಣ್ಣನವರ ಬಗ್ಗೆ ಹೀನಾಯವಾದ ಹೇಳಿಕೆ ಕೊಟ್ಟಿರುವ ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಳಂದ ತೋಂಟದಾರ್ಯ ಅನುಭಾವ ಮಂಟಪದ ಪೂಜ್ಯ ಕೋರಣೇಶ್ವರ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಆಳಂದ ಸರ್ಕಲ್ ಇನ್ಸ್ಪೆಕ್ಟರ್ ಅವರಿಗೆ ನೀಡಿದ ದೂರು ಪತ್ರದಲ್ಲಿ, ವಿಶ್ವೇಶ್ವರ ಭಟ್ ಅವರ ಸಂಪಾದಕತ್ವದಲ್ಲಿರುವ ವಿಶ್ವವಾಣಿಗೆ ಹಂಜ್ ನೀಡಿರುವ ಸಂದರ್ಶನದಲ್ಲಿ 0.17 ನಿಮಿಷಗಳಿಂದ 0.49 ನಿಮಿಷಗಳವರೆಗೆ ವ್ಯಕ್ತಪಡಿಸಿರುವ ವಿಚಾರಗಳು ಇಂತಿವೆ:

“ವಚನಗಳೇ ಧರ್ಮಗ್ರಂಥಗಳು ಅಂದ್ರೆ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಅಂತ ವಚನ ಇದೆ ಬಸವಣ್ಣದು. ನೀವು ಐತಿಹಾಸಿಕವಾಗಿ ನೋಡಿದರೆ ಬಸವಣ್ಣ ಬಿಜ್ಜಳನ ಖಜಾನೆಯನ್ನು ಬಳಸಿ ಜಂಗಮರಿಗೆ ದಾಸೋಹಕ್ಕೆ ಬಳಸಿದ್ದಾರೆ. ಕಳಬೇಡ ಅನ್ನೋದಕ್ಕೆ ವೈರುದ್ಯ ಅದು. ಕೊಲಬೇಡ ಅಂತಾರೆ, ಬಿಜ್ಜಳನಿಗೆ ಕೊಲ್ಲಿಸಿದ್ದಾರೆ,” ಎಂದು ಹೇಳಿದ್ದಾರೆ.

ಈ ರೀತಿಯ ಅನುಚಿತ ಹೇಳಿಕೆ ಕೊಡುವುದರ ಮೂಲಕ ಬಸವಣ್ಣನವರ ಬಗೆಗೆ ಸಾರ್ವಜನಿಕವಾಗಿ ತೀವ್ರತರ ಅವಹೇಳನ ಮಾಡಿದ್ದಾರೆ. ಇದರಿಂದ ಲಿಂಗಾಯತರ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿದೆ. ಆದುದ್ದರಿಂದ ಸಂದರ್ಶನವನ್ನು ಪರಿಶೀಲಿಸಿ ಚಾನಲ್‌ನ ವ್ಯವಸ್ಥಾಪಕರು ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ರವಿ ಹಂಜ್ ಅವರ ಆಕ್ಷೇಪವಾದ ವಿಷಯಗಳನ್ನು ತೆಗೆಸುವುದಲ್ಲದೆ, ಕರ್ನಾಟಕದ ಜನತೆಯ ಸಾರ್ವಜನಿಕ ಕ್ಷಮೆ ಕೋರುವಂತೆ ಕ್ರಮ ಜರುಗಿಸಬೇಕೆಂದು ವಿನಂತಿಸುತ್ತೇವೆ.

ಹಾಗೂ ಮುಂದಿನ ದಿನಗಳಲ್ಲಿ ಇಂತಹ ಪ್ರಮಾದಗಳು ಜರುಗದಂತೆ ಎಚ್ಚರವಹಿಸಲು ಸೂಕ್ತ ನಿರ್ದೇಶನ ನೀಡಬೇಕು ಮತ್ತು ಈ ವಿವಾದಕ್ಕೆ ಕಾರಣರಾದ ವಿಶ್ವವಾಣಿ ಟಿ.ವಿ ಮುಖ್ಯಸ್ಥ ವಿಶ್ವೇಶ್ವರ ಭಟ್ ಅವರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕೆಂದು ಸ್ವಾಮೀಜಿ ಮತ್ತು ಅನುಭವ ಮಂಟಪದ ಬಸವ ಭಕ್ತರು ಸರ್ಕಾರವನ್ನು ಆಗ್ರಹಿಸಿದ್ದಾರೆ.

“ಇವತ್ತು FIR ಪ್ರತಿ ಕೊಡುತ್ತೇವೆಂದು ಪೊಲೀಸರು ಹೇಳಿದ್ದಾರೆ,” ಎಂದು ಕೋರಣೇಶ್ವರ ಸ್ವಾಮೀಜಿ ಬಸವ ಮೀಡಿಯಾಗೆ ತಿಳಿಸಿದರು.

ಮೈಸೂರು

ರವಿ ಹಂಜ ಮತ್ತು ವಿಶ್ವೇಶ್ವರ ಭಟ್ಟರ ಮೇಲೆ ಕ್ರಮ ತೆಗೆದುಕೊಳ್ಳಲು ಬುಧವಾರ ಸಂಜೆ ನಗರದ ಕೆ.ಆರ್. ಠಾಣೆಯಲ್ಲಿ ದೂರು ನೀಡಲಾಯಿತು.

ರಾಷ್ಟ್ರೀಯ ವೀರಗಣಚಾರ ಸಂಘದ ಜಿಲ್ಲಾ ಘಟಕದ ಪ್ರಮುಖರಾದ ಸದಾನಂದ ಮೂರ್ತಿಯವರ ನೇತೃತ್ವದಲ್ಲಿ ನೀಡಿದ ದೂರಿಗೆ ಶಿವಮಲ್ಲಪ್ಪ, ಸಿದ್ದಲಿಂಗಸ್ವಾಮಿ ಸಿ.ಜಿ., ಗಂಗಧಾರಸ್ವಾಮಿ ಹೆಚ್.ಬಿ., ಸಿದ್ದಲಿಂಗಸ್ವಾಮಿ, ವಿ. ಶಿವರುದ್ರಪ್ಪ (ಬಸವಭಾರತ ಪತ್ರಿಕೆ) ಮತ್ತು ಎಸ್ .ಎಂ ಪ್ರಸನ್ನ ಸಹಿ ಹಾಕಿದ್ದಾರೆ.

ಇದೇ ರೀತಿ ಕರ್ನಾಟಕದಾದ್ಯಂತ ಬಸವತತ್ವ ಪ್ರಚಾರಕರು ತಮ್ಮ ತಮ್ಮ ಹತ್ತಿರದ ಪೋಲಿಸ್ ಸ್ಟೇಷನ್ ಗೆ ದೂರು ಕೊಡಬೇಕಾಗಿ ಪ್ರಸನ್ನ. ಎಸ್. ಎಂ ವಿನಂತಿಸಿಕೊಂಡಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
2 Comments
  • ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ ರವಿ ಹಂಜ ಮತ್ತು ವಿಶ್ವೇಶ್ವರ ಭಟ್ ನನ್ನ ಒದ್ದು ಒಳಗೆ ಹಾಕು ಬೇಕು

  • ಪ್ರತಿ ತಾಲೂಕಿನಿಂದಲು, ರಾಜ್ಯದ ಪ್ರತಿ ಪೋಲೀಸ್ ಠಾಣೆಯಲ್ಲಿ ಅವನ ವಿರುದ್ದ ದೂರುಗಳು ದಾಖಲಾಗಲಿ..ಪ್ರತಿ ಲಿಂಗಾಯತನು ವಿದಾನಸೌದಕ್ಜೆ ಪತ್ರ ಚಳುವಳು ಆರಂಭವಾಗಲ. ಸರಕಾರದ ಕಿವಿಗೆ ಮುಟ್ಟಿ ಪುಸ್ತಕ ಬ್ಯಾನಾಗಲಿ.

Leave a Reply

Your email address will not be published. Required fields are marked *