ಬಸವಕಲ್ಯಾಣ :
ಬಸವಕಲ್ಯಾಣದಲ್ಲಿ ನಡೆಯುವ 47ನೆಯ ಶರಣ ಕಮ್ಮಟ ಹಾಗೂ ಅನುಭವಮಂಟಪ ಉತ್ಸವ- 2026 ನಿಮಿತ್ಯ ಜನಪದದಲ್ಲಿ ಬಸವದರ್ಶನ ಪ್ರವಚನ ಉದ್ಘಾಟನೆ ಸಮಾರಂಭ ನಡೆಯಿತು.
ಸಮಾರಂಭದ ಸಾನಿಧ್ಯ ವಹಿಸಿ ಪೂಜ್ಯ ಡಾ. ಬಸವಅಂಗ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡುತ್ತಾ, ಅಂತರಂಗದ ಎಲ್ಲ ಕಲ್ಮಶಗಳನ್ನು ತೊಳೆಯುವ ಶಕ್ತಿ ಪ್ರವಚನದಲ್ಲಿದೆ. ಪ್ರವಚನ ಅನುಭಾವ ಸತ್ಸಂಗದ ಕಾರ್ಯಕ್ರಮಗಳು ಮನುಷ್ಯನ ಚಾರಿತ್ರ್ಯ ನಿರ್ಮಾಣಕ್ಕೆ ಪ್ರೇರಣೆ ನೀಡುತ್ತದೆ. ಇವುಗಳು ನಿಜವಾದ ಅರ್ಥದಲ್ಲಿ ಸದ್ಗುಣಗಳು ಬೆಳೆಸುವ ನಡೆದಾಡುವ ವಿಶ್ವವಿದ್ಯಾಲಯಗಳೆಂದೇ ಹೇಳಬಹುದು.
ಜನಪದಕಾರರು ಬಸವಣ್ಣನವರ ಜಗದಗಲವಾದ ವ್ಯಕ್ತಿತ್ವವನ್ನು ತುಂಬಾ ಅರ್ಥಪೂರ್ಣವಾಗಿ ಚಿತ್ರಿಸಿದ್ದಾರೆ. ಅವರ ಸಾಹಿತ್ಯದಲ್ಲಿ ಮಾಡಿರುವ ಬಸವದರ್ಶನ ಮಾಡಿಸಲು ಪೂಜ್ಯ ಚನ್ನಬಸವಾನಂದ ಸ್ವಾಮಿಗಳು ಆಗಮಿಸಿದ್ದಾರೆ. ಅವರ ಪ್ರವಚನ ಶ್ರವಣ ಮಾಡಲು ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿತ್ಯ ಆಗಮಿಸಬೇಕು ಎಂದು ನುಡಿದರು.
ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು, ಹುಲಸೂರು ಹಾಗೂ ಪೂಜ್ಯ ಗುರುಬಸವ ಪಟ್ಟದ್ದೇವರು ಸಮ್ಮುಖ ವಹಿಸಿದ್ದರು.
ಪ್ರವಚನಕಾರರಾದ ಪೂಜ್ಯ ಚನ್ನಬಸವಾನಂದ ಸ್ವಾಮಿಗಳು, ಬಸವಕಲ್ಯಾಣ ಅವಿಮುಕ್ತ ಕ್ಷೇತ್ರವಾಗಿದೆ. ಶರಣರು ಹೋರಾಡಿದ ಪಾವನ ನಾಡಾಗಿದೆ. ಈ ನೆಲ, ಜಗತ್ತಿಗೆ ಸಮಾನತೆ, ಪ್ರಜಾಪ್ರಭುತ್ವ ನೀಡಿದೆ.
ಕಾಯಕ ಜೀವಿಗಳು ಯಾವುದೇ ಆಮಿಷಗಳಿಗೆ ಎಡೆಯಾಗದೆ, ನಿಸ್ವಾರ್ಥ ಬದುಕನ್ನು ಬದುಕಿದ ಕ್ಷೇತ್ರ. ಬಸವಣ್ಣನವರ ಸಮಗ್ರ ಕ್ರಾಂತಿಯ ಚಿತ್ರಣ ಜನಪದಕಾರರು ನಮಗೆ ನೀಡಿದ್ದಾರೆ. ಅದನ್ನು ನಾವು ಅರ್ಥೈಸಿಕೊಳ್ಳಬೇಕೆಂದು ಪೂಜ್ಯರು ನುಡಿದರು.
ನಿವೃತ್ತ ನ್ಯಾಯಾಧೀಶರಾದ ಸುಭಾಷಚಂದ್ರ ನಾಗರಾಳೆ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಶಶಿಕಾಂತ ದುರ್ಗೆ, ಮಲ್ಲಿಕಾರ್ಜುನ ಕುರಕುಂಟೆ, ಚನ್ನಪ್ಪ ಪರತಾಪೂರೆ, ರಾಹುಲ ಇಜಾರೆ ಮುಂತಾದವರು ಉಪಸ್ಥಿತರಿದ್ದರು.
ಶಂಕರ ಕರಣೆ ಸ್ವಾಗತಿಸಿದರು. ಪ್ರೊ. ಮೀನಾಕ್ಷಿ ಬಿರಾದಾರ ನಿರೂಪಿಸಿದರು. ರಾಜಕುಮಾರ ಹೂಗಾರ ವಚನ ಪ್ರಾರ್ಥನೆ ಮಾಡಿದರು. ಶರಣು ಸಮರ್ಪಣೆ ರಾಜಶೇಖರ ಬಿರಾದಾರ ಅವರು
ಮಾಡಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU
