23ನೇ ಕಲ್ಯಾಣ ಪರ್ವ: ಬಸವ ಕಲ್ಯಾಣದಲ್ಲಿ ಸಡಗರದ ಮೆರವಣಿಗೆ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವ ಕಲ್ಯಾಣ

ಮೂರು ದಿನಗಳ ವರೆಗೆ ಬಸವಕಲ್ಯಾಣದ ಬಸವ ಮಹಾಮನೆಯ ಆವರಣದಲ್ಲಿ ನಡೆದ ಕಲ್ಯಾಣ ಪರ್ವದ ಸಮಾರೋಪ ಸಮಾರಂಭ ಭಾನುವಾರ ಜರುಗಿತು.

ನಗರದ ಕೊಟೆಯಿಂದ ಬಸವ ಮಹಾಮನೆಯವರೆಗೂ 23ನೇ ಕಲ್ಯಾಣ ಪರ್ವದ ಭವ್ಯ ಮೆರವಣಿಗೆ ನಡೆಯಿತು. ಈ ಮೆರವಣಿಗೆಗೆ ಕೋಟೆ ಬಳಿ ಹುಲಸೂರ ತಹಸಿಲ್ದಾರ್‌ ಶಿವಾನಂದ ಮೇತ್ರೆ ಹಾಗೂ ಸಿ.ಪಿ.ಐ ಅಲಿಸಾಬ ಅವರು ವಚನ ಪಠಣ ಮಾಡುವ ಮೂಲಕ ಚಾಲನೆ ನೀಡಿದರು.

ಜಗದ್ಗುರು ಮಾತೆ ಗಂಗಾದೇವಿಯವರು, ಜಗದ್ಗುರು ಸಿದ್ಧರಾಮೇಶ್ವರ ಸ್ವಾಮಿಜಿ ಮೆರವಣಿಗೆಯಲ್ಲಿ ಪಾಲ್ಗೊಂಡಿದರು. ಸಾವಿರಾರು ಸಂಖ್ಯೆಯ ಭಕ್ತಾದಿಗಳು ಶರಣ ಶರಣಿಯರು ವಚನಕ್ಕೆ ತಾಳ ಹಾಕಿ ಕುಣಿದರು.

ಮೆರವಣಿಗೆಯ ಸಮಿತಿಯ ಪ್ರಮುಖ ಕಾರ್ಯಕರ್ತರು, ಗಣ್ಯರಾದ ಶಿವಾನಂದ ಗಂದಗೆ, ರವಿಂದ್ರ ಕೊಳಕೂರ, ಮಲ್ಲಿಕಾರ್ಜುನ ಚೀರಡೆ, ಅನೀಲ ರಗಟೆ, ಬಸವರಾಜ ತೋಂಡಾರೆ, ಶಿವಕುಮಾರ ಶೇಟಗಾರ, ನೀಲೇಶ ಖೂಬಾ, ಹಣಮಂತ ಧನಶೆಟ್ಟಿ, ವಿವೇಕಾನಂದ ಧನ್ನೂರ, ಕಂಟೆಪ್ಪಾಗಂದಿಗುಡೆ, ಕಂಟೆಪ್ಪಪಾಟೀಲ, ರಾಜೇಶ್ರೀ ಖುಬಾ, ವಿಜಯಲಕ್ಷ್ಮಿ ಗಡ್ಡೆ, ಸವೀತಾ ಬೇಲೂರೆ, ಸಿದ್ದಯ್ಯಾ ಕೌಡಿಮಠ ಮುಂತಾದವರು ಭಾಗವಹಿಸಿದ್ದರು.

Share This Article
4 Comments
  • ಬಸವಣ್ಣನವರ ಸಿದ್ದಾಂತದ ಆಶಯ ಜಗತ್ತಿಗೆ ತಿಳಿಯುವ ಕಾಲ ಸನ್ನಿಹಿತವಾಗಿದೆ

  • ನೀಲಕಂಠ ಗೌಡ ಪಾಟೀಲ ,ಗಡ್ಡಿಕರವಿನಕೊಪ್ಪ, ಬೈಲಹೊಂಗಲ ತಾಲೂಕ್. says:

    ಓಂ ಶ್ರೀ ಗುರು ಬಸವ ಲಿಂಗಾಯ ನಮಃ 🙏
    ಕಲ್ಯಾಣ ಪರ್ವದ ಕಾರ್ಯಕ್ರಮ ಗಳನ್ನು ನೋಡಿ ಕಣ್ಣು
    ತುಂಬಿ ತುಳುಕಾಡಿತು. ಹೃದಯ ತುಂಬಿ ಸಂತೋಷವಾಯಿತು.ಶರಣರ ಕಾರ್ಯ ಕ್ಷೇತ್ರ ಕಲ್ಯಾಣದಲ್ಲಿ ಇಂತಹ ಕಾರ್ಯಕ್ರಮ ನಡೆಯುವ ದು ಬಹಳ ನೆಚ್ಚಿನ ಕೆಲಸ ಇದೆ ರೀತಿ ನಾಡಿನ ತುಂಬಾ ಕಾರ್ಯಕ್ರಮಗಳು ನಡೆಯಲಿ.

    ಜೈ ಗುರು ಬಸವ ಜೈ ಲಿಂಗಾಯತ.

Leave a Reply

Your email address will not be published. Required fields are marked *