ಬಸವಕಲ್ಯಾಣ :
ಬಸವಕಲ್ಯಾಣದಲ್ಲಿ ನಡೆಯುವ ೪೭ನೆಯ ಶರಣ ಕಮ್ಮಟ ಹಾಗೂ ಅನುಭವಮಂಟಪ ಉತ್ಸವದ ನಿಮಿತ್ಯ ಕರ್ನಾಟಕ, ಮಹಾರಾಷ್ಟ್ರದಿಂದ ಈ ತಿಂಗಳ ೨೨ರಂದು ಪ್ರಾರಂಭವಾಗಿ ಸತತ ೬ ದಿವಸಗಳವರೆಗೆ ನಡೆದು ಬಂದ ಪಾದಯಾತ್ರೆ ಬಸವೇಶ್ವರ ದೇವಸ್ಥಾನಕ್ಕೆ ಬಂದು ತಲುಪಿತು.
೧೨ನೇ ಶತಮಾನದ ವಿಶ್ವಗುರು ಬಸವಣ್ಣನವರ ಸಮಾನತೆಯ ಮತ್ತು ಕಾಯಕ ತತ್ವದ ಸಂದೇಶವನ್ನು ಸಾರುತ್ತ ‘ಅನುಭವಮಂಟಪ’ದ ಪವಿತ್ರ ನೆಲದತ್ತ ಹೆಜ್ಜೆ ಹಾಕಿ ಬಂದಿರುವ ಎಲ್ಲಾ ಪಾದಯಾತ್ರಿಗಳಿಗೆ ಹೃದಯಪೂರ್ವಕವಾಗಿ ಸ್ವಾಗತಿಸಲಾಯಿತು.

ನಿಮ್ಮ ಈ ಪಾದಯತ್ರೆಯು ಕೇವಲ ದೈಹಿಕ ನಡಿಗೆಯಲ್ಲ, ಅದು ಆತ್ಮಶುದ್ಧಿ ಮತ್ತು ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮಹಾ ಸಂಕಲ್ಪವಾಗಿದೆ. ಬಿಸಿಲು, ಮಳೆ, ಚಳಿ ಎನ್ನದೆ ಭಕ್ತಿ ಮತ್ತು ನಿಷ್ಠೆಯಿಂದ ನಡೆದು ಬಂದಿರುವ ನಿಮ್ಮ ಶ್ರದ್ಧೆ ನಿಜಕ್ಕೂ ಶ್ಲಾಘನೀಯ.
ಶರಣರ ಆಶಯದಂತೆ ಸಮಾಜದಲ್ಲಿ ಶಾಂತಿ, ಸಹಬಾಳ್ವೆ ನೆಲೆಸಲಿ ಎಂದು ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿದರು. ಪೂಜ್ಯ ಗುರುಬಸವ ಪಟ್ಟದ್ದೇವರು, ಸಮ್ಮುಖ ವಹಿಸಿದ್ದರು.
ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಆಂದ್ರಪ್ರದೇಶ ರಾಜ್ಯಗಳಿಂದ ಸುಮಾರು ೨೦೦ ಕ್ಕೂ ಹೆಚ್ಚು ಪಾದಯಾತ್ರಿಗಳು ಆಗಮಿಸಿದರು.

ಪೂಜ್ಯರಾದ ಶಿವಾನಂದ ಸ್ವಾಮಿಗಳು, ಮಹಾಲಿಂಗ ಸ್ವಾಮಿಗಳು, ಬಸವಲಿಂಗ ಸ್ವಾಮಿಗಳು, ಸಿದ್ಧಬಸವ ಸ್ವಾಮಿಗಳು, ಪ್ರಭುಲಿಂಗ ಸ್ವಾಮಿಗಳು, ಶಂಕರಲಿಂಗ ಸ್ವಾಮಿಗಳು, ಮಹಾದೇವಮ್ಮ ತಾಯಿ, ಶರಣಾಂಬಿಕಾ ತಾಯಿ, ಸುಗುಣಾದೇವಿ ತಾಯಿ, ನೀಲಾಂಬಿಕಾತಾಯಿ, ಮುಂತಾದ ಪೂಜ್ಯರ ಸಮ್ಮಖದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಬಸವ ನಡಿಗೆ ನಗರದ ಮುಖ್ಯ ಬೀದಿಯ ಮುಖಾಂತರವಾಗಿ ಅನುಭವಮಂಟಪ ತಲುಪಿತು.
ಶರಣರ ವೇಷಭೂಷಣ ಸ್ತಬ್ದಚಿತ್ರಗಳು, ವಿವಿಧ ಗ್ರಾಮಗಳಿಂದ ಭಜನಾ ತಂಡಗಳು, ಬಸವಣ್ಣನವರ ರಥ ನೋಡುಗರ ನಮನ ಸೆಳೆದವು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh
