ಬಸವ ಕಲ್ಯಾಣ
ಪಟ್ಟಣದಲ್ಲಿನ 108 ಅಡಿ ಎತ್ತರದ ಬಸವಣ್ಣನವರ ಮೂರ್ತಿಯ ಮುಂದೆ ಬಿಜೆಪಿ ಕಾರ್ಯಕರ್ತರು ಆರೆಸ್ಸೆಸ್ ಗೀತೆ ಹಾಡಿರುವ ವಿಡಿಯೋ ವೈರಲ್ ಆಗಿ ತೀವ್ರ ಖಂಡನೆಗೆ ಗುರಿಯಾಗಿದೆ.
ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಅನೇಕರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
“ಬಸವಣ್ಣನವರ ಮೂರ್ತಿಯ ಮುಂದೆ ಆರೆಸ್ಸೆಸ್ ಗೀತೆ ಹಾಡಿರುವುದಕ್ಕೆ ಬಹಳ ಸಿಟ್ಟಿನ ಪ್ರತಿಕ್ರಿಯೆ ಬಂದಿದೆ. ಈ ರೀತಿ ಹಾಡಲು ನಮ್ಮ ಒಪ್ಪಿಗೆ ಕೇಳಿರಲಿಲ್ಲ, ನಾವೂ ಕೊಟ್ಟಿರಲಿಲ್ಲ,” ಎಂದು ಬಸವ ಕಲ್ಯಾಣ ಬಸವ ಮಹಾಮನೆಯ ಸಿದ್ಧರಾಮೇಶ್ವರ ಸ್ವಾಮೀಜಿ ಸ್ಪಷ್ಟಪಡಿಸಿದರು.

“ಮೇ 16 ಹಾಗೂ 17 ಎರಡು ದಿನಗಳ ಬಿಜೆಪಿ ಕಾರ್ಯಕ್ರಮ ನಡೆದಿತ್ತು. ಎರಡನೇ ದಿನ ಬೆಳಗೆ ಪ್ರತಿಮೆಯ ಮುಂದೆ ಇರುವ ಪಾರ್ಕಿಂಗ್ ಜಾಗದಲ್ಲಿ ಯೋಗ ಮಾಡಿ ಹಾಡಿ ಹೋಗಿದ್ದಾರೆ,” ಎಂದು ಸ್ವಾಮೀಜಿ ಹೇಳಿದರು.
“ಬಿಜೆಪಿಯ ಜಿಲ್ಲಾಮಟ್ಟದ ಜಾಗೃತಿ ಸಮಾವೇಶ ನಡೆಸಲು ಶಾಸಕ ಶರಣು ಸಲಗರ ಬಂದು ಬಸವ ಮಹಾಮನೆ ಪಕ್ಕದ ಸಭಾಮಂಟಪ ಕೇಳಿದ್ದರು. ಆಗ ಮದುವೆಗಳು ಇದ್ದಿದ್ದರಿಂದ ಕೊಟ್ಟಿರಲಿಲ್ಲ. ಅವರು ನಂತರ ಮತ್ತೆ ಬಂದು ಕೇಳಿದಾಗ ಕೊಟ್ಟೆವು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲಾ ಪಕ್ಷದವರಿಗೂ ಕಾರ್ಯಕ್ರಮ ನಡೆಸಲು ಸಭಾಂಗಣ ಕೊಟ್ಟಿದ್ದೇವೆ. ಎಲ್ಲಾ ಧರ್ಮಗಳ ಜನರಿಗೂ ಇಲ್ಲಿ ಸಭಾಂಗಣ ಕೊಟ್ಟಿದ್ದೇವೆ. ಮಾತಾಜಿಯವರ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ,” ಎಂದರು.
“ಸಭಾ ಮಂಟಪ ಕೊಡುವಾಗ ನಾವು ಬಾಡಿಗೆಯನ್ನೂ ನಿರೀಕ್ಷಿಸುವುದಿಲ್ಲ. ಅವರು ಕೊಡುವ ಕಾಣಿಕೆಯನ್ನು ಸ್ವೀಕರಿಸುತ್ತೇವೆ,” ಎಂದರು.
ಆರೆಸ್ಸೆಸ್ಸಿನವರು ಮತ್ತೆ ಕೇಳಿದರೆ ಸಭಾ ಮಂಟಪ ಕೊಡುತ್ತೀರಾ, ಎಂದು ಕೇಳಿದೆವು. “ಅವರು ಮತ್ತೆ ಕೇಳಿದರೆ ಕಮಿಟಿ ನಿರ್ಣಯದಂತೆ ನಡೆಯುತ್ತೇವೆ,” ಎಂದು ಸ್ವಾಮೀಜಿ ಹೇಳಿದರು.

ಸಿದ್ಧರಾಮ ಸ್ವಾಮಿಯೆ RSS ನವರಿಗೆ ಚಟುವಟಿಕೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದಾರೆ ಎನ್ನುವ
ವೀರೇಶ್ ಗಂಗಾವತಿಯವರ ಈ ಆಡಿಯೊ ಇದೆ
ಬಸವಣ್ಣನವರ ಪುತ್ತಿಳಿಯ ಮುಂದೆ, ಬಸವಣ್ಣನವರ ಕ್ಷೇತ್ರದಲ್ಲಿ RSS ಪ್ರಾರ್ಥನಾ ಗೀತೆ ಹಾಡಿರುವುದು ಖಂಡನಾರ್ಹ.