ಲಿಂಗೈಕ್ಯ ಮಹಾದೇವ ಕುಂಬಾರ ಅವರಿಗೆ ನುಡಿ ನಮನ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

 ಭಾಲ್ಕಿ:

ಬಸವಾದಿ ಶಿವಶರಣರ ವಚನ ಸಾಹಿತ್ಯವನ್ನು ಪ್ರಚಾರ, ಪ್ರಸಾರ ಮಾಡಿದ ಬೆಳಗಾವಿ ಜಿಲ್ಲೆ ಹುಕ್ಕೇರಿಯ ಲಿಂಗೈಕ್ಯ ಶರಣ ಮಹದೇವ ಕುಂಬಾರ ಅವರ ನುಡಿ ನಮನ ಕಾರ್ಯಕ್ರಮ ನಡೆಯಿತು.

ಹಿರೇಮಠ ಸಂಸ್ಥಾನದ ಹಿರಿಯ ಪೀಠಾಧಿಪತಿಗಳಾದ ನಾಡೋಜ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಿ, ಶ್ರೀಯುತರು ಶ್ರೀಮಠಕ್ಕೆ ನಾಲ್ಕು ದಶಕಗಳಿಂದ ಭಕ್ತಿ ಸಂಬಂಧ ಹೊಂದಿದವರು.

ಶ್ರೀಮಠದ ಎಲ್ಲಾ ಕಾರ್ಯಕ್ರಮಗಳಿಗೆ ದಾಸೋಹಿಗಳಾಗಿದ್ದರು.

 ಮನೆಯಲ್ಲಿ ಮಹಾಮನೆ ಕಾರ್ಯಕ್ರಮದ ಮೂಲಕ ಬಸವಾದಿ ಶಿವಶರಣರ ತತ್ವಗಳನ್ನು ಬೆಳಗಾವಿ ಜಿಲ್ಲೆಯ ಬಸವ ಭಕ್ತರಿಗೆ ಮನಮುಟ್ಟುವಂತೆ ವಿನೂತನ ಕಾರ್ಯಕ್ರಮಗಳನ್ನು ಮಾಡಿ ಪ್ರಚಾರ, ಪ್ರಸಾರ ಮಾಡಿದ ಶರಣರು ಎಂದು ತಮ್ಮ ಆಶೀರ್ವಚನದಲ್ಲಿ ನೆನಪಿಸಿಕೊಂಡರು.

ತಮ್ಮ ಮನೆಯನ್ನೇ ಅನುಭವ ಮಂಟಪ ಮಾಡಿಕೊಂಡು ದಿನನಿತ್ಯ ಚಿಂತನೆಗಳನ್ನು ಮಾಡುತ್ತಾ ಕೊನೆಯ ಉಸಿರು ಇರುವವರೆಗೂ ಸೇವೆಗೈದ ಶರಣರಿಗೆ ನುಡಿ ನಮನಗಳನ್ನು ಸಲ್ಲಿಸಿದರು.

ಸಮ್ಮುಖವನ್ನು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಗುರುಬಸವ ಪಟ್ಟದ್ದೇವರು, ಲಿಂಗೈಕ್ಯರಾದ ಮಹಾದೇವ ಕುಂಬಾರ ಅವರ 40 ವರ್ಷಗಳ ಸುದೀರ್ಘ ಶ್ರೀಮಠದ ಭಕ್ತಿ ಸಂಬಂಧ ಬಗ್ಗೆ ಎಲ್ಲರಿಗೂ ಮನಮುಟ್ಟುವಂತೆ ಬಿಚ್ಚಿಟ್ಟರು.

ಅಧ್ಯಕ್ಷತೆಯನ್ನು ಶರಣ ಸಾಹಿತ್ಯ ಪರಿಷತ್ತು ಬೀದರ ಜಿಲ್ಲಾಧ್ಯಕ್ಷರಾದ ಪ್ರೊ. ಶಂಭುಲಿಂಗ ಕಾಮಣ್ಣ ವಹಿಸಿ, ಶರಣರಾದ ಮಹಾದೇವ ಕುಂಬಾರ ಅವರ ಬಗ್ಗೆ ಹಾಗೂ ಲಿಂಗೈಕ್ಯ ಶರಣ ವೀರಣ್ಣ ಕುಂಬಾರ ಅವರು ಶ್ರೀಮಠದಲ್ಲಿ ಇದ್ದು ಕಾರ್ಯಕ್ರಮದ ನಿರೂಪಣೆ ಶೈಲಿ ಹಾಗೂ ಅವರ ಕಾರ್ಯ ವೈಖರಿಯ ಬಗ್ಗೆ ತಮ್ಮ ಮಾರ್ಮಿಕವಾದ ನುಡಿಗಳಿಂದ ತಮ್ಮ ನುಡಿ ನಮನಗಳನ್ನು ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಚಾರ್ಯರಾದ ಚಂದ್ರಕಾಂತ ಬಿರಾದಾರ ಅವರು ವಹಿಸಿ, ಕುಂಬಾರರ ಕುರಿತು ಅವರೊಂದಿಗೆ ಅವಲೋಕಿಸಿದ ಶರಣತತ್ವಗಳ ಕುರಿತು ಚಿಂತನ ಮಂಥನಗಳನ್ನು ಮಾಡಿದ ಕೆಲವೊಂದು ನೆನಪುಗಳನ್ನು ಮೆಲುಕು ಹಾಕಿ ತಮ್ಮ ನುಡಿ ನಮನಗಳನ್ನು ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕದ ಪ್ರೊ. ಮಲ್ಲಮ್ಮ ಪಾಟೀಲ ವಹಿಸಿಕೊಂಡಿದ್ದರು. ಕುಂಬಾರ ಅವರ ಕುರಿತು ತಮ್ಮ ನುಡಿ ನಮನವನ್ನು ಸಲ್ಲಿಸಿದರು.

ಸರ್ಕಾರಿ ಪ್ರಾಥಮಿಕ ಶಾಲೆ, ಸಿದ್ದಾಪುರವಾಡಿ, ಸಹಶಿಕ್ಷಕಿ ಭಾರತಿ ಪ್ರಭುದೇವ ಕುಂಬಾರ ಅವರು ಗೌರವ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪೂಜ್ಯ ಸಿದ್ದ ಬಸವ ಮಹಾಸ್ವಾಮಿಗಳು ಹಾಗೂ ಪೂಜ್ಯ ಶಿವಬಸವ ಮಹಾಸ್ವಾಮಿಗಳು ಇದ್ದರು.

ಖಡಕೇಶ್ವರ ಶಾಲೆಯ ಮುಖ್ಯ ಗುರುಗಳಾದ ಶಿವಲಿಂಗ ಕುಂಬಾರ ದಂಪತಿಗಳು, ಜೈ ಹಿಂದ ಕುಂಬಾರ ಶರಣರು, ಗುಂಡಪ್ಪ ಸಂಗಂಕರ, ರಾಚಪ್ಪ ಗೋರ್ಟೆ, ಶ್ರೀಮಠದ ಭಕ್ತರು, ಚನ್ನಬಸವೇಶ್ವರ ವಸತಿ ಶಾಲೆಯ ಮಕ್ಕಳು, ಕುಂಬಾರ ಕುಟುಂಬದ ಸದಸ್ಯರುಗಳಾದ ಪ್ರಭುದೇವ ಕುಂಬಾರ, ಶ್ರೀದೇವಿ ಕುಂಬಾರ ಉಪಸ್ಥಿತರಿದ್ದರು.

ಹಿರೇಮಠ ಸಂಸ್ಥಾನ ಆವರಣದಲ್ಲಿ ನಡೆಯುವ ಗುರುಪ್ರಸಾದ ಶಾಲೆಯ ಮುಖ್ಯೋಪಾಧ್ಯಾಯರಾದ ಬಾಬು ಬೆಲ್ದಾಳ ಕಾರ್ಯಕ್ರಮವನ್ನು ನಿರೂಪಿಸಿದರು. ಲಿಂಗೈಕ್ಯ ಮಹಾದೇವ ಕುಂಬಾರರ ಸುಪುತ್ರ ಶಿವಪ್ರಕಾಶ ಕುಂಬಾರ ಸ್ವಾಗತಿಸಿದರು. ಪ್ರಜ್ವಲ ಕುಂಬಾರ ಪ್ರಾರ್ಥನಾ ಗೀತೆ ಹಾಡಿದರು. ಪ್ರಭುದೇವ ಕುಂಬಾರ ಎಲ್ಲರಿಗೂ ಶರಣು ಸಮರ್ಪಣೆ ಸಲ್ಲಿಸಿದರು. ಮಂಗಲ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *