ಬೆಂಗಳೂರು
ಕಾಣದ ಕಡಲಿನ ಎಂಬ ಪ್ರಸಿದ್ಧ ಗೀತೆ ಬರೆದ ಕನ್ನಡ ನಾಡಿನ ಕವಿ ಜಿಎಸ್ ಶಿವರುದ್ರಪ್ಪ ಅವರ ಮೊಮ್ಮಗಳು ಅನನ್ಯ ಪ್ರಸಾದ್ ಏಕಾಂಗಿಯಾಗಿ ಅಟ್ಲಾಂಟಿಕ್ ಸಾಗರವನ್ನು ದಾಟಿದ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.

ವಿಶ್ವದ ಅತ್ಯಂತ ಕಠಿಣ ಯಾನ ಎನಿಸಿಕೊಂಡಿರುವ ಅಟ್ಲಾಂಟಿಕ್ ಸಾಗರದಲ್ಲಿ ಯಶಸ್ವಿಯಾಗಿ ಸಾಹಸ ತೋರಿದ್ದಾರೆ. ಡಿಸೆಂಬರ್ 11ರಂದು ಕ್ಯಾನರಿ ದ್ವೀಪಗಳಲ್ಲಿ ಒಂದಾದ ಲಾ ಗೊಮೆರಾ ದ್ವೀಪದಿಂದ ಶುರುವಾದ ಏಕಾಂಗಿ ಸಾಗರಯಾನ, ಫೆಬ್ರವರಿ 1ರಂದು ಅಂತ್ಯವಾಗಿದೆ. ಬರೋಬ್ಬರಿ 52 ದಿನಗಳ ಕಾಲ ಚಳಿ, ಗಾಳಿ, ಬಿಸಿಲು ಯಾವುದನ್ನೂ ಲೆಕ್ಕಿಸದೆ ಯಶಸ್ವಿಯಾಗಿ ಯಾನ ಪೂರೈಸಿದ್ದಾರೆ.

ಯಾವುದೇ ಸಾಗರವನ್ನು ಏಕಾಂಗಿಯಾಗಿ ಮತ್ತು ಯಾವುದೇ ಸಹಾಯವಿಲ್ಲದೆ ದೋಣಿಯಲ್ಲಿ ದಾಟಿದ ಮೊದಲ ವರ್ಣೀಯ ಮಹಿಳೆಯಾಗಿ 34 ವರ್ಷದ ಪ್ರಸಾದ್ ದಾಖಲೆಯ ಪುಸ್ತಕಗಳನ್ನು ಪ್ರವೇಶಿಸಿದ್ದಾರೆ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.

ಈ ಪ್ರಯಾಣವನ್ನು ಆರಂಭಿಸುವ ಮುನ್ನ ಮಾತನಾಡಿದ್ದ ಅನನ್ಯ, ಇದು ಕೇವಲ ನನ್ನ ಬಗ್ಗೆ ಮಾತ್ರವಲ್ಲ. ಇದು ವರ್ಣಿಯ ಮಹಿಳೆಯರು ಮತ್ತು ವಿಭಿನ್ನ ಹಿನ್ನೆಲೆಯ ಯಾರಾದರೂ ಸವಾಲುಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸುವ ಸಲುವಾಗಿ ಮಡಿದ ಸಾಧನೆ ಎಂದು ಹೇಳಿದ್ದಾರೆ.

ಅಟ್ಲಾಂಟಿಕ್ ಸಾಗರದಲ್ಲಿ ಏಕಾಂಗಿ ಯಾನ ಮಾಡಲು ನಿರ್ಧಾರ ಮಾಡಿದ ಅನನ್ಯಾ ಪ್ರಸಾದ್, ಈ ಯಾನಕ್ಕೂ ಮೊದಲು ಕಠಿಣ ಪರಿಶ್ರಮ ಹಾಕಿದ್ದರು. 25 ಅಡಿ ಅಳತೆಯ ಬೋಟ್‌ನ ಪ್ರತಿಯೊಂದು ವಿಭಾಗದ ಬಗ್ಗೆಯೂ ಚೆನ್ನಾಗಿ ತಿಳಿದುಕೊಂಡಿದ್ದರು. ಯಾವುದೇ ತಂತ್ರಜ್ಞರ ಸಹಾಯವಿಲ್ಲದೆ ಬೋಟ್ ರಿಪೇರಿ ಮಾಡುವುದನ್ನು ಕಲಿತುಕೊಂಡಿದ್ದರು.

ಅನನ್ಯ ಪ್ರಸಾದ್ ಬೆಂಗಳೂರಿನಲ್ಲಿ ಜನಿಸಿದ್ದು, ತನ್ನ 5ನೇ ವರ್ಷದಲ್ಲಿ ಇಂಗ್ಲೆಂಡ್‌ಗೆ ಪೋಷಕರ ಜೊತೆಗೆ ಹೋಗಿದ್ದರು.
ಮೆಂಟಲ್ ಹೆಲ್ತ್ ಫೌಂಡೇಷನ್ ಹಾಗು ಕರ್ನಾಟಕದ ದೀನಬಂಧು ಟ್ರಸ್ಟ್ ಮೂಲಕ ನಡೆಸುತ್ತಿರುವ ಅನಾಥಾಶ್ರಮ ಹಾಗು ಶಾಲೆಗೆ ನೆರವು ನೀಡಲಿ ಈ ಕೆಲಸ ಮಾಡಿದ್ದಾರೆ. ಜಿ.ಎಸ್ ಶಿವರುದ್ರಪ್ಪ ಅವರ ಸಹೋದರ ಜಿ.ಎಸ್ ಜಯದೇವ ಈ ಟ್ರಸ್ಟ್ ನಡೆಸುತ್ತಿದ್ದಾರೆ. ಕನ್ನಡತಿಯ ಹೆಮ್ಮೆಯ ಸಾಧನೆ ಇದಾಗಿದೆ.
👏👍🙏 Great and big achievement 👏🙏🌹
Proud about you Ananya….. My Mother Bramarambha and your Ajji Parvathamma were good friends…. Howz your mother?
👌👍🙏🙏🌹