ಕಾಳಗಿ
ಕಾಳಗಿ, ಚಿಂಚೋಳಿ ತಾಲೂಕುಗಳ 50 ಗ್ರಾಮಗಳಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸುತ್ತೇವೆ ಎಂದು ಚಿಂಚೋಳಿ ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶರಣು ಪಾಟೀಲ ಮೋತಕಪಳ್ಳಿ ಹೇಳಿದ್ದಾರೆ.
ತಾಲೂಕಿನ ಹಲಚೇರಾ ಗ್ರಾಮದಲ್ಲಿ ಈಚೆಗೆ ನಡೆದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರ ಮೂರ್ತಿ ಲೋಕಾರ್ಪಣೆ ಹಾಗೂ ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಗ್ರಾಮಗಳ ಜನರು ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾದರೆ ಮಹಾಸಭೆಯ ವತಿಯಿಂದ ತನು-ಮನ-ಧನದಿಂದ ಸೇವೆ ಸಲ್ಲಿಸುತ್ತೇವೆ,” ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಕಾಳಗಿ ಬಸವೇಶ್ವರ ಮೂರ್ತಿ ಲೋಕಾರ್ಪಣೆ ಮಾಡಿದರು.
ಭರತನೂರಿನ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಬಸವಣ್ಣನವರ ಆದರ್ಶ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕಿದೆ ಎಂದು ತಿಳಿಸಿದರು.
ರಾಜ್ಯ ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಠೋಡ ಮಾತನಾಡಿ, ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾನತೆ ಮತ್ತು ಸ್ವಸ್ಥ ಜೀವನದ ಬುನಾದಿ ಹಾಕಿಕೊಟ್ಟವರು, ಎಂದು ಹೇಳಿದರು.

ಬೆಂಗಳೂರು ಬಾಲಭವನದ ಉಪಾಧ್ಯಕ್ಷ ಅನೀಲಕುಮಾರ ಜಮಾದಾರ, ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಮನೋರ, ಪತ್ರಕರ್ತ ಜಗನ್ನಾಥ ಸೇರಿಕಾರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹಲಚೇರಾ ಗ್ರಾಮದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆಗೆ ಕಾರಣಿಕರ್ತರಾದ ಬೆಂಗಳೂರು ಬಾಲ ಭವನದ ಉಪಾಧ್ಯಕ್ಷ ಅನೀಲ ಜಮಾದಾರ ಅವರಿಗೆ ಗ್ರಾಮಸ್ಥರು ಸತ್ಕರಿಸಿ ಗೌರವಿಸಿದರು.

ಹೋಸಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯ ಸಾನಿದ್ಯ ವಹಿಸಿದ್ದರು, ರಟಕಲ್ ವಿಎಸ್ಎಸ್ಎನ್ ಅಧ್ಯಕ್ಷ ರೇವಣಸಿದ್ದ ಬಡಾ, ಮಲ್ಲಿನಾಥ ಕೊಲಕುಂದಿ, ಮಲ್ಲಿನಾಥ ಪಾಟೀಲ ಕಾಳಗಿ, ಜಗನ್ನಾಥ ಈದಲಾಯಿ, ಸಂತೋಷ ಕುಮಾರ ಚಿಂಚೋಳಿ, ಗುರುನಾಥ ವಿಂಬ್ರಶೆಟ್ಟಿ, ಸೋಮಶೇಖರ್ ಚಿಂಚೋಳಿ, ಶ್ರೀಮಂತ ಸೇರಿ, ವಿಜಯಕುಮಾರ ಮಾನಕಾರ, ಮಲ್ಲಿಕಾರ್ಜುನ ಪೋಲಿಸ್ ಪಾಟೀಲ, ವಿರೇಶ ಎಂಪಳ್ಳಿ, ಶಿವಯ್ಯ ಸ್ವಾಮಿ ಮಡಪತ್ತಿ, ನಂದಕುಮಾರ ಪಾಟೀಲ, ಶಿವಕುಮಾರ ಸಜ್ಜನ ಸುಲೇಪೆಟ, ಸಿದ್ದು ಕಲಬುರಗಿ, ಎಎಸ್ಐ ಪ್ರಭಾಕಾ ಸೇರಿದಂತೆ ಅನೇಕರು ಇದ್ದರು.
ರಾಘವೇಂದ್ರ ಬೆಳಗುಂಪಿ ಸ್ವಾಗತಿಸಿದರು, ಸಂಗೀತ ಶಿಕ್ಷಕ ರೇವಣಸಿದ್ದಯ್ಯ ಸ್ವಾಮಿ ಪ್ರಾರ್ಥಿಸಿದರು, ಗುರುನಾಥ ವಿಂಬ್ರಶೆಟ್ಟಿ ನಿರೂಪಿಸಿ ವಂದಿಸಿದರು.
