ಗದಗ :
ಜಗತ್ತು ಎಂದಿಗಿಂತ ಇಂದು ತೀವ್ರ ತಳಮಳದಲ್ಲಿದೆ. ಎಲ್ಲೆಡೆಯೂ ಅಸಮಾಧಾನ, ಅಶಾಂತಿ ತುಂಬಿ ತುಳುಕುತ್ತಿದೆ. ಇಂತಹ ಕಾಲಘಟ್ಟದಲ್ಲಿ ಬುದ್ಧ ಬಸವ ಅಂಬೇಡ್ಕರ್ ಅವರ ಸಮಾನತೆಯ ತತ್ವದ ಅಳವಡಿಕೆ ಎಂದಿಗಿಂತ ಇಂದು ಹೆಚ್ಚು ಅವಶ್ಯಕತೆಯಿದೆ.
ಅದರಲ್ಲೂ ತಮ್ಮದೇ ಆದ ಧರ್ಮತತ್ವ ನೀಡಿದ ಮೊದಲಿನ ಇಬ್ಬರು ಮಹನೀಯರು ಮನುಷ್ಯ ಕ್ರೌರ್ಯದ ಪ್ರತೀಕದಂತಿದ್ದ ಪುರೋಹಿತ ಶಾಹಿತ್ವ, ಜಾತೀಯತೆ, ವರ್ಣಾಶ್ರಮ ಪದ್ದತಿ, ಮೂಢನಂಬಿಕೆ ಆಚರಣೆ, ಸ್ತ್ರೀಯರನ್ನು ಪಶುಗಳಿಗಿಂತ ಕಡೆಯಾಗಿ ಕಾಣುವುದು ಇವೆಲ್ಲವನ್ನು ತೀವ್ರವಾಗಿ ವಿರೋಧಿಸಿದ್ದರು.

ಈ ಪರಿಣಾಮ ಈ ಮಹನೀಯರು ಪಟ್ಟಭದ್ರರಿಂದ ತೀವ್ರ ವಿರೋಧ ಎದುರಿಸಿಯೂ ಸಮರ್ಥವಾಗಿ ತಮ್ಮ ತತ್ವಗಳನ್ನು ಜನಸಾಮಾನ್ಯರಿಗೆ ಅರುಹಿದರು. ಈ ಸರಳ ತತ್ವಗಳೆಡೆಗೆ ಜನಸಾಮಾನ್ಯರು ದೊಡ್ಡ ಪ್ರಮಾಣದಲ್ಲಿ ಆಕರ್ಷಿತರಾದರೆಂದು ಬೈಲೂರು ಗುರುಬಸವೇಶ್ವರ ಮಠದ ಡಾ. ಮಹಾಂತ ಬಸವಲಿಂಗ ಸ್ವಾಮಿಗಳು, ತಿಳಿಸಿದರು.
ಅವರು ಬಸವದಳದ ೧೬೯೨ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ನಡೆದ ‘ವೀರ ವೈರಾಗ್ಯನಿಧಿ ಅಕ್ಕಮಹಾದೇವಿ’ ಹಾಗೂ ‘ಲಿಂಗೈಕ್ಯ ಶರಣರಾದ ಕಾಶೀನಾಥ ಹಂಜಗಿ’ ಅವರ ಸ್ಮರಣೋತ್ಸವದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತ, ಮೇಲಿನ ಮೂವರು ಮಹನೀಯರು ಇದೇ ಮಣ್ಣಿನಲ್ಲಿ ಹುಟ್ಟಿ ಜಗದ ಜ್ಯೋತಿಯಾಗಿ ಬೆಳಗಿದರೆಂದರು.
ಹಾಗೆಯೇ ವೀರವೈರಾಗ್ಯಧಾರಿಣಿ ಅಕ್ಕಮಹಾದೇವಿ ಕುರಿತು ಮಾತನಾಡುತ್ತಾ, ಅಕ್ಕಮಹಾದೇವಿ ವೈರಾಗ್ಯದ ಪ್ರತಿರೂಪವಾಗಿದ್ದರು. ಅವರು ಅನುಭವ ಮಂಟಪಕ್ಕೆ ಜ್ಞಾನದ ನಕ್ಷತ್ರದಂತೆ ಬಂದರು. ಅಲ್ಲಮಪ್ರಭು ಬಗೆ-ಬಗೆಯಿಂದ ಪ್ರಶ್ನಿಸಿದಾಗ ಅವಕ್ಕೆಲ್ಲ ಸಮರ್ಥವಾಗಿ ಉತ್ತರಿಸಿದ ಆ ತಾಯಿಯ ವಚನಗಳಲ್ಲಿ ವೈರಾಗ್ಯ ಅಡಗಿದೆ. ಅವರು ಸ್ತ್ರೀಕುಲಕ್ಕೆ ಮಾದರಿಯಾಗಿದ್ದಾರೆ. ಅವರ ಪ್ರತಿಯೊಂದು ವಚನವೂ ಸಮಾಜಕ್ಕೆ ದೊಡ್ಡ ಸಂದೇಶ ನೀಡುತ್ತದೆಂದರು.
ಸಭೆಯ ಆರಂಭದಲ್ಲಿ ಅಕ್ಕಮಹಾದೇವಿ ಅವರ ಕುರಿತು ಉಪನ್ಯಾಸ ನೀಡಿದ ಶಿಕ್ಷಕಿ ಮಂಜುಳಾ ಹಾಸೀಲಕರ ಅವರು, ೧೨ನೇ ಶತಮಾನದ ಶ್ರೇಷ್ಟ ವಚನಕಾರರಲ್ಲೊಬ್ಬರಾದ ಅಕ್ಕಮಹಾದೇವಿಯವರು ಚಿಕ್ಕವಯಸ್ಸಿನಲ್ಲೇ ವೈರಾಗ್ಯದತ್ತ ವಾಲಿದರು. ಚೆನ್ನಮಲ್ಲಿಕಾರ್ಜುನನ್ನು ಕಾಣುವ ಹಂಬಲ ಅವರಲ್ಲಿ ಪ್ರಬಲವಾಗಿತ್ತು. ಆದರೆ ಅನುಭವ ಮಂಟಪಕ್ಕೆ ಬಂದ ಆ ತಾಯಿ ತನ್ನಲ್ಲೇ ಮಲ್ಲಿಕಾರ್ಜುನನಿದ್ದಾನೆಂಬುದನ್ನು ಕಂಡುಕೊಂಡಳು ಎಂದರು.
ಮತ್ತೋರ್ವ ಅತಿಥಿ ಮಾರ್ತಾಂಡಪ್ಪ ಹಾದಿಮನಿ ಅವರು, ಕಾಶೀನಾಥ ಹಂಜಗಿಯವರನ್ನು ಸ್ಮರಿಸಿಕೊಳ್ಳುತ್ತಾ, ಕಾಶೀನಾಥ ಹಂಜಗಿಯವರು ಮೂಲತಃ ಬಡತನದಿಂದ ಬಂದವರು. ಆರಂಭದಲ್ಲಿ ಬೀದಿಬದಿಯ ವ್ಯಾಪಾರದಿಂದ ಬೆಳೆಯುತ್ತಾ ಅವರು ಗದುಗಿನ ಪ್ರತಿಷ್ಠಿತ ವ್ಯಾಪಾರಸ್ಥರು, ವಾಣಿಜ್ಯೋದ್ಯಮಿ ಆಗಿದ್ದರು.

ಸೌಮ್ಯ ಸ್ವಭಾವದರಾಗಿದ್ದ ಅವರು ತಮ್ಮಲ್ಲಿ ದುಡಿಯುವ ಕೆಲಸಗಾರರನ್ನು ಗೌರವದಿಂದ ಕಾಣುತ್ತಿದ್ದರು. ತಮ್ಮ ಬಳಿ ಸಹಾಯ ಯಾಚಿಸಿ ಬಂದ ಯಾರನ್ನು ಅವರು ಎಂದೂ ಬರಿಗೈಯಿಂದ ಕಳಿಸುತ್ತಿರಲಿಲ್ಲ ಎಂದರು.
ಕಾಶೀನಾಥರ ಧರ್ಮಪತ್ನಿ ಪದ್ಮಾ ಹಂಜಗಿಯವರು ತಮ್ಮ ಪತಿಯನ್ನು ನೆನೆದು ಮಾತನಾಡಿದರು. ಜೊತೆಗೆ ಅಳಿಯಂದಿರಾದ ಡಾ. ಶ್ರೀಧರ, ಸಹೋದರ ನಾಗೇಶ ಹಂಜಗಿ, ಕಾಶೀನಾಥರ ಹೆಣ್ಣುಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ಸಹೋದರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಅಲ್ಲದೇ ಶರಣತತ್ವ ಚಿಂತಕರಾದ ಶೇಖಣ್ಣ ಕವಳಿಕಾಯಿ, ಬಸವರಾಜ ಹಿರೇಹಡಗಲಿ ಕೂಡಾ ಕಾಶೀನಾಥರನ್ನು ನೆನೆದು ಮಾತನಾಡಿದರು. ಬಸವದಳ ಅಧ್ಯಕ್ಷರಾದ ವಿ.ಕೆ.ಕರೇಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಗಂಗಮ್ಮ ಹೂಗಾರ ಪ್ರಾರ್ಥಿಸಿದರು. ರಾಮಣ್ಣ ಕಳ್ಳಿಮನಿಯವರು ಕಾರ್ಯಕ್ರಮ ನಿರೂಪಿಸಿದರು. ಸ್ವಾಗತವನ್ನು ಎಸ್. ಎ. ಮುಗದ ಅವರು ಮಾಡಿದರು. ಶರಣು ಸಮರ್ಪಣೆಯನ್ನು ಎಂ.ಬಿ. ಲಿಂಗದಾಳ ನೆರವೇರಿಸಿದರು.

ಓಂಶ್ರೀಗುರುಬಸವಲಿಂಗಾಯನಮಃ
ಶ್ರೀ. ಮ. ನಿ. ಪ್ರ. ಸ್ವ. ಜ. ಮುರುಘರಾಜೇಂದ್ರಕೋರಣೇಶ್ವರಮಹಾಸ್ವಾಮಿಗಳು. ಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರವಿರಕ್ತಮಠ ಅರಹಟ್ಟಿ ಅಸೂಟಿ ಹೊಸಕೇರಿ ಮೆಣಸಗಿ ಖಜೂರಿ
ವಿಶ್ವದರ್ಶನ ಕನ್ನಡ ದಿನಪತ್ರಿಕೆ ಹುಬ್ಬಳ್ಳಿ ಅರಹಟ್ಟಿ
ವಿಶ್ವದ ದಾರ್ಶನಿಕರು ಮಠ ಪೀಠಗಳು
ಧಾರ್ಮಿಕ ಆಚಾರ ಸಂಸ್ಕಾರ ಕಲಿಸುವ ಶೃದ್ಧಾ ಕೇಂದ್ರಗಳು
ಪಂಚ ಆಚರಣೆಗಳು, ಶಿವಾಚಾರ, ಲಿಂಗಾಚಾರ, ಸದಾಚಾರ, ಗಣಾಚಾರ, ಭೃತ್ಯಾಚಾರ,
ಶಿವನ ಹೊರತು ಇಷ್ಟ ಪ್ರಾಣ ಭಾವ ಶಿವನೆ ತಲೆ ಓಂಕಾರ, ಎಡ ಭುಜ ನಕಾರ, ಬಲಭುಜ ಮಃ ಕಾರ, ಹೊಕ್ಕಳ ಬಳ್ಳಿ ಶಿಕಾರಪ್ರಣವ, ಎಡ ಪಾದ, ವಾಕಾರ ಪ್ರಣವ, ಬಲ ಪಾದ, ಯಕಾರಪ್ರಣವ,
ಗುರು ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ಮಂತ್ರ ಪಾದೋದಕ ಪ್ರಸಾದ ಇದು, ವೀರಶೈವ ಲಿಂಗಾಯತ ಮಠ ಪೀಠಗಳ ಆಚರಣೆಯ ನಿಯಮ, ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ
ವಿಶ್ವಗುರು ಬಸವಣ್ಣನವರು ನಿಜ ಪದ್ಧತಿ ವಿಭೂತಿ ಮಹಿಮೆ ತಿಳಿಸಿರುವರು
ಅಡ್ಡ ವಿಭೂತಿಯಿಲ್ಲದವರ ಮುಖ ಹೊಲ್ಲ, ನೋಡಲಾಗದು.
ಲಿಂಗದೇವನಿಲ್ಲದ ಠಾವು ನರವಿಂಧ‍್ಯ; ಹೋಗಲಾಗದು.
ದೇವಭಕ್ತರಿಲ್ಲದೂರು ಸಿನೆ ಹಾಳು, ಕೂಡಲಸಂಗಮದೇವಾ.
ವಿಭೂತಿ ಹಚ್ಚುವುದು ಕಡ್ಡಾಯ ನಿಯಮ
ಗುರು ಶಿಷ್ಯ ಪದ್ಧತಿ ಅಂದು ಇಂದು ಮುಂದೆ
ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ.
ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ.
ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ.
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ
ಗುಹೇಶ್ವರಾ, ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾನು ಬೆರಗಾದೆನು.
ಶರಣು ಶರಣಾರ್ಥಿಗಳು ಅಂದು ವಿಶ್ವಗುರುಬಸವಣ್ಣನವರ ಕಿಂಕರತ್ವ ಮಹಿಮೆ ಅಲ್ಲಮಪ್ರಭು ತಮ್ಮ ವಚನದಲ್ಲಿ ವಿವರಿಸಿದರು
ವಿಶ್ವದ ತ್ಯಾಗಮಯಿ ಅಕ್ಕಮಹಾದೇವಿಯವರು ಪೂಜಿಸುವ ರೀತಿ ಪದ್ಧತಿ
ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೆ ಅಯ್ಯಾ?
ನೀನು ಬಹಿರಂಗವ್ಯವಹಾರ ದೂರಸ್ಥನು.
ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೆ ಅಯ್ಯಾ?
ನೀನು ವಾಙ್ಮನಕ್ಕತೀತನು.
ಜಪಸ್ತೋತ್ರದಿಂದ ಒಲಿಸುವೆನೆ ಅಯ್ಯಾ?
ನೀನು ನಾದಾತೀತನು.
ಭಾವಜ್ಞಾನದಿಂದ ಒಲಿಸುವೆನೆ ಅಯ್ಯಾ?
ನೀನು ಮತಿಗತೀತನು.
ಹೃದಯ ಕಮಲಮಧ್ಯದಲ್ಲಿ ಇಂಬಿಟ್ಟುಕೊಂಬೆನೆ ಅಯ್ಯಾ?
ನೀನು ಸರ್ವಾಂಗ ಪರಿಪೂರ್ಣನು.
ಒಲಿಸಲೆನ್ನಳವಲ್ಲ; ನೀನೊಲಿವುದೆ ಸುಖವಯ್ಯಾ
ಚೆನ್ನಮಲ್ಲಿಕಾರ್ಜುನಯ್ಯಾ.
ಅಷ್ಟ ಎಂಟು ರೀತಿ ಪೂಜೆಯ ಪದ್ಧತಿ,
ಚಿತ್ತಶುದ್ಧ ಕ್ರಿಯೆ ಸೋನ್ನಲಾಪೂರ ಸಿದ್ಧರಾಮಯ್ಯವರ ವಚನ ತರ್ಕ ನ್ಯಾಯ
ಅತ್ತಲಿತ್ತ ಸುತ್ತಿ ಬಳಲಿ ವ್ಯರ್ಥವಪ್ಪ ಮನವ
ನಿಮ್ಮ ಚಿತ್ತದತ್ತ ಧ್ಯಾನಿಸಿ ಇರಿಸಯ್ಯ.
ಇನ್ನು ನಿಮ್ಮತ್ತಲಲ್ಲದೆ ಅತ್ತಲಿತ್ತ ಸುತ್ತಿ ಬಂದಡೆ
ವಿಚಿತ್ರಮೂಲ ನಿಮ್ಮಾಣೆಯಯ್ಯ
ಕಪಿಲಸಿದ್ಧಮಲ್ಲಿಕಾರ್ಜುನಾ. ನಮ್ಮ ಮನಸ್ಸು ಏಕಾಗ್ರತೆ ಇರುವಂತೆ ಇರಿಸುವದು
ಗುರುಮಹಿಮೆ ಉಳವಿ ಮಹಾಮನೆಯಲ್ಲಿ ವಿಶ್ವಬದುಕಿನ ವಚನ ಸಂವಿಧಾನ ರಕ್ಷಣೆ ಮಾಡಿದ ಶ್ರೀ ಚನ್ನಬವಣ್ಣನವರ ವಚನ ಗಮನಿಸಬೇಕು
ಒಮ್ಮೆಯೂ ಶ್ರೀಗುರುವಿನ
ಶ್ರೀ ಚರಣವ ನೆನೆಯಲೊಡನೆ
ಭವಬಂಧನ ಬಿಡುವುದು.
ಶ್ರೀ ಗುರುವೇ ಶರಣು ಗುರುಲಿಂಗವೇ ಶರಣು
ಹರಿಬ್ರಹ್ಮಾದಿಗಳಿಗಗೋಚರವಾದ
ಕೂಡಲಚೆನ್ನಸಂಗಯ್ಯನೆಂಬ ಲಿಂಗವ
ತೋರಿದ ಬಸವಣ್ಣ ಗುರುವೇ ಶರಣು.
ಗುರುವಿನ ಮಹಿಮೆ
ಮನಸ್ಸು ಮಂಗ ಅದರ ನಿಯಂತ್ರಣ ಷಣ್ಮುಖ ಶಿವಯೋಗಿಗಳವರು ಮನಸ್ಸು ಯಾವ ಮಂಗನಾಟ ಮಾಡುತ್ತದೆ ವಿಷಯ ಅಂದು ಹೇಳಿದ ಮಾತು ಇಂದಿಗು ಸತ್ಯ ವಿವರಣೆ ಸೂಕ್ಷ್ಮ ಅವಲೋಕನ ಅವಶ್ಯ
ಮನವೆಂಬ ಮರ್ಕಟನು ತನುವೆಂಬ ವೃಕ್ಷವನೇರಿ,
ಇಂದ್ರಿಯಂಗಳೆಂಬ ಶಾಖೆಶಾಖೆಗೆ ಹಾರಿ,
ವಿಷಯಂಗಳೆಂಬ ಹಣ್ಣು ಫಲಂಗಳ ಗ್ರಹಿಸಿ,
ಭವದತ್ತ ಮುಖವಾಗಿ ಹೋಗುತ್ತಿದೆ ನೋಡಾ!
ಈ ಮನವೆಂಬ ಮರ್ಕಟನ,
ನಿಮ್ಮ ನೆನಹೆಂಬ ಪಾಶದಲ್ಲಿ ಕಟ್ಟಿ,
ಎನ್ನನುಳುಹಿಕೊಳ್ಳಯ್ಯ ಅಖಂಡೇಶ್ವರಾ.
ಸರಳ ಸುಂದರ ದೃಷ್ಟಾಂತ ನಿಷ್ಠೆ ನಿಯಮಗಳ ನೆನಹು ಸ್ಮರಣೆ ಮೂಲಕ ನಿಯಂತ್ರಿಸುವದು,
ನಮ್ಮ ನಡೆ ನುಡಿ ಪದ್ಧತಿ
ಪ್ರಥಮಪಾದದಲ್ಲಿ ಓಂಕಾರಕ್ಕೆ ನಕಾರ ಬೀಜಾಕ್ಷರ.
ಆ ನಕಾರ ಉಭಯ ಕೂಡಿದ ಮತ್ತೆ ಮಕಾರ ಬೀಜಾಕ್ಷರ.
ಇಂತೀ ತ್ರಿವಿಧಾಕ್ಷರ ಒಡಗೂಡಿ ಒಡಲಾದ ಮತ್ತೆ ಶಿಕಾರ ಬೀಜಾಕ್ಷರ.
ಇಂತೀ ಶಿಕಾರ ಮೂರನೊಡಗೂಡಿ ನಾಲ್ಕೆಂಬಲ್ಲಿಗೆ ಯಕಾರ ಬೀಜಾಕ್ಷರ.
ಇಂತೀ ಪಂಚಾಕ್ಷರಿಯ ಮೂಲಮಂತ್ರ ಸಂಬಂಧವಾಗಲಾಗಿ ಪ್ರಣಮದ ಬೀಜ.
ಆ ಪ್ರಣಮವು ‘ಓಂ ಭರ್ಗೋ ದೇವಃ’ ಜಗಕ್ಕೆ ಕರ್ತೃ ನೀನಲಾ ಎಂದು.
ಸಾಮ ಅಥರ್ವಣ ಯಜಸ್ಸು ಋಕ್ಕು ಉತ್ತರ ಖಂಡನ.
ಇಂತೀ ಪಂಚವೇದಂಗಳಲ್ಲಿ ಚತುರ್ವೇದಿಗಳಪ್ಪರಲ್ಲದೆ,
ಐಕ್ಯೋತ್ತರ ಚಿಂತನೆಯನೀ ವಿಪ್ರಕುಲ ಮಿಥ್ಯವಂತರು ಬಲ್ಲರೆ?
ಕಣ್ಣಿನಲ್ಲಿ ನೋಡುತ್ತ ಕಣ್ಗಾಣೆನೆಂಬವನಂತೆ ಶಾಪಹತರಿಗೆಲ್ಲಕ್ಕೂ
ಲಲಾಮಭೀಮಸಂಗಮೇಶ್ವರಲಿಂಗವು ಅಸಾಧ್ಯ ನೋಡಾ.
ಮಡಿವಾಳ ಮಾಚಿದೇವರು ಕಂಡ ನಿಜದ ಮಹಿಮೆ ಅರ್ಥ ಆದರೆ? ಜಾತಿ ಜನನ ಮರಣ ಪಕ್ಷ ಪಾತವಿಲ್ಲ,
ಅಜಾತನೆಂದೆನಬೇಡ, ಜಾತನೆಂದೆನಬೇಡ.
ಹದಿನೆಂಟುಜಾತವಾದರಾವುದು ?
ಒಂದೇ ಗುರುವಿನ ವೇಷವಿದ್ದವರಿಗೆ
ದಾಸೋಹವ ಮಾಡುವುದೆ ಶಿವಾಚಾರ.
ಅದಲ್ಲದೆ ಗುರುಕೊಟ್ಟ ಮುರುಹು ಮುದ್ರೆ ಲಾಂಛನವ ಹೊತ್ತು
ಮರಳಿ ವೇಷವಳಿದು ಬಂದವರಿಗೆದಾಸೋಹವ ಮಾಡುವದು,
ಶಿವಾಚಾರಕ್ಕೆ ಹೇಸಿಕೆ ಕಾಣಾ ಕಲಿದೇವರದೇವ.
ಅಸೂಟಿ ಶ್ರೀ ಫಲಹಾರಶಿವಯೋಗಿಗಳವರ ಜೀವನದಲ್ಲಿ ಸಂಸ್ಕಾರ ಸಂಸ್ಕೃತಿ ಎರಡು ಕಣ್ಣು
ಶ್ರೀ. ಮ. ನಿ. ಪ್ರ. ಸ್ವ. ಜ. ಮುರುಘರಾಜೇಂದ್ರಕೋರಣೇಶ್ವರ ಮಹಾಸ್ವಾಮಿಗಳು ಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ವಿರಕ್ತಮಠ ಅರಹಟ್ಟಿ ಅಸೂಟಿ ಹೊಸಕೇರಿ ಮೆಣಸಗಿ ಖಜೂರಿ ವಿಶ್ವದರ್ಶನ ಕನ್ನಡ ದಿನಪತ್ರಿಕೆ ಹುಬ್ಬಳ್ಳಿ ಅರಹಟ್ಟಿ