ಬಸವಾದಿ ಶರಣರ ಹಿಂದೂ ಸಮಾವೇಶ ವಿರೋಧಿಸಿ ಬೃಹತ್ ಪ್ರತಿಭಟನೆಗೆ ಚಾಲನೆ

ಕಲಬುರಗಿ:

ಸೆ. 27ರಂದು ಕಲಬುರಗಿಯಲ್ಲಿ ಹಮ್ಮಿಕೊಂಡ ಬಸವಾದಿ ಶಿವಶರಣರ ಹಿಂದೂ ಸಮಾವೇಶ ವಿರೋಧಿಸಿ ಇಲ್ಲಿನ ಬಸವತತ್ವ ಹಾಗೂ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಗೆ ನಗರದ ಕನ್ನಡ ಭವನದಲ್ಲಿ ಚಾಲನೆ ನೀಡಲಾಯಿತು.

ಕನ್ನಡ ಭವನದಲ್ಲಿ ಜಮಾಯಿಸಿದ ಸಹಸ್ರಾರು ಜನತೆ ಆರಂಭದಲ್ಲಿ ಗೋ ಬ್ಯಾಕ್ ಕನ್ನೇರಿ ಸ್ವಾಮಿ, ಬೇಕೇ ಬೇಕು ಬಸವಣ್ಣ ಬೇಕು, ಬೇಕೆ ಬೇಕು ಸಂವಿಧಾನ ಬೇಕು ಎಂದು ಘೋಷಣೆ ಕೂಗಿದರು. ಗಲ್ಲಿ ಗಲ್ಲಿ ಮೇ ಶೋರ್ ಹೈ, ಕನ್ನೇರಿ ಸ್ವಾಮಿ ಚೋರ್ ಹೈ, ಆಗ ಮುಕುಂದ ಭಟ್ಟ ಮುರಾರಿ ಭಟ್ಟ, ಈಗ ಕನೇರಿ ಸ್ವಾಮಿ, ಮತಾಂಧ ಕನ್ನೇರಿ ಸ್ವಾಮಿಗೆ ಧಿಕ್ಕಾರ, ಧಿಕ್ಕಾರ ಎಂಬ ಬಿತ್ತಿಪತ್ರ ಹಿಡಿದು ಘೋಷಣೆಗಳನ್ನು ಕೂಗಿದರು.

ಬಸವಾದಿ ಶರಣರನ್ನು ಹಿಂದುತ್ವದೊಂದಿಗೆ ಸೇರಿಸಲು ಬಿಡುವುದಿಲ್ಲ, ವಚನಗಳನ್ನು ದುರ್ಬಳಕೆ ಮಾಡಿಕೊಳ್ಳಲು ಬಿಡುವುದಿಲ್ಲ, ಬಸವಾದಿ ಶರಣರನ್ನು ವೈದಿಕರೊಂದಿಗೆ ಸೇರಿಸುತ್ತಿರುವವರಿಗೆ ಹೇಳಿ ಧಿಕ್ಕಾರ, ವಚನಗಳನ್ನು ತಿರುಚುತ್ತಿರುವವರಿಗೆ ಹೇಳಿ ಧಿಕ್ಕಾರ, ಶರಣ ಸಂತ-ಸೂಫಿಗಳ ನಾಡಿನಲ್ಲಿ ಕೋಮುವಾದಿಗಳಿಗೆ ಜಾಗವಿಲ್ಲ, ಬಸವತತ್ವ ಸಂವಿಧಾನ ಹಾಳು ಮಾಡಲು ಬಿಡುವುದಿಲ್ಲ ಎಂದು ಘೋಷಣೆ ಕೂಗಿದರು. ನಂತರ ವಚನ ಉಗ್ಘಡಣೆ ಮಾಡಿದರು.

ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ಮೂಲಕ ಜಗತ್ ವೃತ್ತ ತಲುಪಿತು.

ಜಿಲ್ಲೆಯ ಆಳಂದ, ಅಫಜಲಪುರ, ಚಿಂಚೋಳಿ, ಶಹಾಬಾದ, ಜೇವರ್ಗಿ, ಚಿತ್ತಾಪುರ ಮುಂತಾದ ಕಡೆಗಳಿಂದ, ಹೊರ ಜಿಲ್ಲೆಗಳ ಸಹಸ್ರಾರು ಬಸವಾಭಿಮಾನಿಗಳು, ಸಂವಿಧಾನ ರಕ್ಷಕರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
Leave a comment

Leave a Reply

Your email address will not be published. Required fields are marked *