ಅನುಭವಮಂಟಪ ಉತ್ಸವ ಬಿತ್ತಿಪತ್ರ ಬಿಡುಗಡೆ
ಕಮಲನಗರ :
ಬಸವಕಲ್ಯಾಣದಲ್ಲಿ ನಡೆಯುವ ೪೭ನೆಯ ಶರಣ ಕಮ್ಮಟ ಹಾಗೂ ಅನುಭವಮಂಟಪ ಉತ್ಸವ-೨೦೨೬ ಬಿತ್ತಿಪತ್ರ ಬಿಡುಗಡೆ ಭಾಲ್ಕಿ ಹಿರೇಮಠದ ಪೂಜ್ಯ ಗುರುಬಸವ ಪಟ್ಟದ್ದೇವರ ಸಾನಿಧ್ಯದಲ್ಲಿ ಕಮಲನಗರದ ಶಾಖಾ ಹಿರೇಮಠದಲ್ಲಿ ಮಾಡಲಾಯಿತು.
ಸಾನಿಧ್ಯ ವಹಿಸಿ ಮಾತನಾಡುತ್ತ, ಬಸವಕಲ್ಯಾಣ ಬಸವಾದಿ ಶರಣರ ವಾಸ್ತವ್ಯದಿಂದ ಪಾವನವಾಗಿರುವ ಅವಿಮುಕ್ತ ಕ್ಷೇತ್ರವಾಗಿದೆ. ವಿಶ್ವಗುರು ಬಸವಣ್ಣನವರು ೧೨ನೇ ಶತಮಾನದಲ್ಲಿ ಇದೇ ನೆಲದಲ್ಲಿ ಅನುಭವಮಂಟಪ ಸ್ಥಾಪಿಸುವ ಮೂಲಕ ಜಗತ್ತಿಗೆ ಪ್ರಜಾಪ್ರಭುತ್ವದ ವ್ಯವಸ್ಥೆ ನೀಡಿದರು. ಈ
ಅನುಭವಮಂಟಪ ಪರಂಪರೆಯನ್ನು ಪುನರ್ಜೀ ವನಗೊಳಿಸಿದವರು ಡಾ. ಚನ್ನಬಸವ ಪಟ್ಟದ್ದೇವರು ಎಂದರು.
ಪೂಜ್ಯರು ಭಾಲ್ಕಿಯ ಶ್ರೀಮಠ ಬಿಟ್ಟು ಕಲ್ಯಾಣದಲ್ಲಿಯೇ ನೆಲಿಸಿ, ಸ್ವತಃ ಕಲ್ಲು-ಮಣ್ಣು ಹೊತ್ತು ಅನುಭವಮಂಟಪ ಕಟ್ಟಿದರು. ಅವರ ಪ್ರಯತ್ನದ ಫಲವಾಗಿ ಇಂದು ಕರ್ನಾಟಕ ಸರಕಾರ ನೂತನ ಅನುಭವಮಂಟಪ ನಿರ್ಮಿಸುತ್ತಿದೆ. ಅನುಭವಮಂಟಪ ಕಟ್ಟಿದ ನಂತರ ಪೂಜ್ಯರು ಶರಣಕಮ್ಮಟ
ಆರಂಭಿಸಿದರು. ಅದನ್ನೆ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ವಿಸ್ತಾರವಾಗಿ ಬೆಳೆಸುತ್ತ ಅನುಭವಮಂಟಪ
ಉತ್ಸವವನ್ನು ಆಚರಿಸುತ್ತಿದ್ದಾರೆ.
೨೮ ಮತ್ತು ೨೯ ನವೆಂಬರ್ ರಂದು ನಡೆಯುವ ಅನುಭವಮಂಟಪ ಉತ್ಸವದಲ್ಲಿ ಕಮಲನಗರ ಹಾಗೂ ಸುತ್ತಮುತ್ತಲಿನ ಹಳ್ಳಿಯ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ, ರಾಜಕುಮಾರ ಬಿರಾದಾರ, ರಮೇಶ ಬಿರಾದಾರ, ಸಂತೋಷ ಟೊಣ್ಣೆ, ಗುರುಶಾಂತ ಶಿವಣಕರ, ಪ್ರಕಾಶ ಸೋಲಾಪೂರೆ, ಶಿವಶರಣಪ್ಪ ಚಿಕಮುರ್ಗೆ, ಶಾಮ ಬಿರಾದಾರ, ಅವಿನಾಶ ಶಿವಣಕರ, ಮಹಾದೇವ ಮಡಿವಾಳ, ಅಮರ ಶಿವಣಕರ, ಮಹಾದೇವ ಬಿರಾದಾರ, ಸಂಜುಕುಮಾರ ಸೋಲಾಪೂರೆ, ಸಂಗಮೇಶ ಟೊಣ್ಣೆ, ಕಲ್ಲೇಶ ಉದಗೀರೆ ಮುಂತಾದವರು ಉಪಸ್ಥಿರಿದ್ದರು.
