ವಿಜಯೇಂದ್ರ ಹೇಳಿಕೆಗೆ ತಿರುಗೇಟು: ಆರ್‌ಎಸ್‌ಎಸ್ ಹೇಳುವುದು ರಾಷ್ಟ್ರ ರಕ್ಷಣೆ, ಮಾಡುವುದು ವೈದಿಕ ಧರ್ಮ ರಕ್ಷಣೆ
ಬೆಂಗಳೂರು
“ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮಾದರಿಯಲ್ಲಿ ಇನ್ನು ಮುಂದೆ ಬಸವಣ್ಣನ ಮಕ್ಕಳು ಲಿಂಗಾಯತ ಧರ್ಮ ಸ್ವಯಂಸೇವಕ ಸಂಘ (LSS) ಕಟ್ಟಬೇಕು,” ಎಂದು ಬಸವ ಧರ್ಮ ಆಧ್ಯಾತ್ಮಿಕ ಪೀಠದ ಪೂಜ್ಯ ದಯಾನಂದ ಸ್ವಾಮೀಜಿ ಭಾನುವಾರ ಕರೆ ಕೊಟ್ಟರು.
ನಗರದಲ್ಲಿ ರವಿ ಹಂಜ್, ವಿಶ್ವೇಶ್ವರ ಭಟ್ಟ ವಿರುದ್ಧ ನಡೆದ ಬಸವ ಸಂಘಟನೆಗಳ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು.
“ಅವರು ಹೆಂಗೆ ಆರ್‌ಎಸ್‌ಎಸ್ ಕಟ್ಟಿದ್ದಾರೆ, ಹಾಗೆಯೆ ನಾವು ಎಲ್ಎಸ್‌ಎಸ್ ಕಟ್ಟಬೇಕು. ಹಳ್ಳಿ ಹಳ್ಳಿಗಳಲ್ಲಿ ಬಸವಣ್ಣನ ಮಕ್ಕಳು, ಲಿಂಗಾಯತ ಧರ್ಮೀಯರು ಸ್ವಯಂಸೇವಕರಾಗಿ ಮುಂದೆ ಬನ್ನಿ.
ಲಿಂಗಾಯತ ಧರ್ಮದ ವಿಶ್ವತತ್ವ ಒಪ್ಪುವ ಲಿಂಗಾಯತೇತರರು – ಯಾವುದೇ ಧರ್ಮ, ಜಾತಿಯವರಾಗಿರಲಿ – ಇದಕ್ಕೆ ಬೆಂಬಲ ನೀಡಬೇಕು. ದೇಜಗೌ, ಕುವೆಂಪು, ಅಂಬೇಡ್ಕರ್ ಇವರೆಲ್ಲರೂ ಬಸವಣ್ಣನವರನ್ನ ಅಪ್ಪಿಕೊಂಡಿದ್ದಾರೆ,” ಎಂದು ಸ್ವಾಮೀಜಿ ಹೇಳಿದರು.
ವಿಜಯೇಂದ್ರ ಹೇಳಿಕೆಗೆ ತಿರುಗೇಟು
ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಮಾದಾರ್ ಬಸವ ನಿಂದಕ ರವಿ ಹಂಜ್ ಹಿಂದೆ ಆರ್‌ಎಸ್‌ಎಸ್‌ನ ಕೈವಾಡವಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಅದನ್ನು ಟೀಕಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ರಾಷ್ಟ್ರ ರಕ್ಷಣೆಯ ಜೊತೆ ಆರ್‌ಎಸ್‌ಎಸ್ ಬಸವ ತತ್ವ ಪಾಲಿಸುತ್ತಿದೆ ಎಂದು ಹೇಳಿದ್ದರು.
ವಿಜಯೇಂದ್ರರಿಗೆ ತಿರುಗೇಟು ನೀಡಿದ ದಯಾನಂದ ಸ್ವಾಮೀಜಿ, “ಆರ್‌ಎಸ್‌ಎಸ್ ಹೇಳೋದು ರಾಷ್ಟ್ರ ರಕ್ಷಣೆ, ಆದರೆ ಮಾಡ್ತಾ ಇರೋದು ವೈದಿಕ ಧರ್ಮ ರಕ್ಷಣೆ. ಅಲ್ಲಿ ಅಯೋಧ್ಯೆಯಲ್ಲಿ ರಾಮನಿಗೆ ಅಪಚಾರವಾದರೆ ಹೋರಾಡ್ತೀರಾ, ಇಲ್ಲಿ ಬಸವಣ್ಣನಿಗೆ ಅಪಚಾರವಾದರೆ ಯಾಕೆ ಆರ್‌ಎಸ್‌ಎಸ್, ವಿ.ಎಚ್.ಪಿ ಮೌನವಾಗಿ ಕುಳಿತ್ತಿದ್ದೀರಾ?” ಎಂದು ಪ್ರಶ್ನಿಸಿದರು.
“12ನೇ ಶತಮಾನದಿಂದ ನಮ್ಮ ಧರ್ಮದ ಅಸ್ಮಿತೆ, ಅಸ್ತಿತ್ವ ನಾಶ ಮಾಡಲು ಪಿತೂರಿ ನಡೆದುಕೊಂಡು ಬಂದಿದೆ. ಸಂಘ ಪರಿವಾರದವರು ಹಿಂದೆ ನಿಂತುಕೊಂಡು ಆತ ಆಡ್ತಾ ಇದ್ದೀರಾ, ಹೊರಗೆ ಬನ್ನಿ. ನಿಮ್ಮ ನಾಟಕ ಬಹಳ ದಿನ ನಡೆಯೋದಿಲ್ಲ,” ಎಂದು ಎಚ್ಚರಿಸಿದರು.
ಕನ್ನೇರಿ ಸ್ವಾಮಿ ಬಸವ ದ್ರೋಹಿ
ಹಂಜ್ ಮೇಲೆ ಇಷ್ಟೊಂದು ಗಮನ ಕೊಡೊ ಅಗತ್ಯವಿರಲಿಲ್ಲ. ಆದರೆ ಆತನ ಹಿಂದೆ ಇರೋ ದುಷ್ಟ ಶಕ್ತಿಗಳಿಗೆ ಎಚ್ಚರಿಕೆ ನೀಡಬೇಕು. ಇಂತಹ ನೂರಾರು ಹಂಜರನ್ನು ಹುಟ್ಟುಹಾಕುವಂತಹ ರಕ್ತಬೀಜಾಸುರ ಸಂತತಿ ಅವರು.
ರವಿ ಹಂಜ್, ಭಟ್ಟರನ್ನು ಕನ್ನೇರಿ ಸ್ವಾಮಿ ಖಂಡಿಸಿಲ್ಲ. ಬಸವಾದಿ ಶರಣರ ಹೆಸರಿನ ಸಮಾವೇಶ ಮಾಡುತ್ತ ಬಸವ ಭಕ್ತ ಅಂತ ತೋರಿಸಿಕೊಳ್ಳುತ್ತಾ ಇರುವವರು ಬಸವಣ್ಣನವರ ತೇಜೋವಧೆಯಾದರೂ ಒಂದು ಹೇಳಿಕೆ ಕೊಟ್ಟಿಲ್ಲ. ಆಯ್ಯಪ್ಪನೂ ಕೂಡ ಬಸವ ದ್ರೋಹಿ, ಬಸವ ದ್ವೇಷಿ.
ಬುಡಕ್ಕೆ ಕೈ ಹಾಕುತ್ತೇವೆ
“ಬೌದ್ಧ, ಜೈನ, ಸಿಖ್ ಧರ್ಮಗಳಂತೆ ಲಿಂಗಾಯತರೂ ಸಾಂವಿಧಾನಿಕ ಮಾನ್ಯತೆ ಪಡೆದುಕೊಳ್ಳುತ್ತಾರೆ. ಅದನ್ನು ವಿರೋಧಿಸಿದರೆ ನಿಮ್ಮ ಬುಡಕ್ಕೆ ಕೈ ಹಾಕುವ ತೀರ್ಮಾನ ನಾವು ಲಿಂಗಾಯತರು ತೆಗೆದುಕೊಳ್ಳುತ್ತಾ ಇದ್ದೇವೆ.
ಎಲ್ಲಾ ಲಿಂಗಾಯತರು, ಸ್ವಾಮಿಗಳು, ಕಾರ್ಯಕರ್ತರು, ಮಹಿಳೆಯರು, ಮಕ್ಕಳು ಹಳ್ಳಿ ಹಳ್ಳಿಗಳಲ್ಲಿ ಬೀದಿಗಿಳಿಯುತ್ತೇವೆ,” ಎಂದು ಎಚ್ಚರಿಕೆ ನೀಡಿದರು.

ರವಿ ಹಂಜನ ವೇದಿಕೆಯ ಎತ್ತರದ ಸ್ಥಾನದಲ್ಲಿ ಕುಳಿತ ಮಹಾ ನಾಲಾಯಕರ ದಂಡು, ಪಟ್ಟಭದ್ರರ ಪಟಾಲಂ ಈ ಶಂಕರ ಬಿದರಿ, ಮನುಬಳಿಗಾರ ಅಲ್ಲ ಅವ್ನು ಮನುಸ್ಮೃತಿ ಬಳಿಗಾರ್, ಕನ್ನಡ ದ್ರೋಹಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬೇರೆ ಆಗಿದ್ದವ ಈತ, ವಚನ ಸಾಹಿತ್ಯವನ್ನು ಹಿಯಾಳಿಸಿ ಮಾತನಾಡುತ್ತದ್ದ ನೀಚನ ವೇದಿಕೆ ಮೇಲೆ ಕುಳಿತು ತಲೆ ಅಲ್ಲಾಡಿಸುತ್ತಿದ್ದ ಗೌಲೆತ್ತು ಈತ, ವಚನ ಸಾಹಿತ್ಯ ದ್ರೋಹಿ ಈತ, ವಿಷ ಭಟ್ಟ ನಾಚಿಕೆ ಮಾನ ಮರ್ಯಾದೆ ಬಿಟ್ಟು ಹೊಟ್ಟೆ ತುಂಬಿಸಿಕೊಂಡು ಬದುಕು ಮಾಡುತ್ತಿರುವ ಪತ್ರಿಕಾ ರಂಗದಲ್ಲಿ ಕಪ್ಪು ಪಟ್ಟಿಗೆ ಸೇರಿದ ನಾಲಾಯಕ್ ಅನ್ನೋದು ಎಲ್ಲರಿಗೂ ಗೊತ್ತು.