ಹಂಜ್, ಭಟ್ಟ ವಿರುದ್ಧ ನಂಜನಗೂಡಿನಲ್ಲಿ ಮತ್ತೆ ಪ್ರತಿಭಟನೆ

ಬಿ. ಚನ್ನಪ್ಪ
ಬಿ. ಚನ್ನಪ್ಪ

ನಂಜನಗೂಡು :

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನಂಜನಗೂಡು ಘಟಕದ ವತಿಯಿಂದ ಬಸವಣ್ಣನವರ ನಿಂದನೆ, ಅವಹೇಳನ ಮಾಡಿದ ಲೇಖಕ ರವಿ ಹಂಜ್ ಹಾಗೂ ಪುಸ್ತಕ ಪ್ರಕಾಶನ ಮಾಡಿದ ವಿಶ್ವೇಶ್ವರ ಭಟ್ಟರ ವಿರುದ್ಧ ಪ್ರತಿಭಟನೆ ನಡೆಯಿತು.

ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷರಾದ ಸಿಂಧುವಳ್ಳಿ ಕೆಂಪಣ್ಣನವರು ಮಾತನಾಡಿ, ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ಟರು ಘನಘೋರವಾದ ತಪ್ಪನ್ನು ಮಾಡಿದ್ದಾರೆ. ಇಂಥವರಿಗೆ ಯಾವುದೇ ಕಾರಣಕ್ಕೂ ಶಿಕ್ಷೆಯನ್ನು ನೀಡದೆ ಬಿಡಬಾರದೆಂದರು. ತಾಲೂಕು ದಂಡಾಧಿಕಾರಿಗಳ ಕಚೇರಿಯ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ದೇವನೂರು ಶಿವಪ್ಪದೇವರು, ಬಸವಣ್ಣನವರನ್ನು ಸಂಶೋಧಕನ ದೃಷ್ಟಿಯಲ್ಲಿ ನೋಡಬೇಕು. ಆದರೆ ರವಿ ಹಂಜ್ ಪುರಾಣಗಳ ದೃಷ್ಟಿಯಲ್ಲಿ ನೋಡಿ ಬಸವಣ್ಣವರನ್ನು ಅವಮಾನಿಸಿದ್ದಾರೆ ಎಂದು ಮಾತನಾಡಿದರು.

ಶರಣ ಸಂಗಮ ಮಠದ ಪೂಜ್ಯ ನಾಗರಾಜೇಂದ್ರ ಸ್ವಾಮಿಗಳು ಲಿಂಗಾಯತ ಬಂಧುಗಳು ಎಲ್ಲರೂ ಕೂಡ ಒಗ್ಗಟ್ಟಿನಿಂದ ಇರಬೇಕು. ಪದೇಪದೇ ಶರಣರ ಬಗ್ಗೆ ಬಸವಣ್ಣನವರ ಬಗ್ಗೆ ಅವಹೇಳನ ಮತ್ತು ಸಮುದಾಯಗಳಲ್ಲಿ ದಾರಿ ತಪ್ಪಿಸುವ ಕೆಲಸವನ್ನು ಮತ್ತು ತಪ್ಪು ತಿಳುವಳಿಕೆಯನ್ನು ಹರಡಿ ವಿಷ ಬೀಜ ಬಿತ್ತುವ ಈ ರೀತಿಯ ಅವಘಡಗಳು ನಡೆದಾಗ ಅಂತವರಿಗೆ ಶಿಕ್ಷೆ ಆಗುವತನಕ ಹೋರಾಟ ನಿಲ್ಲಬಾರದೆಂದು ಪ್ರತಿಭಟನೆಯಲ್ಲಿ ಮಾತನಾಡಿದರು.

ಹಲ್ಲರೆ ಶ್ರೀ ಗುರುಮಲ್ಲೇಶ್ವರ ಪಟ್ಟದಮಠದ ಬಸವಣ್ಣ ಸ್ವಾಮಿಗಳು ಮತ್ತು ಕಂತೆ ಮಹದೇಶ್ವರ ಬೆಟ್ಟದ ಶ್ರೀಗಳು, ಸೂರಳ್ಳಿ ಮಠದ ಶ್ರೀಗಳು, ಕಸವಿನಹಳ್ಳಿ ಮಠದ ಶ್ರೀಗಳು ಪ್ರತಿಭಟನೆಯಲ್ಲಿ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವ ಬಸವಸೇನೆ ಅಧ್ಯಕ್ಷರಾದ ಬಸವಯೋಗೇಶ ಗುರುಗಳು, ಲಿಂಗಾಯತ ಸಮಾಜದ ಹಿರಿಯರು, ರಾಜಕೀಯ ಧುರೀಣರಾದ ಆರ್. ವಿ. ಮಹಾದೇವಸ್ವಾಮಿ, ಆಲತ್ತೂರಹುಂಡಿ ನಂಜುಂಡಸ್ವಾಮಿ, ಮಾಜಿ ನಗರಸಭೆ ಅಧ್ಯಕ್ಷರಾದ ಹೆಚ್.ಎಸ್. ಮಹದೇವಸ್ವಾಮಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು, ಬಿಜೆಪಿ ಮುಖಂಡರಾದ ಬಳ್ಳೂರಹುಂಡಿ ಬಿ.ಎಸ್. ಮಾಹಾದೇವಪ್ಪ, ಎಪಿಎಂಸಿ ಮಾಜಿ ಸದಸ್ಯ ದೇವಿರಮ್ಮನಹಳ್ಳಿ ಗುರು, ಕಡಬೂರು ಮಂಜುನಾಥ, ವೀರಶೈವ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಎನ್. ಸಿ. ಬಸವಣ್ಣ, ರೈತ ಸಂಘದ ಜಿಲ್ಲಾಧ್ಯಕ್ಷ ಕಸವಿನಹಳ್ಳಿ ಮಂಜೇಶಕುಮಾರ, ಕಾಸು ನಂಜಪ್ಪ, ಶರಣ ಪ್ರಸಾರ ವೇದಿಕೆ ಅಧ್ಯಕ್ಷರು, ಬಸವ ಮಾಸದ ಅಧ್ಯಕ್ಷರಾದ ಆಯರಹಳ್ಳಿ ಪ್ರಭುಸ್ವಾಮಿ, ಕಾಯಕಯೋಗಿ ಬಸವೇಶ್ವರ ಸೇವಾ ಸಂಘದ ಮುದ್ದಹ ಳ್ಳಿಯ ಅಶೋಕ, ಕೆರೆಹುಂಡಿ ನಂಜುಂಡಸ್ವಾಮಿ, ಮಕ್ಕಳ ಮನೆ ಸೋಮಣ್ಣ, ಭಾಗವಹಿಸಿದ್ದರು.

ಮಹಾಸಭಾದ ಮುಖ್ಯ ಘಟಕ, ಯುವ ಘಟಕ, ಮಹಿಳಾ ಘಟಕ ನಗರ ಘಟಕ ಎಲ್ಲಾ ಕಾರ್ಯಕರ್ತ ಬಂಧುಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ಕಿಡಿಗೇಡಿಗಳಿಗೆ ಶಿಕ್ಷೆ ಆಗಲೇಬೇಕೆಂದು ಧಿಕ್ಕಾರ ಕೂಗುವ ಮುಖಾಂತರ ಪ್ರತಿಭಟಿಸಿದರು.

ಪ್ರತಿಭಟನೆಯಲ್ಲಿ ಖಜಾಂಚಿ ಮಡಹಳ್ಳಿ ನಟೇಶ, ಹೆಗ್ಗಡಳ್ಳಿ ರೇವಣ್ಣ, ನಿರ್ದೇಶಕರಾದ ದುಗ್ಗಳ್ಳಿ ಶಿವನಾಗಪ್ಪ, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ, ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ತಾಲೂಕು ಮಹಾಸಭಾದ ಘಟಕದ ನಿರ್ದೇಶಕರು ನಂದಿನಿ ಮಹೇಶ, ಮಹಾಸಭಾದ ನಿರ್ದೇಶಕರಾದ ಕೋಮಲ ಮಹಾಲಿಂಗಸ್ವಾಮಿ, ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷರಾದ ಶಶಿಕಲಾ ಗಿರೀಶ, ಕಾರ್ಯದರ್ಶಿಗಳಾದ ನಂಜಮಣಿ ಗುರುಮಲ್ಲಪ್ಪ, ತಮ್ಮಡಹಳ್ಳಿ ರೂಪ ಮಂಜುನಾಥ, ಚೈತ್ರ ಮಹದೇವಪ್ರಸಾದ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಲವು ಪದಾಧಿಕಾರಿಗಳು ನಗರ ಪದಾಧಿಕಾರಿಗಳು ಮಹಿಳಾ ಪದಾಧಿಕಾರಿಗಳು, ಭಾಗವಹಿಸಿ ಯಶಸ್ವಿಗೊಳಿಸಿದರು.

ಮಹಾಸಭಾದ ಯುವ ಘಟಕದ ಅಧ್ಯಕ್ಷರಾದ ಮಲ್ಕುoಡಿ ಮಹದೇವಸ್ವಾಮಿ, ಬಿಜೆಪಿಯ ಮುಖಂಡ ಮತ್ತು ನಗರ ಘಟಕದ ಅಧ್ಯಕ್ಷರಾದ ಮಹೇಶ ಕ್ರಾಂತಿಕಾರಿ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಕಣೆನೂರ ನವೀನ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಮಹದೇವ ಪ್ರಸಾದ, ಬಸವಟ್ಟಿಗೆ ಚೇತನ, ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ, ಪದಾಧಿಕಾರಿಗಳಾದ ಮಹಾಂತೇಶ, ಮನೋಜ, ವಿನೋದ, ಹಾಗೂ ಮುಂತಾದವರು. ಮುದ್ದಹಳ್ಳಿ ಚಿನ್ನಪ್ಪ, ತರಗನಹಳ್ಳಿ ಬಸವರಾಜು ಹಾಗೂ ನಟರಾಜು, ರೈತ ಮುಖಂಡರಾದ ಹಲ್ಲರೆ ಬಸವರಾಜು, ದೊಡಹುಂಡಿ ಕುಮಾರಣ್ಣ, ಮಡುವಿನಹಳ್ಳಿ ಮಂಜುನಾಥ ಮತ್ತಿತರರು ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LKx5yQpivBVC6opWuKbovh

Share This Article
Leave a comment

Leave a Reply

Your email address will not be published. Required fields are marked *

ಅಧ್ಯಕ್ಷರು, ಶ್ರೀಗುರುಬಸವೇಶ್ವರ ಸೇವಾ ಟ್ರಸ್ಟ್, ನಂಜನಗೂಡು