ನಂಜನಗೂಡು
ಬಸವತತ್ವ ಪ್ರಚಾರಕ ಎ.ಬಿ.ಬಸವ ಯೋಗೇಶ್ ಅವರಿಗೆ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಬಸವ ಯೋಗಾಶ್ರಮ ಟ್ರಸ್ಟಿನ ವತಿಯಿಂದ ‘ರಾಷ್ಟ್ರೀಯ ಬಸವ ಶ್ರೀ ಪ್ರಶಸ್ತಿ’ಯನ್ನು ಈಚೆಗೆ ಪ್ರದಾನ ಮಾಡಲಾಯಿತು.
ವಿಶ್ವ ಬಸವಸೇನೆಯ ಅಧ್ಯಕ್ಷರೂ ಯೋಗೇಶ್ ಬಸವತತ್ವದ ಪ್ರಚಾರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ನಂಜನಗೂಡು,ಗುಂಡ್ಲುಪೇಟೆ, ಚಾಮರಾಜನಗರ, ಮೈಸೂರು, ಟಿ. ನರಸೀಪುರ ಭಾಗಗಳಲ್ಲಿ ನಿಜಾಚರಣೆ ಹಾಗೂ ವಚನ ಕಂಠಪಾಠ ಸ್ಪರ್ಧೆಗಳನ್ನು ಆಯೋಜಿಸುವುದರಲ್ಲಿ ಯೋಗೇಶ್ ಸಕ್ರಿಯವಾಗಿದ್ದಾರೆ.
ಜೊತೆಗೆ ನಂಜನಗೂಡಿನ ರಸ್ತೆ, ವೃತ್ತ, ಪಾರ್ಕುಗಳಿಗೆ ಶರಣರ ಹೆಸರಿಡಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.

