ಹಾಸನ: ಬಸವ ನಾಗೇಶ್ವರ ಕ್ರಿಕೆಟ್ ತಂಡಕ್ಕೆ “ಬಸವ ಕಪ್”

ಬಸವ ಮೀಡಿಯಾ
ಬಸವ ಮೀಡಿಯಾ

ಹಾಸನ :

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ಜಿಲ್ಲಾ ಯುವ ಘಟಕದ ವತಿಯಿಂದ ಇದೇ ಮೊದಲ ಬಾರಿಗೆ ನಗರದ ಯುನೈಟೆಡ್‌ ಸಿ‌.ಎಂ.ಸಿ. ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ “ಬಸವ ಕಪ್” ಟೆನ್ನಿಸ್ ಬಾಲ್ ಕ್ರಿಕೆಟ್ ಲೀಗ್ ಪಂದ್ಯಾವಳಿಗಳು ನಡೆದವು.

ಎರಡು ದಿನ ನಡೆದ ಸ್ಪರ್ಧೆಗಳಲ್ಲಿ ಅಂತಿಮವಾಗಿ ಮೊದಲ ಸ್ಥಾನವನ್ನು ” ಶ್ರೀ ಬಸವ ನಾಗೇಶ್ವರ ಚನ್ನರಾಯಪಟ್ಟಣ” ತಂಡ ಗೆದ್ದು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಎರಡನೇ ಸ್ಥಾನವನ್ನು “ಜೇನುಕಲ್ ಕ್ರಿಕೆಟರ್ಸ್ ಅರಸೀಕೆರೆ” ಹಾಗೂ ತೃತೀಯ ಸ್ಥಾನವನ್ನು “ಪಂಚಪೀಠ ವಾರಿಯರ್ಸ್‌ ಸಕಲೇಶಪುರ” ಮತ್ತು “ಶೈವ ಕ್ರಿಕೆಟರ್ಸ್ ಹಾಸನ” ತಂಡಗಳು ಪಡೆದುಕೊಂಡವು. ಹಾಸನದ ಹೇಮಂತ ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿ ಪಡೆದುಕೊಂಡರು.

ಈ ಪಂದ್ಯಾವಳಿಯು ಮಹಾಸಭಾದ ಜಿಲ್ಲಾಧ್ಯಕ್ಷರಾದ ನವಿಲೆ ಪರಮೇಶಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷರಾದ ಮನೋಹರ ಅಬ್ಬಿಗೆರೆ, ಸಮಾಜದ ಮುಖಂಡರಾದ ಎಸ್.ಎನ್. ಈಶ್ವರಪ್ಪ, ಜಿ.ವಿ.ಟಿ. ಬಸವರಾಜಣ್ಣ, ಗ್ರಾನೈಟ್ ರಾಜಶೇಖರಣ್ಣ, ಆಲೂರು ತಾಲ್ಲೂಕು ಅಧ್ಯಕ್ಷರಾದ ಅಜಿತಣ್ಣ, ಯು.ಎಸ್ ಬಸವರಾಜು, ಚಲನಚಿತ್ರ ನಟರಾದ ಯು.ಬಿ. ಮನು, ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಮತಿ, ಹಾಸನ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಪಾಟೀಲ, ಬೇಲೂರು ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿಂಪು ಸಂತೋಷ, ರಾಜ್ಯ ಕಾರ್ಯದರ್ಶಿ ವಿಕ್ರಮ ಕೌರಿ, ನಿರ್ದೇಶಕರಾದ ಶರತ್ ಭೂಷಣ, ಅಕ್ಷತಾ, ಲೋಹಿತ ಜಂಭರಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ, ಯುವ ಘಟಕದ ಅಧ್ಯಕ್ಷ ಅವಿನಾಶ ಜಿ.ಎಸ್. ಅವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *