‘ಪ್ರಾರ್ಥನಾ ಗೀತೆ ಹಾಡಿರುವುದರ ವಿರುದ್ಧ ಕೇಸ್ ದಾಖಲಿಸುತ್ತೇವೆ’

ಬಸವ ಮೂರ್ತಿ ಮುಂದೆ ಆರೆಸ್ಸೆಸ್ ಗೀತೆ ಹಾಡಿರುವ ವಿವಾದಕ್ಕೆ ಬಂದಿರುವ ಪ್ರತಿಕ್ರಿಯೆ

ಬಸವಕಲ್ಯಾಣ

ಆರೆಸ್ಸೆಸ್, ಬಿಜೆಪಿಯವರು ಬಸವ ಮೂರ್ತಿ ಎದುರು ಆರೆಸ್ಸೆಸ್ ಪ್ರಾರ್ಥನಾ ಗೀತೆ ಹಾಡಿರುವುದರ ವಿರುದ್ಧ ಬಸವ ಧರ್ಮಪೀಠದಿಂದ ಕೇಸ್ ದಾಖಲಿಸುತ್ತೇವೆ.

ಲಿಂಗಾಯತ ಧರ್ಮಕ್ಕೆ, ಬಸವಾದಿ ಶರಣರ ತತ್ವ ಸಿದ್ಧಾಂತಕ್ಕೆ ವಿರುದ್ಧವಾದ ಆರೆಸ್ಸೆಸ್ ಧ್ವಜ ಗೀತೆ ಹಾಡಿದ್ದನ್ನು ರಾಷ್ಟ್ರೀಯ ಬಸವದಳ ಖಂಡಿಸುತ್ತದೆ.

ವಿವಾದ ಹುಟ್ಟಿಸಲೆಂದೇ ಅವರು ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿದ್ದಾರೆ.

ಈ ಪುಣ್ಯಭೂಮಿಯಲ್ಲಿ ವರ್ಣಾಶ್ರಮ, ಮನುವಾದ, ವೈದಿಕತೆಯ ವಿರುದ್ಧ ಶರಣರು ಕ್ರಾಂತಿ ಮಾಡಿದ್ದಾರೆ. ಅದನ್ನು ಸಹಿಸದೆ ಅಂದು ಶರಣರನ್ನು ಕೊಲೆಗೈದವರು ಇದೇ ವರ್ಣಾಶ್ರಮ, ಮನುವಾದ, ವೈದಿಕತೆಯ ಪ್ರತಿಪಾದಕರು.

ಇವರು ಕನ್ನಡ ಭಾಷೆಯಲ್ಲಿ ಹುಟ್ಟಿದ ಬಸವಧರ್ಮ, ಶರಣರ ವಚನಗಳನ್ನು ಪಠಣ ಮಾಡಬೇಕಾದ ಸ್ಥಳದಲ್ಲಿ ಅವರನ್ನು ವಿರೋಧಿಸುವ ಸಿದ್ಧಾಂತದ, ಸಂಘಟನೆಯ ಗೀತೆ ಹಾಡಿರುವುದು ಸಹಿಸಲು ಸಾಧ್ಯವಿಲ್ಲ.

ಈಗ ಶರಣರನ್ನು ವೈದಿಕ ಸಂಪ್ರದಾಯಕ್ಕೆ ಜೋಡಿಸುವ ಹೊಸ ನಾಟಕ ಹೂಡಿಕೊಂಡು ಡೋಂಗಿ ಸಮಾವೇಶ ಕೂಡ ಮಾಡಲು ಹೊರಟಿದ್ದಾರೆ. ನಮ್ಮ ಧರ್ಮ, ನಮ್ಮ ಶರಣರನ್ನು ಈ ಹಿಂದುತ್ವವಾದಿ ಸಮಾವೇಶಕ್ಕೆ ಜೋಡಿಸುವುದಕ್ಕೂ ನಮ್ಮ ವಿರೋಧವಿದೆ.

ಹಿಟ್ಲರ್ ನೀತಿ ಅನುಸರಿಸುವ ಆರೆಸ್ಸೆಸ್ ಇದರ ಹಿಂದಿದೆ. ತಳಸಮುದಾಯವನ್ನು ತುಳಿದದ್ದೇ ವರ್ಣಾಶ್ರಮ ಪದ್ಧತಿ. ಇದನ್ನು ಮತ್ತೆ ಜಾರಿ ಮಾಡಲು ಹೊರಟಿದ್ದಾರೆ. ತಳಸಮುದಾಯದ ಶರಣರನ್ನು ಕೊಂದದ್ದೇ ಈ ಸಿದ್ಧಾಂತ. ಇದನ್ನರಿತು ತಳಸಮುದಾಯ ಅವರಿಂದ ದೂರ ಇದ್ದು ಬಸವಣ್ಣನವರನ್ನು, ಬಸವತತ್ವವನ್ನು ಉಳಿಸಬೇಕಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
6 Comments
  • ಬಸವ ಧರ್ಮ ಕಾಪಾಡಿನಿಮ್ಮ ಕಾರ್ಯಕ್ರಮ ಕ್ಕೆ ನನ್ನ ಬೆಂಬೆಲ 👍🏻ಜಯ ಬಸವ 👏🏻👏🏻

    • ಯೆಸ್ ಖಂಡಿತಾ ಮನುವಾದಿ ಜಾತಿವಾದಿ ಗಳಿಗೆ.ಅಲ್ಲಿ ಅವಕಾಶ ನೀಡ ಬಾರದು ….

  • ಖಂಡಿತವಾಗಿಯೂ ಆರ್ ಎಸ್ ಎಸ್ ನವರ ಮೇಲೆ ಕೇಸ್ ಅನ್ನು ದಾಖಲಿಸಬೇಕು ಅವರು ಬಸವಾದಿ ಶಿವ ಶರಣರ ತತ್ವ ಸಿದ್ಧಾಂತವನ್ನು ಮಣ್ಣು ಪಾಲು ಮಾಡಲು ಉದ್ದೇಶಪೂರ್ವಕವಾಗಿ ಈ ಕೆಲಸವನ್ನು ಮಾಡಿರುವರು

  • ಬಸವ ತತ್ವಕ್ಕೆ ಗಂಡಾಂತರ ತಂದೊಡ್ಡಿರುವ ಈ ಸಂದರ್ಭದಲ್ಲಿ ಬಸವ ತತ್ವ ವಿರೋಧಿಗಳಿಗೆ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಟ್ಟದ್ದು ಸ್ವಯಂಕೃತ ಅಪರಾಧ.

  • ಬಸವ ಧರ್ಮ ಉಳಿಸುವ ಜವಾಬ್ದಾರಿ ನಮ್ಮೆಲ್ಲ ಬಸವ ಅಭಿಮಾನಿಗಳು ಮಾಡಬೇಕಾದ ಅನಿವಾರ್ಯತೆ ಮತ್ತು ಹಿಂದಿನ ಅವಶ್ಯಕತೆ ಇರುತ್ತದೆ

Leave a Reply

Your email address will not be published. Required fields are marked *