ನಂಜನಗೂಡು: ರವಿ ಹಂಜ್, ಭಟ್ಟರ ವಿರುದ್ಧ ಬಸವಭಕ್ತರ ಆಕ್ರೋಶ

ಬಿ. ಚನ್ನಪ್ಪ
ಬಿ. ಚನ್ನಪ್ಪ

ನಂಜನಗೂಡು :

ಮಿನಿ ವಿಧಾನಸೌಧದ ಮುಂದೆ ಬಸವಪರ ಸಂಘಟನೆಗಳು ವಿಶ್ವಗುರು ಬಸವಣ್ಣನ ವಿರುದ್ಧ ಅಸತ್ಯ ಹಾಗೂ ಅವಹೇಳನಕಾರಿ ಹೇಳಿಕೆ ಮತ್ತು ಲಿಂಗಾಯತ ಧರ್ಮ ಸಂಸ್ಕೃತಿಯನ್ನು ದಾರಿ ತಪ್ಪಿಸುವ ಉದ್ಧೇಶದಿಂದ ಬರೆದಿರುವ ಬಸವ ಮಂಟಪ ಕೃತಿಯ ವಿರುದ್ಧ ಬೃಹತ್ ಪ್ರತಿಭಟನೆ ಮಾಡಿ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿ ಸರ್ಕಾರವು ಕೂಡಲೇ ಕಾನೂನಾತ್ಮಕ ಕ್ರಮವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.

ಕಾರ್ಯಕ್ರಮದಲ್ಲಿ ಬಸವತತ್ವ ಚಿಂತಕ, ಸಾಹಿತಿ ಹಲ್ಲರೆ ಶಿವಬುದ್ಧಿ ಅವರು ಮಾತನಾಡಿ, ರವಿ ಹಂಜ್ ಕಿಡಿಗೇಡಿಯಾಗಿದ್ದಾನೆ. ಅವನಿಗೆ ಶರಣರ ಇತಿಹಾಸವೇ ಗೊತ್ತಿಲ್ಲ, ಬಸವಣ್ಣನವರ ಅಧ್ಯಯನ ಕೂಡಾ ಮಾಡಿಲ್ಲ ಇಂತಹ ಅವಿವೇಕಿಯು ಜಗಜ್ಯೋತಿ ಬಸವೇಶ್ವರರ ಬಗ್ಗೆ ಮಾತನಾಡಿರುವುದು ಖಂಡನೀಯ ಹಾಗೂ ಇವನಿಗೆ ಸಹಕಾರ ನೀಡುತ್ತಿರುವ ವಿಶ್ವೇಶ್ವರ ಭಟ್ ತಲೆಹಿಡುಕನಂತೆ ಹಂಜ್ ಗೆ ಸಪೋರ್ಟ್ ಆಗಿ ನಿಂತಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಲ್ಯಾಣದಲ್ಲಿ ಶರಣರಿಗಾಗಿ ಶಿವನಿದಿ ಸ್ಥಾಪನೆಯಾಗಿತ್ತು. ಬಸವಣ್ಣನವರ ಸ್ವಚ್ಚ ಆಡಳಿತವನ್ನು ನೋಡಿ ಹಲವು ರಾಜ್ಯಗಳು, ವಿದೇಶಗಳಿಂದಾನೂ ಕೂಡಾ ಕಲ್ಯಾಣಕ್ಕೆ ಬಂದು ಶರಣತ್ವವನ್ನು ಪಡೆದು ಲಿಂಗಾಯತರಾಗಿದ್ದಾರೆ. ಈ ಯಾವ ವಿಚಾರವನ್ನು ತಿಳಿಯದೆ ಹಂಜ್ ಅವಿವೇಕಿತನವನ್ನು ಮಾಡಿದ್ದಾನೆ. ಆದ್ದರಿಂದ ಇವನನ್ನು ಗಡಿಪಾರು ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಸವ ಕೀರ್ತಿ, ಮಕ್ಕಳ ಮನೆ ಸೋಮಶೇಖರ, ಶರಣ ಸಂಸ್ಕೃತಿ ಪ್ರಚಾರ ವೇದಿಕೆಯ ಕಾ.ಸು. ನಂಜಪ್ಪನವರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನಿರ್ದೇಶಕ ಗುತ್ತಿಗೆದಾರ ಹುಲ್ಲಹಳ್ಳಿ ಮಾದಪ್ಪ ಅವರುಗಳು ಮಾತನಾಡಿ, ಬಸವಣ್ಣ ಸ್ತ್ರೀ ಕುಲೋದ್ಧಾರಕ, ಸಮಾನತೆಯ ಮಾತಿಗೆ ಮೌಲ್ಯ ತಂದುಕೊಟ್ಟ ಮಹಾಪುರುಷ, ಮಹಾ ಮಾನವತಾವಾದಿ.

ಜಗತ್ತಿಗೆ ಮೊಟ್ಟಮೊದಲ ಬಾರಿಗೆ ಸಂಸತ್ತಿನ ವಿನ್ಯಾಸದ ಬಗ್ಗೆ ಅಡಿಪಾಯ ಹಾಕಿಕೊಟ್ಟ ಮೂಲ ಕರ್ತೃ, ಸಾಕ್ಷರತಾ ಆಂದೋಲನದ ಮೊಟ್ಟ ಮೊದಲ ಶಿಕ್ಷಕ, ನೊಂದವರ, ಬಿದ್ದವರ ಮೇಲೆತ್ತಿದ ಮಹಾ ಚೇತನ ಇಂತವರ ಬಗ್ಗೆ ಅವಹೇಳನವಾಗಿ ಮಾತನಾಡಿರುವ ಮತ್ತು ಘನತೆಗೆ ಕುತ್ತು ತರುತ್ತಿರುವ ಇವರಿಬ್ಬರನ್ನು ಗಡಿಪಾರು ಮಾಡಬೇಕಲ್ಲದೇ ಜೀವಾವಧಿ ಶಿಕ್ಷೆಯನ್ನು ಕೂಡಾ ನೀಡಬೇಕೆಂದು ಆಕ್ರೋಶದಿಂದ ಮಾತನಾಡಿದರು. ಅಲ್ಲದೇ ಸರ್ಕಾರ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳದಿದ್ದಲ್ಲಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಮುಂದುವರೆಯುತ್ತದೆ ಎಂದು ಎಚ್ಚರಿಸಿದರು.

ಗಮನ ಸೆಳೆದ ಯುವ ಕಾರ್ಯಕರ್ತ ಬಸವ ಕೀರ್ತಿಯವರ ಮಾತು

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ ಮಾತನಾಡಿ, ಇಂತಹ ಕಿಡಿಗೇಡಿಗಳನ್ನು, ಅವಿವೇಕಿಗಳನ್ನು ಕೂಡಲೇ ರಾಜ್ಯದಿಂದಲೇ ಗಡಿಪಾರು ಮಾಡಬೇಕೆಂದರಲ್ಲದೆ ವಿಶ್ವೇಶ್ವರ ಭಟ್ ನ ಪತ್ರಿಕೆಗಳನ್ನು ಸುಟ್ಟು ಹಾಕಬೇಕು ಅವನ ಮನೆ ಮುಂದೆ ಹೋಗಿ ಅವನನ್ನು ಈಚೆಗೆ ಎಳೆತಂದು ದಂಡಿಸಬೇಕೆಂದರು.

ಬಸವಣ್ಣ ಮಹನೀಯರು ಅಷ್ಟೇ ಅಲ್ಲದೆ ಕೃಷಿ ಸಮಾಜದ ಬಗ್ಗೆ ರೈತರ ಬಗ್ಗೆ ಕಾಳಜಿ ಉಳ್ಳ, ಜನಸಾಮಾನ್ಯರ ಬಗ್ಗೆ ಕಾಳಜಿ ಉಳ್ಳ ಮಹಾತ್ಮರು. ಇವರ ಬಗ್ಗೆ ಮಾತನಾಡುವಾಗ ಮೈಮೇಲೆ ಪ್ರಜ್ಞೆ ಇರಬೇಕು. ಇವರಷ್ಟೇ ಅಲ್ಲದೆ ಯಾರೇ ಆದರೂ ಸರಿ ಬಸವಣ್ಣನವರ ಬಗ್ಗೆ ಮಾತನಾಡುವಾಗ ಗೌರವ ಕೊಡಬೇಕಾಗುತ್ತದೆ. ಇಂತಹ ಘಟನೆ ರಾಜ್ಯದಲ್ಲಿ ಮತ್ತೆಂದು ಕೂಡಾ ನಡೆಯಬಾರದು ಇದರ ಬಗ್ಗೆ ಕೂಡಲೇ ಸರ್ಕಾರ ಎಚ್ಚೆತ್ತು ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮತ್ತೊಬ್ಬ ರೈತ ಮುಖಂಡ ಸಿಂಧೂವಳ್ಳಿ ಸತೀಶ ಮಾತನಾಡಿ, ಇದು ಆಕ್ಷಮ್ಯ ಅಪರಾಧ‌, ಇವರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಹಾಗಾಗಿ ಕೂಡಲೇ ಸರ್ಕಾರ ಎಚ್ಚೆತ್ತು ಬೇಗ ಕ್ರಮವನ್ನು ಕೈಗೊಂಡು ಕಾನೂನಾತ್ಮಕ ಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷರಾದ ಶಶಿಕಲಾ ಗಿರೀಶ ಅವರು ಮಾತನಾಡಿ, 12ನೆಯ ಶತಮಾನದಲ್ಲಿ ಬಸವಣ್ಣನವರು ಮಹಿಳಾ ಸ್ವಾತಂತ್ರ್ಯವನ್ನು ನೀಡಿದ್ದಲ್ಲದೆ ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಅಡಿಪಾಯವನ್ನು ಹಾಕಿ ಕೊಟ್ಟಂತವರು, ವೇಶ್ಯೆ, ದಾಸಿಯರನ್ನು ಕೂಡ ಶರಣೆಯರನ್ನಾಗಿ ಪರಿವರ್ತನೆ ಮಾಡಿದ ಕೀರ್ತಿ 12ನೇ ಶತಮಾನದ ಬಸವಣ್ಣನವರಿಗೆ ಸಲ್ಲುತ್ತದೆ. ಅಂತವರ ಘನತೆಯನ್ನು ಕುಗ್ಗಿಸುವ ಕೆಲಸ ಪದೇ ಪದೇ ನಡೆಯುತ್ತಿದೆ. ಇದನ್ನು ಕರ್ನಾಟಕದ ಯಾವ ಮಹಿಳೆಯು ಸಹಿಸಲಾಗದು. ಇದು ಈಗಲೇ ಕೊನೆಗೊಳ್ಳಬೇಕು, ಕೊನೆಗೊಳ್ಳದಿದ್ದರೆ ಮತ್ತೆ ರಾಷ್ಟ್ರಾದ್ಯಂತ ಮಹಿಳಾ ಸಂಘಟನೆಗಳೆಲ್ಲ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಸವಭಕ್ತೆ ತಮ್ಮಡಹಳ್ಳಿಯ ರೂಪ ಮಂಜುನಾಥ ಅವರು, ಬಸವಣ್ಣನವರನ್ನು ಲಿಂಗಾಯತ ಸಮುದಾಯವು ದೈವ ಸ್ವರೂಪ ಭಾವನೆಯಿಂದ ನೋಡುತ್ತಿದೆ. ಬಸವಣ್ಣನವರಿಗೆ ಮಾಡಿದ ಅವಮಾನ ಲಿಂಗಾಯತ ಸಮುದಾಯಕ್ಕೆ ಮತ್ತು ಕರ್ನಾಟಕಕ್ಕೆ ಮಾಡಿದ ಅವಮಾನವಾಗಿದೆ. ಆದ್ದರಿಂದ ಈ ಭ್ರಷ್ಟರಿಗೆ ಸುಮ್ಮನೆ ಬಿಡುವುದು ಸರಿಯಲ್ಲ ಎಂದರು.

ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಮಂಗಳ ಸೋಮಶೇಖರ ಮಾತನಾಡಿ, ಬಸವಣ್ಣ ಸರ್ವ ಜನಾಂಗದ ತೋಟ. ಹಾಗಾಗಿಯೇ ಇಂದು ರಾಜ್ಯಾದ್ಯಂತ ಬಸವಣ್ಣನವರ ಪರವಾಗಿ ನಿಂತಿದೆ. ಅವಿವೇಕಿಗಳಾದ ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ ವಿರುದ್ಧ ದೊಡ್ಡಮಟ್ಟದ ಪ್ರತಿಭಟನೆ ನಡೆಯುತ್ತಿದೆ. ಕಿಡಿಗೇಡಿಗಳು ಯಾರೇ ಆಗಲಿ ಬಸವಣ್ಣನವರ ಬಗ್ಗೆ ಮತ್ತು ಲಿಂಗಾಯತ ವಿಚಾರವಾಗಿ ಅವಹೇಳನಕಾರಿ ಮಾತನಾಡುವುದು ಮತ್ತು ವಿರೋಧಿಸುವುದನ್ನು ಎಲ್ಲರೂ ಖಂಡಿಸಲೇಬೇಕೆಂದು ಮತ್ತು ಇಂತಹ ಕಿಡಿಗೇಡಿಗಳಿಗೆ ಸೂಕ್ತ ರೀತಿಯಲ್ಲಿ ಶಿಕ್ಷೆ ಆಗಲೇಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್ ಮಾತನಾಡಿ, ಲಿಂಗಾಯತ ಧರ್ಮ ಸಂಸ್ಥಾಪಕರು ಬಸವಣ್ಣನವರು. ಅವರ ಬಗ್ಗೆ ಮತ್ತು ಶರಣ ಸಂಸ್ಕೃತಿಯ ಬಗ್ಗೆ ಪದೇ ಪದೇ ಅವಹೇಳನಾಗುತ್ತಿರುವುದು ದುರದೃಷ್ಟಕರ. ಆದ್ದರಿಂದ ಸರ್ಕಾರ ಕೂಡಲೇ ಎಚ್ಚೆತ್ತು ಮತ್ತೆಂದು ಈ ರೀತಿ ಆಗದಂತೆ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.

ಹಲ್ಲರೆ ಗುರುಮಲ್ಲೇಶ್ವರ ಮಠದ ಶ್ರೀ ಬಸವಣ್ಣ ಸ್ವಾಮೀಜಿ, ಶರಣ ಸಂಗಮ ಮಠದಶ್ರೀ ನಾಗರಾಜೇಂದ್ರ ಮಹಾಸ್ವಾಮಿಗಳು, ಕುರಟ್ಟಿಯ ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಮಾದಪ್ಪ ಸ್ವಾಮಿಗಳು ಮಾತನಾಡಿ, ರಾಜ್ಯದ ಎಲ್ಲಾ ಮೂಲಗಳಿಂದಲೂ ಕೂಡ ಇಂತಹ ಅವಹೇಳನವನ್ನು ಖಂಡಿಸಲೇಬೇಕು. ಎಲ್ಲಾ ಸ್ವಾಮೀಜಿಗಳು ಕೂಡಾ ಹೋರಾಟ ಮಾಡಬೇಕು. ಇನ್ನು ಮುಂದೆ ಈ ರೀತಿ ಘಟನೆ ನಡೆದಾಗ ಒಗ್ಗಟ್ಟಿನಿಂದ ಎಲ್ಲರೂ ಎಲ್ಲಾ ಸಮಾಜದ ಬಂಧುಗಳು ಪ್ರತಿಭಟಿಸಬೇಕೆಂದರು.

ರಾಷ್ಟ್ರದ ತುಂಬೆಲ್ಲ ಬಸವಣ್ಣನ ಅಭಿಮಾನಿಗಳಿದ್ದಾರೆ, ಅವರೊಡಗೂಡಿ ನಾವು ದೊಡ್ಡ ಮಟ್ಟದಲ್ಲಿ ಹೋರಾಟವನ್ನು ಮಾಡಬೇಕೆಂದು ಮಾತನಾಡಿದರು.

ಕರ್ನಾಟಕ ಪ್ರತಿಧ್ವನಿ ವೇದಿಕೆಯ ಜಿಲ್ಲಾಧ್ಯಕ್ಷ ಪ್ರತಿಧ್ವನಿ ತ್ರಿನೇಶ್ ಮಾತನಾಡಿ, ಬಸವಣ್ಣನವರಿಗೆ ಅಗೌರವ ತಂದವರು ಖಂಡಿತವಾಗಿಯೂ ಕರ್ನಾಟಕದಲ್ಲಿ ಬದುಕಲು ಯೋಗ್ಯರಲ್ಲ. ಇಂತಹ ನಾಲಾಯಕ್ ವ್ಯಕ್ತಿಗಳನ್ನು ಕೂಡಲೇ ಕಾನೂನಾತ್ಮಕವಾಗಿ ಶಿಕ್ಷಿಸಬೇಕೆಂದು ಆಗ್ರಹಿಸಿದರು.

ಕೆ. ಆರ್. ನಗರದ ಸದಾನಂದ ಮೂರ್ತಿ ಅವರು ಮಾತನಾಡಿ, ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ಟನ ಹಿಂದೆ ಕಾಣದ ಕೈಗಳು ಸಾಕಷ್ಟು ಕೆಲಸ ಮಾಡುತ್ತಿವೆ. 12ನೇ ಶತಮಾನದಲ್ಲಿ ತೊಂದರೆ ಕೊಟ್ಟಂತಹ ವಂಶದವರೇ ಇಂದು ಸಹ ಹಿಂಬಾಗಿಲಿನಿಂದ ಇಂತಹ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಲಿಂಗಾಯತ ಸಮುದಾಯ, ಬಸವಣ್ಣನವರ ಅಭಿಮಾನಿಗಳು, ಅನುಯಾಯಿಗಳು ಎಚ್ಚೆತ್ತುಕೊಳ್ಳಬೇಕೆಂದು ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷರಾದ ಬುಲೆಟ್ ಮಹದೇವಪ್ಪ, ಮಹಾಸಭಾದ ಪ್ರಧಾನ ಕಾರ್ಯದರ್ಶಿ ಬದನವಾಳು ಮಂಜುನಾಥ, ಮಹಾಸಭೆಯ ನಿರ್ದೇಶಕ ತಾಂಡವಪುರ ಮಾದು ಹಾಗೂ ತಾಲೂಕಿನ ಬಸವಪರ ಸಂಘಟನೆಗಳ ಮುಖಂಡರುಗಳು, ರಾಜಕೀಯ ಮುಖಂಡರುಗಳು, ಮಹಿಳಾ ಪದಾಧಿಕಾರಿಗಳು, ಯುವ ಮುಖಂಡರು, ಹಲವು ಸಂಘ ಸಂಸ್ಥೆಯ ಅಧ್ಯಕ್ಷರು ಎಲ್ಲರೂ ಸೇರಿ ತಹಸಿಲ್ದಾರ್ ಮುಖಾಂತರ ಪ್ರತಿಭಟನೆಯ ಅಭಿಪ್ರಾಯವನ್ನ ತಿಳಿಸಿರುವ ಪತ್ರವನ್ನು ನೀಡಿ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ವಿಶ್ವ ಬಸವಸೇನೆಯ ಅಧ್ಯಕ್ಷರಾದ ಬಸವಯೋಗೇಶ ಗುರುಗಳು, ಉಪಾಧ್ಯಕ್ಷರುಗಳಾದ ಕಲ್ಪುರ ಮಹೇಶ, ಹಂಗಳಪುರ ಸುರೇಶ, ಪ್ರಧಾನ ಕಾರ್ಯದರ್ಶಿ ಹೊರಳವಾಡಿ ಕಂಟ್ರಾಕ್ಟರ್ ಮಹೇಶ್, ಕಾರ್ಯದರ್ಶಿ ಮಡಹಳ್ಳಿ ಸೂರ್ಯ ಮಹೇಶ, ಬ್ರಾಂಡ್ ನ್ಯೂ ಆನಂದ, ತಮಡಹಳ್ಳಿ ಉಪನ್ಯಾಸಕರಾದ ಮಂಜುನಾಥ ಹಾಗೂ ಪದಾಧಿಕಾರಿಗಳು, ಬಸವ ಭಾರತ ಪತ್ರಿಕೆಯ ಸಂಪಾದಕ ಶಿವರುದ್ರಪ್ಪ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಮೈಸೂರು ಜಿಲ್ಲಾ ಅಧ್ಯಕ್ಷರಾದ ಕಸುವಿನಹಳ್ಳಿ ಮಂಜೇಶಕುಮಾರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಕೆರೆಹುಂಡಿ ಚಿಗುರು ನಂಜುಂಡಸ್ವಾಮಿ, ಮಹಾಸಭಾದ ಜಿಲ್ಲಾ ನಿರ್ದೇಶಕ ಮುಳ್ಳೂರು ರೇಚಣ್ಣ,ಕಾಯಕಯೋಗಿ ಸಂಘಟನೆಯ ಮುದ್ದಹಳ್ಳಿಯ ಅಶೋಕಕುಮಾರ, ಯಾಲಹಳ್ಳಿ ಗುರು, ಮಾದನಹಳ್ಳಿ ಮೂರ್ತಿ, ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ನಿರ್ದೇಶಕರಾದ ಕೋಮಲ ಮಹಾಲಿಂಗಸ್ವಾಮಿ, ವಕೀಲರಾದ ಮುದ್ದಹಳ್ಳಿ ಶಿವಬಸಪ್ಪ, ವಕೀಲರಾದ ಮಹೇಶಬಾಬು, ಯುವ ಮುಖಂಡ ದೇಬುರು ಶಿವು, ಪ್ರಚಾರ ಕೇಸರಿ ನಾಗಪ್ಪ, ಮಸಗೆ ರಾಜು, ಕಾಂಗ್ರೆಸ್ ಯುವ ಮುಖಂಡ ಹಾಡ್ಯ ರಾಜು, ಯಾಲಹಳ್ಳಿ ನಾಗೇಂದ್ರ, ಮಾದನಹಳ್ಳಿ ಗಿರೀಶ್, ರೈತ ಮುಖಂಡರುಗಳಾದ ವಳಗೆರೆ ಗಣೇಶ್, ಕೆರೆಹುಂಡಿ ರಾಜಣ್ಣ, ಹಲ್ಲರೆ ಬಸವರಾಜು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕನ್ನಡಪರ, ರೈತಪರ, ಬಸವಪರ, ಮಹಿಳಾಪರ ಸಂಘಟನೆಗಳ ಮತ್ತು ರಾಜಕೀಯ ಮುಖಂಡರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ರವಿ ಸಂಜ್ ಮತ್ತು ವಿಶ್ವೇಶ್ವರ ಭಟ್ಟನಿಗೆ ದಿಕ್ಕಾರ, ಬಸವಣ್ಣನವರ ವಿರೋಧಿಗಳು ರಾಷ್ಟ್ರದ ಅಭಿವೃದ್ಧಿಯ ವಿರೋಧಿಗಳು, ಬಸವ ವಿರೋಧಿ ರಾಷ್ಟ್ರ ವಿರೋಧಿ, ನಿಲ್ಲಲಿ ನಿಲ್ಲಲಿ ಬಸವಣ್ಣನವರ ಅವಹೇಳನ ನಿಲ್ಲಲಿ, ಬಸವಣ್ಣನವರಿಗೆ ಮಾಡಿದ ಅವಮಾನ ರಾಷ್ಟ್ರಕ್ಕೆ ಮಾಡಿದ ಅಪಮಾನ ಹೀಗೆ ಹತ್ತು ಹಲವು ಧಿಕ್ಕಾರದ ಘೋಷಣೆಗಳು ಮತ್ತು ಬಸವಣ್ಣನವರ ಪರವಾಗಿ ಜೈಕಾರಗಳು, ಬಸವ ಧ್ವಜ ಹಾರಾಟದೊಡನೆ ಜೋರಾಗಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh

Share This Article
1 Comment
  • ಕಾಕ್ರೋಚ ಸಂಘಟನೆ ತರಹ ಬಸವ‌ ಭಕ್ತರು ಪ್ರತಿ ಜಿಲ್ಲೆಯಿಂದ ಬೆಂಗಳೂರ ಚಲೋ ಕಾರ್ಯಕ್ರಮ ಹಮ್ಮಿಕೊಂಡು ವಿಧಾನ ಸೌಧ ಮುಂದೆ ಧರಣಿ ಪಡಿಸಬೇಕು.ರವ ಹಂಜ ಮತ್ತು ವಿಶ್ವೇಶ್ವರ ಭಟ್ ರನ್ನು ಶಿಕ್ಷೆ ಕೊಡುವರಿಗೆ.ಜೈಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *

ಅಧ್ಯಕ್ಷರು, ಶ್ರೀಗುರುಬಸವೇಶ್ವರ ಸೇವಾ ಟ್ರಸ್ಟ್, ನಂಜನಗೂಡು