ರಾಜ್ಯಪಾಲರಿಂದ ಗುರುಮಹಾಂತ ಸ್ವಾಮೀಜಿಗೆ ಪದವಿ ಪ್ರದಾನ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ವ್ಯಸನ ಮುಕ್ತ ಅಭಿಯಾನದ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸುತ್ತಿರುವ ಪೂಜ್ಯ ಗುರುಮಹಾಂತ ಮಹಾಸ್ವಾಮಿಗಳಿಗೆ ಶುಕ್ರವಾರ ಲೋಕಭವನದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ಜಮಖಂಡಿಯ ಬಾಗಲಕೋಟ ವಿಶ್ವವಿದ್ಯಾಲಯ ತನ್ನ ಪ್ರಥಮ ಘಟಿಕೋತ್ಸವದಂದು ಪ್ರಧಾನ ಮಾಡಬೇಕಿದ್ದ ಪ್ರಥಮ ಗೌರವ ಡಾಕ್ಟರೇಟ್ ಪದವಿಯನ್ನು ರಾಜ್ಯಪಾಲರು ಶ್ರೀಗಳಿಗೆ ಪ್ರದಾನ ಮಾಡಿದರು.

ಶ್ರೀಗಳು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದು, ಅದನ್ನು ಇನ್ನು ಹೆಚ್ಚು ಪ್ರಮಾಣದಲ್ಲಿ ಸೇವೆ ಮಾಡಲಿ ಎಂದು ಹಾರೈಸಿ ಪ್ರಶಸ್ತಿ ಕೊಡಮಾಡಿ ಸತ್ಕರಿಸಿ ಗೌರವಿಸಿದರು.

ಪರ್ಯಾಯವಾಗಿ ಇಳಕಲ್ಲ ಶ್ರೀಮಠ ಹಾಗೂ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದಿಂದ ರಾಜ್ಯಪಾಲರನ್ನು ಶ್ರೀಗಳು ಸತ್ಕರಿಸಿ, ಗೌರವಿಸಿ ಅಭಿನಂದಿಸಿದರು.

ಶಿರೂರು ಮಹಾಂತ ತೀರ್ಥದ ಡಾ. ಬಸವಲಿಂಗ ಶ್ರೀಗಳು, ಸಿದ್ದಲಿಂಗ ಶ್ರೀಗಳು ಹಾಗೂ ಸಿದ್ಧಯ್ಯನಕೋಟೆ ಬಸವಲಿಂಗ ಶ್ರೀಗಳನ್ನು ವಿಶ್ವವಿದ್ಯಾಲಯ ಉಪಕುಲಪತಿಗಳು ಸತ್ಕರಿಸಿ ಗೌರವಿಸಿದರು.

ಶಾಸಕ ವಿಜಯಾನಂದ ಕಾಶಪ್ಪನವರ, ವಿದ್ಯಾವರ್ಧಕ ಸಂಘದ ಚೇರ್ಮನ್ ಶಿವರುದ್ರಪ್ಪ ಗೊಂಗಡಶೆಟ್ಟಿ, ಕಾರ್ಯದರ್ಶಿ ಗೌತಾ ಬೋರ, ಶರಣಪ್ಪ ಅಕ್ಕಿ, ಜಿ.ಎಸ್. ಗೌಡರ್, ಅಮರೇಶ ಬುದ್ದಿನ್ನಿ, ಶಾಂತಣ್ಣ ಸರಗಣಾಚಾರಿ, ಬಿ.ಎಲ್. ಪಾಟೀಲ್ ಶಿವಪ್ರಭು ಪಾಟೀಲ, ಕುಲಪತಿ ಆನಂದ ದೇಶಪಾಂಡೆ, ಕುಲಸಚಿವ ಸೋಮಲಿಂಗ ಗೆಣ್ಣೂರ, ಕೊಡಗು ವಿವಿ ಕುಲಪತಿ ಅಶೋಕ ಆಲೂರ, ಹಾಸನ ವಿವಿ ಕುಲಪತಿ ಡಿ.ಸಿ. ತಾರಾನಾಥ, ಪ್ರೊ. ದಯಾನಂದ ಸಾವಕಾರ ಮತ್ತಿತರರು ಈ ಸಂದರ್ಭದಲ್ಲಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *