ಆಳಂದ; ಬಸವಣ್ಣನವರ ಅವಹೇಳನದ ವಿರುದ್ಧ ಪ್ರತಿಭಟನೆ

ಆಳಂದ :

12ನೇ ಶತಮಾನದ ಮಹಾನ್ ಮಾನವತಾವಾದಿ, ಕಾಯಕ ಮತ್ತು ದಾಸೋಹ ತತ್ವಗಳ ಪ್ರತಿಪಾದಕ, ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಸ್ತ್ರೀ ಸ್ವಾತಂತ್ರ್ಯದ ಹರಿಕಾರರಾದ ಬಸವಣ್ಣನವರು ನಾಡಿನ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಇತಿಹಾಸದಲ್ಲಿ ಅಪ್ರತಿಮ ಸ್ಥಾನವನ್ನು ಹೊಂದಿದ್ದಾರೆ.

ಅವರ ವಚನ ಸಾಹಿತ್ಯ ಮತ್ತು ವಿಚಾರಧಾರೆಗಳು ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆ ಇಡೀ ವಿಶ್ವಕ್ಕೆ ಮಾನವೀಯ ಮೌಲ್ಯಗಳ ದಾರಿದೀಪವಾಗಿವೆ ಎಂದು ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ ಹೇಳಿದರು.

ಗುರುವಾರ ಪಟ್ಟಣದ ತಹಸೀಲ್ ಕಚೇರಿ ಎದುರು ತಾಲೂಕಿನ ಬಸವಣ್ಣನವರ ಅವಹೇಳನದ ವಿರುದ್ಧ ಬಸವಾನುಯಾಯಿಗಳು ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಮಹಾನ್ ದಾರ್ಶನಿಕರಾದ ಬಸವಣ್ಣನವರ ಕುರಿತು ಲೇಖಕ ರವಿ ಹಂಜ್ ಅವರು ನೀಡಿರುವ ಅವಹೇಳನಕಾರಿ ಹೇಳಿಕೆಗಳು ಬಸವಣ್ಣನವರ ಅನುಯಾಯಿಗಳು, ಶರಣ ಪರಂಪರೆಯ ಆರಾಧಕರು ಹಾಗೂ ನಾಡಿನ ಸಮಸ್ತ ಜನರ ಭಾವನೆಗಳಿಗೆ ತೀವ್ರ ನೋವುಂಟು ಮಾಡಿವೆ.

ಬಸವಣ್ಣನವರ ತತ್ವಾದರ್ಶಗಳನ್ನು ಗೌರವಿಸುವ ಕೋಟ್ಯಂತರ ಜನರ ಮನಸ್ಸಿಗೆ ಘಾಸಿ ಉಂಟುಮಾಡುವ ಇಂತಹ ಹೇಳಿಕೆಗಳು ಸಮಾಜದಲ್ಲಿ ಅಸಮಾಧಾನ ಮತ್ತು ಅಶಾಂತಿಗೆ ಕಾರಣವಾಗುವ ಸಾಧ್ಯತೆಯಿದೆ ಎಂದು ಹೇಳಿದರು.

ಮುಖಂಡ ಶರಣಗೌಡ ಪಾಟೀಲ ದೇವಂತಗಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ಆ ಸ್ವಾತಂತ್ರದ ಹೆಸರಿನಲ್ಲಿ ಮಹಾನ್ ವ್ಯಕ್ತಿಗಳ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ಸಮಾಜದ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದನ್ನು ಸಮರ್ಥಿಸಲು ಸಾಧ್ಯವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಜವಾಬ್ದಾರಿಯೂ ಇರಬೇಕಾಗುತ್ತದೆ ಎಂದು ಹೇಳಿದರು.

ಗ್ರೇಡ್-2 ತಹಶೀಲ್ದಾರ್ ಅರುಣಕುಮಾರ ಹಿರೇಗೌಡ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ತಾಲೂಕು ಉಪಾಧ್ಯಕ್ಷ ಶ್ರೀಶೈಲ ಖಜೂರಿ, ಹಣಮಂತರಾವ ಮಲಾಜಿ, ಶಿವಪ್ರಕಾಶ ಹೀರಾ, ರಾಮಲಿಂಗ ಹತ್ತರಕಿ, ಹಣಮಂತರಾವ ಪಾಟೀಲ, ಸಂದೇಶ ಜವಳಿ, ನಿಜಲಿಂಗಪ್ಪ ಕೋರಳ್ಳಿ ಪಂಚಪ್ಪ ಪಾಟೀಲ, ಬಸವರಾಜ ಬಿರಾದಾರ ನೆಲ್ಲೂರ, ಮಹಾದೇವಪ್ಪ ಪಾಟೀಲ, ಬಸವರಾಜ ಸಾಣಕ, ಬಾಬಾಸಾಹೇಬ ಪಾಟೀಲ, ಆನಂದರಾವ ಪಾಟೀಲ, ಶಿವಪ್ಪ ವಾರಿಕ, ಅಶೋಕ ಗುತ್ತೇದಾರ, ಬಸವರಾಜ ನಿಪ್ಪಾಣಿ, ಸಿದ್ರಾಮಪ್ಪ ಹತ್ತರಕಿ, ಸೋಮಶೇಖರ ಹತ್ತರಕಿ, ನಾಗರಾಜ ಶೇಗಜಿ, ಅಮೃತ ಬಿಬ್ರಾಣಿ, ಸಂತೋಷ ಹಾದಿಮನಿ, ಪ್ರಭಾಕರ ಘಾಳೆ, ಬಸವರಾಜ ಹತ್ತರಕಿ, ಮಹಾದೇವಪ್ಪ ವಾಡೆ, ದಯಾನಂದ ಢಗೆ, ರಾಜಶೇಖರ ಧೂಳ, ಕಿಟ್ಟಿ ಸಾಲೇಗಾಂವ, ಸುನೀಲ ಹಿರೋಳಿಕರ, ರಾಜಕುಮಾರ ಪಾಟೀಲ, ಸೀತಾರಾಮ ಜಮಾದಾರ, ಅಶೋಕ ಘಾಣೂರೆ, ಸಿದ್ದು ಪಾಟೀಲ ಶಕಾಪೂರ, ಕಲ್ಯಾಣಿ ದೊಡ್ಡಮನಿ, ನಿಖಿಲ ಚಿಂಚನಸೂರ, ಲಕ್ಷ್ಮೀಪುತ್ರ ಹೇಮಾಜಿ, ಫಯ್ಯಾಜ ಪಟೇಲ, ರವಿ ಕಣ್ಣಿ, ಶರಣಬಸಪ್ಪ ಅಲ್ಲಾಪೂರ, ಸೇರಿದಂತೆ ಬಸವಣ್ಣನವರ ಅನುಯಾಯಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh

Share This Article
Leave a comment

Leave a Reply

Your email address will not be published. Required fields are marked *