ಬಸವ ಜಯಂತಿಯಲ್ಲಿ ರೇಣುಕಾ ಚಿತ್ರ ಹಾಕಿ: ಮಾಜಿ ಬಿಜೆಪಿ ಶಾಸಕರ ಗಲಾಟೆ

ವೇದಿಕೆಯಿಂದಲೇ ಬಸವ ಭಕ್ತರ ಪ್ರತಿರೋಧ: ಅಪ್ಪನಿಗೆ ಅಪ್ಪ ಎನ್ನುತೇವೆ, ಬೇರೆಯವರಿಗಲ್ಲ

ಚಿಂಚೋಳಿ

ಬಸವ ಜಯಂತಿ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯರ ಭಾವಚಿತ್ರ ಹಾಕಿಲ್ಲವೆಂದು ಸೇಡಂನ ಮಾಜಿ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಸಿಟ್ಟಿಗೆದ್ದು ಮಾತನಾಡಿದರು.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಬಸವ ಅವರ ಭಕ್ತರು ಅವರ ಭಾಷಣವನ್ನು ಅಡ್ಡಿಪಡಿಸಲು ಪ್ರಯತ್ನಿಸಿದರು. ನಂತರ ಮಾತನಾಡಿದ ಅನೇಕರು ವೇದಿಕೆಯಿಂದಲೇ ಮಾಜಿ ಶಾಸಕರನ್ನು ತರಾಟೆಗೆ ತೆಗೆದುಕೊಂಡರು.

ಈ ವಾದ ವಿವಾದಗಳು ಪಟ್ಟಣದಲ್ಲಿ ಬಸವ ಜಯಂತ್ಯೋತ್ಸವ ಸಮಿತಿ ನೇತೃತ್ವದಲ್ಲಿ ಶುಕ್ರವಾರ ನಡೆದ ತಾಲೂಕು ಮಟ್ಟದ ಬಸವ ಜಯಂತಿ ಕಾರ್ಯಕ್ರಮದಲ್ಲಿ ನಡೆದವು.

ಕಾರ್ಯಕ್ರಮದಲ್ಲಿ ಮೊದಲು ಸಚಿವ ಶರಣ ಪ್ರಕಾಶ ಪಾಟೀಲ, ಸಂಸದ ಸಾಗರ ಖಂಡ್ರೆ, ಶಾಸಕ ಅವಿನಾಶ ಜಾಧವ ಭಾಗವಹಿಸಿ ಮಾತನಾಡಿ ತೆರಳಿದರು. ಅವರ ನಂತರ ಭಾಷಣ ಮಾಡಲು ಬಂದ ತೇಲ್ಕೂರ ಆಮಂತ್ರಣ ಪತ್ರಿಕೆಯಲ್ಲಿ ರೇಣುಕಾಚಾರ್ಯರ ಫೋಟೊ ಹಾಕಿ‌ ವೇದಿಕೆಯ ಬ್ಯಾನರ್‌ನಲ್ಲಿ ಬಿಟ್ಟಿದ್ದೇಕೆ ಎಂದು ಪ್ರಶ್ನಿಸಿದರು.

“ಬಸವಣ್ಣ ಮತ್ತು ರೇಣುಕಾಚಾರ್ಯರು ಸಮಾಜದ ಎರಡು ಕಣ್ಣುಗಳಿದ್ದಂತೆ. ರೇಣುಕಾ ಜಯಂತಿಯಲ್ಲಿ ಬಸವಣ್ಣನವರ ಚಿತ್ರ ಮತ್ತು ಬಸವ ಜಯಂತಿಯಲ್ಲಿ ರೇಣುಕಾಚಾರ್ಯರ ಚಿತ್ರ ಹಾಕಬೇಕೆಂದು,” ಎಂದು ತೇಲ್ಕೂರ ಹೇಳಿದರು.

“ವಚನಗಳನ್ನೇ ತಪ್ಪಾಗಿ ಅರ್ಥ ಮಾಡಿಕೊಂಡಿರುವ ಆಧುನಿಕ ಬಸವ ಅನುಯಾಯಿಗಳು ಬಸವಣ್ಣನವರನ್ನು ಕೋಟ್ಯಂತರ ಜನರಿಂದ ದೂರ ಮಾಡುತ್ತಿದ್ದಾರೆ. ವೀರಶೈವ, ಲಿಂಗಾಯತರು ಒಂದೇ, ಆದರೆ ರಾಜಕಾರಣಕ್ಕಾಗಿ ಸಮಾಜವನ್ನು ಒಡೆಯಲಾಗುತ್ತಿದೆ,” ಎಂದು ತೇಲ್ಕೂರ ಆರೋಪಿಸಿದರು.

ಆಧುನಿಕ ಬಸವ ಅನುಯಾಯಿಗಳು ಬಸವಣ್ಣನವರನ್ನು ಕೋಟ್ಯಂತರ ಜನರಿಂದ ದೂರ ಮಾಡುತ್ತಿದ್ದಾರೆ.

“ಲಿಂಗಾಯತ ಎಂದು ಕರೆದುಕೊಳ್ಳುವವರು ಸನಾತನ ಹಿಂದೂ ಧರ್ಮವನ್ನು ಟೀಕಿಸುವಂತೆ ಇಸ್ಲಾಂ ಮತ್ತು ಕ್ರೈಸ್ತ ಧರ್ಮವನ್ನು ಯಾಕೆ ಟೀಕಿಸುವುದಿಲ್ಲ. ಸನಾತನ ಹಿಂದೂ ಧರ್ಮ ಉಳಿದರೆ ದೇಶವುಳಿಯುತ್ತದೆ,” ಎಂದು ಹೇಳಿದರು.

ಅವರ ಮಾತುಗಳಿಂದ ಕೆರಳಿದ ಬಸವ ಭಕ್ತರು ವೇದಿಕೆಯಿಂದಲೇ ಅವರನ್ನು ತರಾಟೆ ತೆಗೆದುಕೊಂಡರು.

ಏರುಧ್ವನಿಯಲ್ಲಿಯೇ ಮಾತನಾಡುತ್ತ ಕಾರ್ಯಕ್ರಮ ನಿರೂಪಕ ವೀರಶೈವ ಮಹಾಸಭಾದ ತಾಲೂಕು ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಪಾಮನೂರ ತೇಲ್ಕೂರಗೆ ನಾವು ಅಪ್ಪನಿಗೆ ಅಪ್ಪ ಎನ್ನುತೇವೆ ಬೇರೆಯವರಿಗೆ ಅಪ್ಪ ಎನ್ನಲು ಆಗುವುದೇ ಎಂದು ಪ್ರಶ್ನಿಸಿದರು.

ನಾವು ಅಪ್ಪನಿಗೆ ಅಪ್ಪ ಎನ್ನುತೇವೆ ಬೇರೆಯವರಿಗೆ ಅಪ್ಪ ಎನ್ನಲು ಆಗುವುದೇ?

ಬಸವಣ್ಣನ ಹೆಸರು ಹೇಳಿದ್ದಕ್ಕೆ ನನಗೆ ಮಠಾಧೀಶರು ವೇದಿಕೆಯಿಂದ ಇಳಿಸಿದ್ದಾರೆ. ಯಾವ ಮಠಾಧೀಶರು ಜಗದ್ಗುರುಗಳೂ ಬಸವಣ್ಣನವರ ಫೋಟೊ ಹಾಕುತ್ತಿಲ್ಲ. ರೇಣುಕಾಚಾರ್ಯರ ಫೋಟೋ ಕೇಳುವ ಮೊದಲು ವೀರಶೈವ ಜಗದ್ಗುರುಗಳ ಮಠಗಳಲ್ಲಿ ಬಸವೇಶ್ವರ ಭಾವಚಿತ್ರ ಹಾಕಲು ಒತ್ತಾಯ ಮಾಡಿ ಎಂದು ಹೇಳಿದರು.

ನಂತರ ಭಾಷಣ ಮಾಡಿದವರೂ ತೇಲ್ಕೂರನ್ನು ವಿರೋದಿಸಿದರು.

ನಾರನಾಳ ಶ್ರೀ ಶಿವಕುಮಾರ ಶಿವಾಚಾರ್ಯರು ಮಾತನಾಡುತ್ತಾ, ಬಸವಣ್ಣ ನಮ್ಮೆಲ್ಲರ ಅಸ್ಮಿತೆ. ಬಸವಣ್ಣನವರನ್ನು ಮರೆತ ಮಠಗಳಿಗೆ ಭವಿಷ್ಯವಿಲ್ಲ. ಬಸವಣ್ಣ ನಮಗೆಲ್ಲ ಗುರು, ಅವರು ಬುನಾದಿ, ಆಲದ ಮರವಿದ್ದಂತೆ ಎಂದರು.

ಕಾರ್ಯಕ್ರಮ ಆಯೋಜಕರು, ವೀರಶೈವ ಮಹಾಸಭಾ ತಾಲೂಕ ಘಟಕದ ಅಧ್ಯಕ್ಷ ಶರಣು ಮೋತಕಪಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ವಿಷಯಾಂತರ ಬೇಡ. ನಾವಿಲ್ಲಿ ಲಿಂಗಾಯತ ವೀರಶೈವ ಎಲ್ಲರೂ ಒಗ್ಗಟ್ಟಾಗಿದ್ದೇವೆ, ಒಂದಾಗಿ ಬಸವ ಜಯಂತಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಹುಲಸೂರ ಮಠದ ಡಾ. ಶಿವಾನಂದ ಮಹಾಸ್ವಾಮಿಗಳು ಮಾತನಾಡುತ್ತ ಇದು ಬಸವ ಜಯಂತಿ ಕಾರ್ಯಕ್ರಮ. ವಿಷಯ ಬಿಟ್ಟು ಮಾತಾಡಬಾರದು. ವೀರಶೈವ ಲಿಂಗಾಯತ ಒಂದೇ ಎಂಬುದು ಸರಿಯಲ್ಲ. ಬಸವ ಜಯಂತಿಗೆ ರೇಣುಕಾಚಾರ್ಯ ಫೋಟೋ ಕೇಳುವುದು ಸರಿಯಲ್ಲ. ಕಾರ್ಯಕ್ರಮವನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುವುದು ಸಲ್ಲದು ಎಂದರು.

ರಾಷ್ಟ್ರೀಯ ಬಸವದಳದ ನಂದಿಕುಮಾರ ಪಾಟೀಲ, ಬಸವತತ್ವ ನಿಷ್ಟರಾದ ಮಂಜುನಾಥ ದುಬಲಗುಂಡೆ ರಾಜಕುಮಾರ ಪಾಟೀಲ ಅವರ ವಿಚಾರಗಳನ್ನು ವೇದಿಕೆ ಮೇಲೆಯೇ ವಿರೋಧಿಸಿದರು.

ಬಸವ ಜಯಂತಿಯು ಗೊಂದಲದಲ್ಲಿಯೇ ಮುಗಿಯಿತು. ವಿವಾದಕ್ಕೆ ಸಂಬಂಧಿಸಿದ ವಿಡಿಯೋಗಳು ವ್ಯಾಪಕವಾಗಿ ಹರಿದಾಡಿದೆ.

ತಡವಾಗಿ ಬಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಎಲ್ಲರೂ ಬಸವತತ್ವ ಪಾಲನೆ ಮಾಡಿ ನಿಜ ಮನುಷ್ಯರಾಗೋಣ. ನಿಮ್ಮ ಬೇಡಿಕೆಯಂತೆ ಇಲ್ಲಿ ಬಸವಮೂರ್ತಿ ಪ್ರತಿಷ್ಠಾಪನೆ, ಬಸವ ಭವನ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಹೇಳಿದರು.

ಮಧ್ಯಾಹ್ನ 3 ರಿಂದ ಸಂಜೆ 6ರವರೆಗೆ ಚಿಂಚೋಳಿಯಿಂದ ಐನಾಪುರವರೆಗೆ ಕಾರು-ಬೈಕ್ ರ್ಯಾಲಿ ನಡೆಯಿತು. ಸಂಜೆ 6.30ರಿಂದ ರಾತ್ರಿ 9.30ರವರೆಗೆ ವೇದಿಕೆ ಕಾರ್ಯಕ್ರಮ ಜರುಗಿತು.

ವೇದಿಕೆಯಲ್ಲಿ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ನೀಲಕಂಠ ಸೀಳಿನ, ಪುರಸಭೆ ಅಧ್ಯಕ್ಷ ಆನಂದ್ ಟೈಗರ್, ಗೌತಮ ಪಾಟೀಲ, ಬಸವರಾಜ ಮಲಿ ಮತ್ತಿತರರು ಇದ್ದರು.

ಆರಂಭದಲ್ಲಿ ಷಟಸ್ಥಲ ಧ್ವಜಾರೋಹಣ ನಡೆಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವದಳ, ವೀರಶೈವ ಲಿಂಗಾಯತ ಮಹಾಸಭಾ, ಬಸವ ಕೇಂದ್ರ, ವೀರಶೈವ ಸಮಾಜ, ಬಸವ ಸೇವಾ ಸಮಿತಿ ಮುಖಂಡರು, ಸದಸ್ಯರು ಸೇರಿದಂತೆ ಸಾವಿರಕ್ಕೂ ಹೆಚ್ಚು ಜನ ಉಪಸ್ಥಿತರಿದ್ದರು.

ತೇಲ್ಕೂರ ಅವರು 2004, 2008, 2013ರ ಚುನಾವಣೆಗಳಲ್ಲಿ ಸೋತು 2018ರಲ್ಲಿ ಮೊದಲ ಬಾರಿ ಗೆದ್ದಿದ್ದರು. 2023ರಲ್ಲಿ ಮತ್ತೆ ಸಚಿವ ಶರಣ ಪ್ರಕಾಶ ಪಾಟೀಲ್ ಅವರ ವಿರುದ್ಧ ಹೀನಾಯವಾಗಿ ಸೋತಿದ್ದರು.

‘ಈ ರೀತಿ ಭಾಷಣ ಮಾಡಿ ಮತ್ತೆ ಬಿಜೆಪಿ ಟಿಕೆಟ್ ಪಡೆಯುವ ಪ್ರಯತ್ನದಲ್ಲಿದ್ದಾರೆ,’ ಎಂಬ ಮಾತೂ ಕಾರ್ಯಕ್ರಮದಲ್ಲಿ ಕೇಳಿ ಬಂದಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/DAHwtSaP5nUL2sT483TnP6

Share This Article
10 Comments
    • ನಿಜವಾಗಿಯೂ ನಿಮ್ಮ ನಿಲುವಿಗೆ ನಮ್ಮ ಸಹಮತವಿದೆ ನಿಜವಾಗಲೂ ನೀವು ಬಸವ ತತ್ವ ಅನುಯಾಯಿಗಳು ಈ ನಿಮ್ಮ ಕಾರ್ಯಕ್ಕೆ ನಮ್ಮದೊಂದು ಪುಟ್ಟ ಶರಣು ಶರಣಾರ್ಥಿ

    • ಲಿಂಗಾಯತ ಸಂಘಟನೆ ಗಳು ರಾಕೀಯೇತರ ಸಂಘಟನೆ ಆಗದಿದ್ದರೆ ಇಂತಹದೇ ಘಟನೆಗಳು ಮುಂದೂ ನಡೆಯುತ್ತದೆ. ವೀರಶೈವ ಜೊತೆ ಲಿಂಗಾಯತ ಸೇರಿಸಿಕೊಂಡಿರುವ ಎಲ್ಲಾ ಸಂಘಟನೆಗಳು ಲಿಂಗಾಯತ ಹೆಸರು ತೆಗೆಯುವಂತೆ ಅಗತ್ಯಕ್ರಮ ಕೈಗೊಳ್ಳಲು ಮುಂದಾಗ ಬೇಕು.

  • 🙏 ಶರಣು ಶರಣಾರ್ಥಿ

    ಭೂಮಿ ಮೇಲೆ ಹುಟ್ಟಿದವರಿಗೆ ಹುಟ್ಟಿದ ಹಬ್ಬ / ಜಯಂತಿ ಆಚರಿಸುತ್ತಾರೆ.
    ಗಂಡು ಹೆಣ್ಣಿನ ಸಂಪರ್ಕ ಇದ್ದರೆ ಮಾತ್ರ ಜನನ ಆಗುತ್ತದೆ. *ಹುಟ್ಟಿದವರಿಗೆ ತಂದೆ ತಾಯಿ ಇರಲೇಬೇಕು*.
    ಹಾಗಿದ್ದರೆ, ಮೂಲ ಆಚಾರ್ಯ/ರ ತಂದೆ ತಾಯಿ ಯಾರು?
    ಯಾವಾಗ, ಯಾವ ಊರಲ್ಲಿ ಹುಟ್ಟಿದರು?
    ಹುಟ್ಟಿದವರಿಗೆ ಬಾಲ್ಯ, ಶಿಕ್ಷಣ, ಯೌವನ, ಸಾವು ಇರಲೇಬೇಕಲ್ಲ.

    ಹಾಗಿದ್ದರೆ ಮೂಲ ಆಚಾರ್ಯ/ ರ ಸಾವು, ಯಾವಾಗ, ಎಲ್ಲಿ ಆಯಿತು?

    ಹುಟ್ಟಿದವರ ಜಯಂತಿ ಮತ್ತು ಪುಣ್ಯ ತಿಥಿ ಆಚರಿಸುವುದು ನೋಡಿ,
    *ತಂದೆ ತಾಯಿಯೇ ಇಲ್ಲ. ಹುಟ್ಟು ಇಲ್ಲ, ಸಾವು ಇಲ್ಲ. ಅಂತವರ ಜಯಂತಿ, ತಿಥಿ ಆಚರಣೆ ಯಾವ ಕಾರಣಕ್ಕಾಗಿ?*

  • ರಾಜಕುಮಾರ್ ತೇಲ್ಕರ್ ರಿಗೆ ಆ ರೀತಿ ಮಾತನಾಡಿದರೆ ಬಸವ ತತ್ವದ ವಿರೋಧಿ ಸಂಸ್ಥೆ ಗಳು,ಪಕ್ಷಗಳು ಮತ್ತು ಮಠ ಪೀಠಗಳನ್ನು ಮೆಚ್ಚಿಸಬಹುದು ಎಂಬ ಭ್ರಮೆ ಇರಬೇಕು. ರಾಜಕುಮಾರ್ ತೆಲಕರ್ ರವರೇ ಜನ ನೀವು ತಿಳಿದಂತೆ ದಡ್ಡರಲ್ಲ.ಬಸವ ತತ್ವದ ಉದ್ದೇಶಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ನಿಮ್ಮ ಪಂಚರಂಗಿ ಆಟ ಇನ್ನು ಮುಂದೆ ಯಾವುದೇ ಕಾರಣಕ್ಕೂ ನಡೆಯದು. ನೀವು ಲಿಂಗಾಯತ ಆಗಿ ಇಲ್ಲವೇ ವೀರಶೈವ ಆಗಿ. ಎರಡೂ ಆಗಲು ಸಾಧ್ಯವಿಲ್ಲ. ಒಂದು ರೀತಿ ದ್ವಿ ಲಿಂಗಿ ಆಗಬೇಡಿ. ಲಿಂಗಾಯತ ಧರ್ಮದ ಅಪ್ಪ ಬಸವಣ್ಣ . ನಮ್ಮ ಧರ್ಮ ಗ್ರಂಥ ವಚನ ಸಾಹಿತ್ಯ .ನಿಮ್ಮ.ಅಪ್ಪ ಯಾರು? ನಿಮ್ಮದರ್ಮ ಗ್ರಂಥ ಯಾವುದು? ಏನಾದರೂ ಇತಿಹಾಸದ ಪುಟಗಳಲ್ಲಿ ದಾಖಲೆಗಳು ಇದ್ದರೆ ಪ್ರೂವ್ ಮಾಡಿ. ಇಬ್ಬಂದಿ ವೀರಶೈವ ಲಿಂಗಾಯತ ಧರ್ಮ ಬೇಡ. ನಿಮ್ಮಂತ ಬ್ರಷ್ಟ ರಾಜಕಾರಣಿಗಳು ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಎರಡೂ ಒಂದೇ ಎಂದು ಹೇಳುವುದನ್ನು ಬಸವ ತತ್ವ ನಿಷ್ಟರು ಒಪ್ಪಲ್ಲ. ನಿಮ್ಮ ಪಂಚರಂಗಿ ಆಟ ನಿಲ್ಲಿಸಿ. ಬಸವಣ್ಣ ಮತ್ತು ಬಸವ ತತ್ವಗಳ ಅನುಯಾಯಿಗಳ ಭಾವನೆಗಳ ಜೊತೆ ಆಟ ಆಡಬೇಡಿ. ನಿಮ್ಮ ಸ್ವಾರ್ಥ ರಾಜಕೀಯ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ. ಲಿಂಗಾಯತರ ತಂಟೆಗೆ ಬರಬೇಡಿ.

  • ನಿಜವಾಗಿಯೂ ನಿಮ್ಮ ನಿಲುವಿಗೆ ನಮ್ಮ ಸಹಮತವಿದೆ ನಿಜವಾಗಲೂ ನೀವು ಬಸವ ತತ್ವ ಅನುಯಾಯಿಗಳು ಈ ನಿಮ್ಮ ಕಾರ್ಯಕ್ಕೆ ನಮ್ಮದೊಂದು ಪುಟ್ಟ ಶರಣು ಶರಣಾರ್ಥಿ

  • ಮೊದಲ ಪ್ರಶ್ನೆ,, ಇಂಥವರನ್ನು ಕಾರ್ಯಕ್ರಮಕ್ಕೆ ಆವ್ಹಾನ ಕೊಟ್ಟಿದ್ದಾದರೂ ಯಾತಕ್ಕೆ,,ಅವರ ಪಕ್ಷದ ನಂಬಿಕೆ ಸನಾತನ ಅದನ್ನೇ ಅವರು ಹೇಳಿದ್ದು,, ಅವರಿಗೆ ಲಿಂಗಾಯತಕ್ಕಿಂತ ತಮ್ಮ ಪಕ್ಷದ ನಿಲುವು ಸಿದ್ಧಾಂತ ಮುಖ್ಯ,, ಅಂಥವರನ್ನು ವೇದಿಕೆ ಕೊಟ್ಟು ಗೊಂದಲ ಸೃಷ್ಟಿ ಮಾಡಿಕೊಳ್ಳುವ ಅವಶ್ಯಕತೆಯಾದರೂ ಏನಿತ್ತು

  • ಲಿಂಗಾಯತಕ್ಕೆ ಬಸವಣ್ಣನವರೇ ತಾಯಿ ಬಸವಣ್ಣನವರೆ ತಂದೆ ಇದಬಿಟ್ಟು ಲಿಂಗಾಯತದಲ್ಲಿ ಅನ್ಯರಿಗೆ ಅವಕಾಶವಿಲ್ಲ…..ಗಟ್ಟಿಧ್ವನಿಯಲ್ಲಿ ಶಾಸಕರಿಗೆ ವಿರೋಧಿಸಿದ ಎಲ್ಲರಿಗೂ ಶರಣು

Leave a Reply

Your email address will not be published. Required fields are marked *