ಬಸವಣ್ಣ, ಲಿಂಗಾಯತ ನಿಂದಕರನ್ನು ಸುಮ್ಮನೆ ಬಿಡಬಾರದು: ನಾರಾಯಣ ಗೌಡ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಬಸವಣ್ಣನವರನ್ನು ನಿಂದಿಸಿರುವ ವಿಶ್ವವಾಣಿ ಅಂಕಣಕಾರ ರವಿ ಹಂಜ್ ಮತ್ತು ಆತನ ಹಿಂದಿರುವವರನ್ನು ಶಿಕ್ಷಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ ಎ ನಾರಾಯಣ ಗೌಡ ಆಗ್ರಹಿಸಿದ್ದಾರೆ.

“ಪೋಲೀಸರು ಮುಲಾಜಿಲ್ಲದೆ ಈ ನಿಕೃಷ್ಟ ಹುಳವನ್ನು ಜೈಲಿಗೆ ಕಳುಹಿಸಬೇಕು. ಈತನ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಈತನ ಬೆನ್ನ ಹಿಂದೆ ನಿಂತು ಕುಮ್ಮಕ್ಕು ಕೊಟ್ಟ ಮುಖೇಡಿಗಳನ್ನೂ ಕಾನೂನಿನ ಅಡಿಯಲ್ಲಿ ಶಿಕ್ಷಿಸಬೇಕು ಎಂದು ಒತ್ತಾಯಿಸುತ್ತೇನೆ,” ಎಂದು ಹೇಳಿದ್ದಾರೆ.

ಶನಿವಾರ ನೀಡಿರುವ ಪ್ರಕಟಣೆಯಲ್ಲಿ “ರವಿ ಹಂಜ್ ರೀತಿಯ ಸಾಂಸ್ಕೃತಿಕ ಭಯೋತ್ಪಾದಕರು ಆಗಾಗ ಸಮಾಜದ ಸ್ವಾಸ್ತ್ಯವನ್ನು ಹಾಳುಗೆಡವುತ್ತಾರೆ. ಇಂಥವರು ಸಮಾಜಕ್ಕೆ ಅಂಟಿದ ಕಳಂಕಗಳು. ನೆಮ್ಮದಿಯ ನಾಡಿನಲ್ಲಿ ಸಮುದಾಯಗಳ ನಡುವೆ ಸಂಘರ್ಷ ಹುಟ್ಟು ಹಾಕುವ ಇಂಥ ರೋಗಿಷ್ಟ ಮನಸ್ಸಿನವರಿಗೆ ತಕ್ಕ ಪಾಠ ಕಲಿಸಬೇಕು.

ಕರ್ನಾಟಕ ಕಂಡ ಮಹಾ ಮಾನವತಾವಾದಿ, ದಾರ್ಶನಿಕ, ಸಾಮಾಜಿಕ ಕ್ರಾಂತಿಯ ಹರಿಕಾರ, ಭಕ್ತಿ ಭಂಡಾರಿ ಬಸವಣ್ಣನವರನ್ನು ಕೀಳಾಗಿ ನಿಂದಿಸಿದ್ದ ರವಿ ಹಂಜ್ ಎಂಬಾತನನ್ನು ಪೊಲೀಸರು ಬಂಧಿಸಿರುವುದು ಸ್ವಾಗತಾರ್ಹ. ಈತ ಮಾಡಿರುವುದು ಭಯೋತ್ಪಾದನೆಗೆ ಸಮನಾದ ಕೃತ್ಯ. ಹೀಗಾಗಿ ಈತನ ಮೇಲೆ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ.

ಅಭಿವ್ಯಕ್ತಿ ಸ್ವಾತಂತ್ರ್ಯ ದ ಹೆಸರಿನಲ್ಲಿ ಕರ್ನಾಟಕದ ಮಹಚೇತನಗಳಿಗೆ ಕೆಸರು ಎರಚುವುದನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅದರಲ್ಲೂ ಇಡೀ ಕನ್ನಡ ಸಮುದಾಯಕ್ಕೆ ನೈತಿಕ ನಡಾವಳಿಯ ಸೂತ್ರವನ್ನೇ ರೂಪಿಸಿಕೊಟ್ಟ, ಜಗತ್ತಿಗೆ ವಿಶ್ವ ಮಾನವತೆಯ ತತ್ವವನ್ನು ಕೊಟ್ಟ ಬಸವಣ್ಣವರನ್ನು ಕೊಲೆಗಾರ, ಕಳ್ಳ ಎಂದು ನಿಂದಿಸುವವರನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ. ಜಗತ್ತಿನ ಶ್ರೇಷ್ಠ ಪರಂಪರೆಗಳಲ್ಲಿ ಒಂದಾದ ಲಿಂಗಾಯತವನ್ನು ಲಿಂಗಾಹತ ಎಂದು ಕರೆಯುವುದು ಈತನ ಹೀನಾಯ ಮನಸ್ಥಿತಿಯನ್ನು ತೋರಿಸುತ್ತದೆ.

ಬಸವಣ್ಣನವರು ನಮ್ಮ ಹೆಮ್ಮೆ. ನಿಸ್ಸಂಶಯವಾಗಿ ಅವರು ಕರ್ನಾಟಕದ ಸಾಂಸ್ಕೃತಿಕ ನಾಯಕ. ಅವರು ನಡೆಸಿದ ಸಾಮಾಜಿಕ ಕ್ರಾಂತಿ ನಮಗೆ ಸ್ಫೂರ್ತಿ. ಕರ್ನಾಟಕದ ಸಾಮಾಜಿಕ ಬದುಕನ್ನು ಬದಲಿಸಿ, ಸಮಾನತೆಯ ಬೀಜ ಬಿತ್ತಿದ ಬಸವಣ್ಣನವರನ್ನು ದ್ವೇಷಿಸುವ ಜಾತಿವಾದಿಗಳು, ಯಥಾಸ್ಥಿತಿವಾದಿಗಳು 12ನೇ ಶತಮಾನದಲ್ಲೂ ಇದ್ದರು, ಈ ಆಧುನಿಕ ಕಾಲದಲ್ಲೂ ಇದ್ದಾರೆ. ಈ ಕ್ಷುದ್ರ ಜೀವಿಗಳು ಬಸವಣ್ಣನವರು ಪ್ರತಿಪಾದಿಸಿದ ತತ್ವಗಳ ವಿರೋಧಿಗಳು. ಇವರ ಮಾತುಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವವರೂ ಸಹ ಸಮಾಜ ದ್ರೋಹಿಗಳು,” ಎಂದು ಹೇಳಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh

Share This Article
3 Comments
  • ಒಳ್ಳೆಯ ಸಂದೇಶ ರವಾನಿಸಿದ್ದಿರಿ ಒಳ್ಳೆಯ ವಿಚಾರ ಜೈ ಬಸವ.ನಾರಯಣ ಗೌಡ್ರೆ ತಮ್ಮ ಸಂಘಟನೆ ದೊಡ್ಡದು ಇದೆ. ತಾವು ಪ್ರತಿಭಟನೆ ಹಮ್ಮಿಕೊಳ್ಳಬೇಕು.ತಮಗೆ ಅನಂತ ವಂದನೆಗಳು

  • ಒಳ್ಳೆಯ ಸಂದೇಶ ಕೊಟ್ಟಿದ್ದಾರೆ ನಾರಾಯಣಗೌಡರಿಗೆ ಶರಣು ಶರಣಾರ್ಥಿಗಳು 🙏🙏🙏 💐💐 ಬಸವಣ್ಣನವರು ಇಡೀ ನಾಡಿನಲ್ಲಿ ನಾಡಿನಾಚೆಗೂ ಎಲ್ಲಾ ಸಮಾಜದವರೆಗೂ ಕಾಯಕವನ್ನು ಕಲಿಸಿ ಕಾಯಕದಿಂದ ಮುಕ್ತಿ, ಕಾಯಕದಿಂದ ಶಕ್ತಿ, ಕಾಯಕ ದಿಂದಲೇ ಕೈಲಾಸ ಕಾಣಿರಿ ಎಂದು ಸಾರಿದವರು ಬಸವಣ್ಣ ನವರು. ಹಾಗಾಗಿ ಎಲ್ಲಾ ಸಮಾಜದ ಬಂಧುಗಳೇ ಈ ಅನಾಚಾರದ ವಿರುದ್ಧ ಧ್ವನಿ ಎತ್ತಿ. 🙏🙏🙏

Leave a Reply

Your email address will not be published. Required fields are marked *