ನಿಜಾಚರಣೆ: ಮೈಸೂರಿನಲ್ಲಿ ಗರ್ಭಲಿಂಗ ದೀಕ್ಷಾ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಮೈಸೂರು:

ಸ್ಥಳೀಯ ಜೆಪಿ ನಗರದ ಸಾಫ್ಟ್ ವೇರ್ ಉದ್ಯೋಗಿ ಎಸ್. ಶುಭ ಮತ್ತು ಎಂ. ಮಧುಕರ್ ಅವರ ಸಗೃಹದಲ್ಲಿ ಎಸ್. ಶುಭ ಅವರ ಎರಡನೇ ಮಗುವಿನ ಗರ್ಭಲಿಂಗ ದೀಕ್ಷಾ ಕಾರ್ಯಕ್ರಮ ಬಸವತತ್ವದ ನಿಜಾಚರಣೆಯಂತೆ ನಡೆಯಿತು.

ಗುಂಡ್ಲುಪೇಟೆ ತಾಲೂಕು ಮೂಡಗೂರು ಮಠ ಅಧ್ಯಕ್ಷರಾದ ಪೂಜ್ಯ ಇಮ್ಮಡಿ ಉದ್ಧಾನ ಸ್ವಾಮಿಗಳವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಸಂಬಂಧಿಕರು, ಗುರುಹಿರಿಯರು ಉಪಸ್ಥಿತರಿದ್ದು ಆಶೀರ್ವದಿಸಿದರು.

ನಂಜನಗೂಡಿನ ಶರಣ ಸಂಸ್ಕೃತಿ ಪ್ರಸಾರ ವೇದಿಕೆಯ ಸಂಚಾಲಕರಾದ ಬಿ. ಎಂ. ಸಿದ್ದಪ್ಪ ಮತ್ತು ರಾಜಮಣಿ ಮತ್ತಿತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *