ಬಸವಕಲ್ಯಾಣದಲ್ಲಿ ಮೂರು ದಿನಗಳ ಬಸವ ಸಂಸ್ಕೃತಿ ಚಿಂತನ ಶಿಬಿರ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ :

ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು ನಮ್ಮ ದೇಶದ ಶ್ರೇಷ್ಠ ಸಂಘಟಕರಾಗಿದ್ದರು. ಯಾವುದೇ ಭೇದಭಾವವಿಲ್ಲದೆ ಸರ್ವರನ್ನು ಒಗ್ಗೂಡಿಸಿ, ಅನುಭವ ಮಂಟಪ ಎಂಬ ಸಂಸ್ಥೆ ಕಟ್ಟಿದರು. ಅವರ ಚಿಂತನೆಗಳನ್ನು ಮೆಲುಕು ಹಾಕುವ ಮೂಲಕ ನಾವೆಲ್ಲರೂ ಬಸವ ಸಂಸ್ಕೃತಿ ಮತ್ತೊಮ್ಮೆ ಗಟ್ಟಿಗೊಳಿಸಬೇಕಾಗಿದೆ. ಅದಕ್ಕಾಗಿ ಯುವಕರು ವಚನ ಅರಿವು ಮೂಡಿಸಿಕೊಂಡು ಸಂಘಟಿತರಾಗುವುದು ಕಾಲದ ಬೇಡಿಕೆಯಾಗಿದೆ.

ಆ ದಿಶೆಯಲ್ಲಿ ವಿಶ್ವ ಬಸವಧರ್ಮ ಟ್ರಸ್ಟ್, ಅನುಭವ ಮಂಟಪ ಬಸವಕಲ್ಯಾಣ ಹಾಗೂ ಬಸವಕಲ್ಯಾಣ ಕ್ಷೇತ್ರ ಸಮಿತಿ, ಬಸವಕಲ್ಯಾಣ ವತಿಯಿಂದ ಪೂಜ್ಯ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹಾಗೂ ಪೂಜ್ಯ ಗುರುಬಸವ ಪಟ್ಟದ್ದೇವರ ಸಾನಿಧ್ಯದಲ್ಲಿ ಬಸವಕಲ್ಯಾಣದ ಅನುಭವಮಂಟಪ ಆವರಣದಲ್ಲಿ ದಿನಾಂಕ: ಮೇ 26, 2026 ರಿಂದ 28 ರವರೆಗೆ ಮೂರು ದಿವಸಗಳು ಬಸವ ಸಂಸ್ಕೃತಿ ಚಿಂತನ ಶಿಬಿರ ಆಯೋಜಿಸಲಾಗಿದೆ.

20 ರಿಂದ 40 ವಯಸ್ಸಿನ ಬಸವತತ್ವ ನಿಷ್ಠಾವಂತರು, ಕಾರ್ಯಕರ್ತರು ಹಾಗೂ ಬಸವಾಭಿಮಾನಿಗಳು ಈ ಚಿಂತನ ಶಿಬಿರದಲ್ಲಿ ಭಾಗಿಯಾಗಲು ಈ ಮೂಲಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 8971948583, 9449808684, 9172319620, 9964036949 ಈ ಮೊಬೈಲ್ ಸಂಖ್ಯೆಗಳ ಮುಖಾಂತರ ಸಂಪರ್ಕಿಸಬಹುದು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *