ಪ್ರವಚನ: ಪರಂಜ್ಯೋತಿ ಬಸವಣ್ಣನ ಉದಯ

ಬಸವ ಮೀಡಿಯಾ
ಬಸವ ಮೀಡಿಯಾ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 14

ಕಲಬುರಗಿ:

ನರಜನ್ಮವ ತೊಡೆದು ಹರಜನ್ಮವ ಮಾಡಿದ ಗುರುವೆ ನಮೋ. ಭವಬಂಧನವ ಬಿಡಿಸಿ ಪರಮಸುಖವ ತೋರಿದ ಗುರುವೆ ನಮೋ. ಭವಿಯೆಂಬುದ ತೊಡೆದು ಭಕ್ತೆ ಎಂದೆನಿಸಿದ ಗುರುವೆ ನಮೋ. ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ ಗುರುವೆ ನಮೋ ನಮೋ.

ಬಸವಣ್ಣನವರನ್ನು ಕುರಿತು ಅಕ್ಕ ಹೇಳುವ ಮಾತುಗಳು ಬಹಳ ಅರ್ಥಪೂರ್ಣ ಎನಿಸುತ್ತವೆ. ರಾಷ್ಟ್ರಕವಿ ಕುವೆಂಪು ಅವರು, ಬಸವಣ್ಣನವರನ್ನು ಕಾರ್ತಿಕದ ಕತ್ತಲಲ್ಲಿ ನೀ ಆಕಾಶ ದೀಪವಾಗಿ ಬಂದಿ ಎಂದು ಹೇಳಿದ್ದಾರೆ.

ಸಿದ್ಧರಾಮ ಶಿವಯೋಗಿಗಳ ಪೂರ್ವಾರ್ಧ ಬದುಕಿನ ಸತ್ಚರಿತ್ರೆಯ ನಂತರ ದೇವಲೋಕ, ಶಿವಲೋಕದ ಎಲ್ಲ ಗಣಂಗಳು ಬೇರೆ ಬೇರೆ ಭಾಗದಲ್ಲಿ ಶರಣರಾಗಿ ಅವತರಿಸಿದರು ಎಂದು ಹೇಳುತ್ತ ಮಡಿವಾಳ ಮಾಚಿದೇವ, ಹಡಪದ ಅಪ್ಪಣ್ಣ, ಅಂಬಿಗರ ಚೌಡಯ್ಯ, ನುಲಿಯ ಚಂದಯ್ಯ, ಮೋಳಿಗೆ ಮಾರಯ್ಯ ಮುಂತಾದ ಶರಣರು ಧರೆಗೆ ಅವತರಿಸಿ ಬಂದರು ಎಂದು ಚಾಮರಸ ಶರಣರ ಸ್ಮರಣೆ ಮಾಡುತ್ತಾನೆ.

ಮುಖ್ಯ ಗಣಾಧೀಶ್ವರನಾದ ಅವತರಿಸಿದ ಕುರಿತು ಏಳೆಂಟು ನುಡಿಗಳನ್ನು ಬಿಚ್ಚಿಡುತ್ತಾನೆ.

ಈ ನುಡಿಗಳಲ್ಲಿ ಬಸವಣ್ಣನ ಜನನ, ಬಾಲ್ಯ, ಓದು, ಉಪನಯನ, ಕಲ್ಯಾಣ ಪಯಣದವರೆಗೆ ಹೇಳುತ್ತಾನೆ.

ಹೊತ್ತಿಗೆಗೆ ಶಿವಯೋಗ ರಾಜ್ಯದ ಒಳಿತಿಗಾಗಿ ಯಥಾ ಕ್ರಮಕ್ರಮದಲಿ ಪ್ರಮಥರು

ರುದ್ರಕನ್ನೆಯರೆಲ್ಲ ಉದ್ಭವಿಸಿದರು

ಶುದ್ಧ ಶಿವೈಕ್ಯರುದರದಲಿ ಮೆಲ್ಲನೆ ಮೆಲ್ಲನೆ ಬೆಳೆದು

ಬಾಗೇವಾಡಿಯ ಅಗ್ರಹಾರದ ಮಾದರಸ-ಮಾದಲಾಂಬಿಕೆಯ ಉದರದಲ್ಲಿ ಬಸವಣ್ಣ ಉದಯಿಸಿ ಬಂದ. ನಾಗಲಾಂಬಿಕೆಯ ಬಳಿಕ ಗಂಡು ಮಗುವಿನ ಕನಸು ಕಾಣುತ್ತಿದ್ದ ಮಾದಲಾಂಬಿಕೆಗೆ ಗುರು ಕರಣೆಯಿಂದ ನವಮಾಸ ತುಂಬಿದ ಬಳಿಕ ಅಕ್ಷಯ ತೃತೀಯ ತಿಥಿಯಂದು ಪರಂಜ್ಯೋತಿಯಾಗಿ ಹುಟ್ಟಿ ಬರುತ್ತಾನೆ.

ಈ ಗಳಿಗೆಯನ್ನು ಚಾಮರಸರು ದೇವಾನುದೇವತೆಗಳು ಪುಷ್ಪ ವೃಷ್ಟಿ ಮಾಡಿದರೆಂದು ವರ್ಣಿಸುತ್ತಾರೆ. ಷಕಪ್ಪಡಿ ಸಂಗಮದ ಗುರುಕುಲದಲ್ಲಿ ಓದು ವಿದ್ಯಾಭ್ಯಾಸ ಮುಂದುವರಿದು 12 ವರ್ಷ ಕಳೆದ ಬಳಿಕ ಬಿಜ್ಜಳನ‌ ಆಸ್ಥಾನದ ಬಲದೇವರಸರು ಅಲ್ಲಿಗೆ ಬರುತ್ತಾರೆ. ಹೀಗೆ ಬಸವಣ್ಣನವರು ಕಲ್ಯಾಣವನ್ನು ಸೇರುವ ಪೂರ್ವಾರ್ಧದ ಕಥೆಯನ್ನು ಇಲ್ಲಿ ಹೇಳಲಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *