ಇಂದಿನ ಚರ್ಚೆಯ ಅತಿಥಿಗಳು: ವಿಶ್ವಾರಾಧ್ಯ ಸತ್ಯಂಪೇಟೆ, ಶಹಾಪುರ, ಟಿ.ಎಚ್. ಬಸವರಾಜ, ವಿಜಯನಗರ (ರಾತ್ರಿ 8 ಗಂಟೆ)
ಬೆಂಗಳೂರು
ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿದ್ದ ಸಿದ್ದರಾಮಯ್ಯ ರಾಜಿನಾಮೆ ನೀಡಿದ್ದಾರೆ.
ಅವರ ನಿರ್ಗಮನದಿಂದ ಬದಲಾಗುತ್ತಿರುವ ರಾಜಕೀಯ ಚಿತ್ರಣದ ಬಗ್ಗೆ ಬಸವ ಸಂಘಟನೆಗಳು, ಕಾರ್ಯಕರ್ತರು ಜಾಗೃತರಾಗುವ ಅನಿವಾರ್ಯತೆಯಿದೆ.
ಈ ಬೆಳವಣಿಗೆಗಳನ್ನು ವಿಶ್ಲೇಷಿಸಲು ಹೆಸರಾಂತ ಚಿಂತಕರಾದ ವಿಶ್ವಾರಾಧ್ಯ ಸತ್ಯಂಪೇಟೆ ಹಾಗೂ ಟಿ.ಎಚ್. ಬಸವರಾಜ ಇಂದು ರಾತ್ರಿಯ ಬಸವಶಕ್ತಿ ಚರ್ಚೆಯಲ್ಲಿ ಮುಖ್ಯ ಅತಿಥಿಗಳಾಗಿ ಬರಲಿದ್ದಾರೆ.
ವಿಶ್ವಾರಾಧ್ಯ ಸತ್ಯಂಪೇಟೆ ಅವರು ಹೆಸರಾಂತ ಪತ್ರಕರ್ತರು, ಶರಣ ಸಾಹಿತಿಗಳು, ವಚನ ಚಿಂತಕರು, ಮತ್ತು ಪ್ರವಚನಕಾರರಾಗಿದ್ದಾರೆ. ಬಸವ ಮಾರ್ಗ ಡಿಜಿಟಲ್ ಪತ್ರಿಕೆಯ ಸಂಪಾದಕರಾಗಿರುವ ಸತ್ಯಂಪೇಟೆ ಲಿಂಗಾಯತ ಧರ್ಮದ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಟಿ.ಎಚ್. ಬಸವರಾಜ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸಪೇಟೆಯ ಇಷ್ಟಲಿಂಗ ಅಧ್ಯಯನ ಕೇಂದ್ರದ ಟ್ರಸ್ಟಿಗಳಲ್ಲಿ ಒಬ್ಬರು. ನೂರಾರು ದೇವದಾಸಿ ತಾಯಂದಿರರಿಗೆ ಇಷ್ಟಲಿಂಗ ದೀಕ್ಷೆ ನೀಡಿದ್ದಾರೆ. ಬಸವತತ್ವ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಈ ಕಾರ್ಯಕ್ರಮದಿಂದ ಬಸವಶಕ್ತಿ ಸರಣಿ ಉಪನ್ಯಾಸ, ಶಿಬಿರಗಳೂ ಶುರುವಾಗುತ್ತಿವೆ. ಬಸವ ಸಂಘಟನೆಗಳ, ಕಾರ್ಯಕರ್ತರ ರಾಜಕೀಯ ಪ್ರಜ್ಞೆ ಹಾಗೂ ಪ್ರಭಾವ ಬೆಳೆಸುವುದು ಬಸವಶಕ್ತಿ ಕಾರ್ಯಕ್ರಮದ ಮುಖ್ಯ ಉದ್ದೇಶ.
ದಿನಾಂಕ: ಮೇ 31
ಸಮಯ: ರಾತ್ರಿ 8-9
ಚರ್ಚೆಯಲ್ಲಿ ಭಾಗವಹಿಸಲು ಗೂಗಲ್ ಮೀಟ್ ಲಿಂಕ್
https://meet.google.com/qur-quxi-jrh
ಬಸವ ಮೀಡಿಯಾ ತಂಡದ ಎಚ್ ಎಂ ಸೋಮಶೇಖರಪ್ಪ ಹಾಗೂ ಅಪರ್ಣ ವಾಲಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಎಲ್ಲರಿಗೂ ಸ್ವಾಗತ.
ಚರ್ಚೆಯ ವಿಷಯ
ಸಿದ್ದರಾಮಯ್ಯ ಮತ್ತು ಲಿಂಗಾಯತ ಧರ್ಮ ಹೋರಾಟ
1) ಲಿಂಗಾಯತ ಧರ್ಮ ಹೋರಾಟಕ್ಕೆ ಸಿದ್ದರಾಮಯ್ಯನವರ ಕೊಡುಗೆ. ಅದರ ಮಹತ್ವ
– ಅತಿ ದೊಡ್ಡ ಕೊಡುಗೆಯೇನು, ಅದರ ಮಹತ್ವ
2) ಲಿಂಗಾಯತ ಧರ್ಮ ಹೋರಾಟದಲ್ಲಿ ಒಟ್ಟಾರೆ ಕಾಂಗ್ರೆಸ್ ಪಾತ್ರವೇನು
– ಇದನ್ನು ಸಿದ್ದರಾಮಯ್ಯನವರ ಪಾತ್ರದಿಂದ ಭಿನ್ನವಾಗಿ ನೋಡಬೇಕೆ
3) ಸಿದ್ದರಾಮಯ್ಯನವರ ರಾಜೀನಾಮೆಯಿಂದ ಲಿಂಗಾಯತ ಧರ್ಮ ಹೋರಾಟಕ್ಕೆ ಹಿನ್ನಡೆಯಾಗಿದೆಯೇ
4) ಮುಂದಿನ ಬೆಳವಣಿಗೆಗಳು, ಡಿ ಕೆ ಶಿವಕುಮಾರ್ ನಿಲುವು
– ಕಾಂಗ್ರೆಸ್ ನಿಲುವಿನ ಬಗ್ಗೆ ಶಿವಕುಮಾರ್ ಪಂಚಪೀಠಗಳಲ್ಲಿ ಕ್ಷಮಾಪಣೆ ಕೇಳಿದ್ದಾರೆ.
5) ಬಸವ ಸಂಘಟನೆಗಳ ಮುಂದಿನ ದಾರಿ

Sharanu 🙏 We had an amazing discussion yesterday with sharanas across the state and borders joining us and sharing their thoughts. Do join in if you practice and endorse Basava Tatva every day and want them to strengthen every family and society. It is not political discussion instead it is all about strengthening Lingayat community and understanding Basava tatva better.
ಸನ್ಮಾನ್ಯ ಸಿದ್ಧರಾಮಯ್ಯನವರು ಮುಖ್ಯ ಮಂತ್ರಿ ಸ್ಥಾನದಲ್ಲಿ ಇದ್ದಿರಲಿ ಅಥವಾ ಬಿಟ್ಟಿರಲಿ ಅವರು ಬಸವ ತತ್ವಾನುಯಾಯಿಗಳಾಗಿದ್ದಾರೆ.
ಬಸವ ತತ್ವಾನುಯಾಯಿಗಳು ಕೇವಲ ಕೆಲವೇ ಜಾತಿಯವರೆಂದು ಭಾವಿಸುವುದು ಬೇಡ.
ಪಂಚಪೀಠಾಧಿಪತಿಗಳನ್ನು ಎಂದೂ ಪೂಜ್ಯರನ್ನಾಗಿ ಕಾಣದ ಕೋಮುವಾದಿ ಆರ್.ಎಸ್.ಎಸ್.ನವರನ್ನು ಹಾಗೂ ಬಿ.ಜೆ.ಪಿ. ಯವರನ್ನು ಪಂಚಾಚಾರ್ಯರು, ವೀರಶೈವ ಮಠಾಧೀಶರು ಸೈದ್ಧಾಂತಿಕವಾಗಿ ವಿರೋಧಿಸಿಲ್ಲ. ಬಸವಾದಿ ಶರಣರ ಸಿದ್ಧಾಂತ ಮತ್ತು ಸಂವಿಧಾನದ ಹೆಗ್ಗುರಿಯಾದ ಸರ್ವಸಮಾನತೆ ಸಾಧಿಸುವುದರ ವಿರೋಧಿಗಳಾಗಿರುವವರನ್ನು ಗಮನದಲ್ಲಿರಿಸಬೇಕಾದ. ಸಕಲ ಜಾತಿಗಳಲ್ಲಿ ಇರುವ ಬಡವರ ಶಕ್ತಿಯೇ ಬಸವ ಶಕ್ತಿಯೆಂಬುದನ್ನು ಅರಿತುಕೊಳ್ಳುವುದು ಅತ್ಯಾವಶ್ಯಕವಾಗಿದೆ. ಅಂದರೆ ಉಳ್ಳವರನ್ನು ಒಳಗೊಳ್ಳಬಾರದೆಂದು ಭಾವಿಸಲೇಬಾರದು. ಭಕ್ತಿಭಂಡಾರಿಯೇ ಆಗಿದ್ದ ಬಸವಣ್ಣನವರು ಭಕ್ತಿ ಇಲ್ಲದ ಬಡವ ನಾನಯ್ಯನೆಂಬ ವಿನೀತ ಭಾವಭರಿತ ಸಕಲ ಸಂಪದ್ಭರಿತ ಬಸವ ಭಕ್ತರು ಸಮರಸ ಮನೋಭಾವದಿಂದ ಬೆಳೆಯುವುದು ಅತ್ಯವಶ್ಯವಾಗಿದೆ.