ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಆರು ನಗರಗಳಲ್ಲಿ ಸಂಭ್ರಮದ ಬಸವ ಜಯಂತಿ

ಬಸವ ಮೀಡಿಯಾ
ಬಸವ ಮೀಡಿಯಾ

‘ಇವ ನಮ್ಮವ’ ಶರಣತತ್ವ ವಿಶ್ವ ಸಂದೇಶವಾಗಲಿ: ಡಾ. ಮಹಾಂತಪ್ರಭು ಸ್ವಾಮೀಜಿ

ಮೆಲ್ಬೋರ್ನ್ (ಆಸ್ಟ್ರೇಲಿಯಾ):

ಹನ್ನೆರಡನೆಯ ಶತಮಾನದ ವಿಶ್ವಗುರು ಬಸವಣ್ಣನವರು ಪ್ರತಿಪಾದಿಸಿದ ಇವನಾರವ ಎಂದೆನಿಸದೇ ಇವನಮ್ಮವ ಎನ್ನುವ ವಿಶ್ವಭ್ರಾತೃತ್ವವನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕಿದೆ ಎಂದು ಶೇಗುಣಸಿ ಪೂಜ್ಯ ಡಾ. ಮಹಾಂತಪ್ರಭು ಸ್ವಾಮಿಗಳವರು ಹೇಳಿದರು.

ಆಸ್ಟ್ರೇಲಿಯಾದಲ್ಲಿ ಜರುಗಿದ ಬಸವ ಜಯಂತಿ ಕಾಯ೯ಕ್ರಮದಲ್ಲಿ ಭಾಗವಹಿಸಿ ಪ್ರವಚನ ನೀಡಿದರು.

ಆಸ್ಟ್ರೇಲಿಯಾ ಬಸವ ಸಮಿತಿ ವತಿಯಿಂದ ಮೆಲ್ಬೋರ್ನ್, ಸಿಡ್ನಿ, ಬ್ರಿಸ್ಬೇನ್, ಅಡಿಲೇಡ್ ಹಾಗೂ ನ್ಯೂಜಿಲ್ಯಾಂಡಿನ ಆಕ್ಲೆಂಡ್ ಮುಂತಾದ ಮಹಾನಗರಗಳಲ್ಲಿ ಜರುಗಿದ ೨೦೨೬ನೆಯ ಸಾಲಿನ ವಿಶ್ವಗುರು ಬಸವಣ್ಣನವರ ಜಯಂತಿ ಕಾಯ೯ಕ್ರಮವು ಪೂಜ್ಯರ ಸನ್ನಿಧಾನದಲ್ಲಿ ವಿಧಾಯಕ, ವಿನೂತನ ಮತ್ತು ವಿಶೇಷವಾಗಿ ಜರುಗಿತು.

ಹನ್ನೆರಡನೆಯ ಶತಮಾನದ ಬಸವಾದಿ ಶಿವಶರಣರು ಅರಿತು ಆಚರಿಸಿದ ಶಿವಯೋಗ, ಕಾಯಕ, ದಾಸೋಹ, ಪ್ರಜಾಪ್ರಭುತ್ವ ಮತ್ತು ಸಮಾನತೆ ಹೀಗೆ ಹಲವಾರು ಮೌಲ್ಯಗಳನ್ನು ನಾವೆಲ್ಲರೂ ಅರಿತು ಆಚರಿಸಿದಾಗ ವಿಶ್ವವೇ ಒಂದು ಸಾಮರಸ್ಯದಿಂದ ಕೂಡಿದ ಕತಾ೯ರನ ಕಮ್ಮಟವಾಗುತ್ತದೆ ಎಂದು ಸೂಚ್ಯವಾಗಿ ಆಶೀವ೯ಚನ ನೀಡಿದರು.

ಪ್ರಚಲಿತ ಜಾಗತಿಕ ವಿದ್ಯಮಾನಗಳನ್ನು ಗಮನಿಸಿದಾಗ ಮನಸ್ಸು ವ್ಯಾಕುಲಗೊಳ್ಳುತ್ತದೆ. ೨೧ನೆಯ ಶತಮಾನ ಯುದ್ಧದ ಶತಮಾನವಾಗಬಾರದು. ಬಸವಣ್ಣನವರು ಹೇಳಿದ ದಯವೇ ಧಮ೯ದ ಮೂಲ ಆಶಯವಾಗಬೇಕು, ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಬೇಕು, ಸವ೯ರೂ ಸಮಾನರು ಎನ್ನುವ ತತ್ವ ನಡೆಯಲ್ಲಿ ಅಳವಡಬೇಕು. ಅಂದಾಗ ನಾವೆಲ್ಲ ಪ್ರಜ್ಞಾವಂತರಾಗುತ್ತೇವೆ ಎಂದು ಮಾಮಿ೯ಕವಾಗಿ ಹೇಳಿದರು.

ಕಮ೯ಭೂಮಿ ಆಸ್ಟ್ರೇಲಿಯಾದಲ್ಲಿದ್ದುಕೊಂಡು ಜನ್ಮಭೂಮಿಯ ಮಹಾಮಾನವತಾವಾದಿ ಬಸವಣ್ಣನವರ ತತ್ವಾಚರಣೆಗಳನ್ನು ಆಚರಿಸುತ್ತಿರುವ ಅನಿವಾಸಿ ಭಾರತೀಯರ ಮಾತೃದೇಶದ ಶರಣ ಸಂಸ್ಕೃತಿಯ ಅಭಿಮಾನವನ್ನು ಪೂಜ್ಯರು ಮುಕ್ತಕಂಠದಿಂದ ಶ್ಲಾಘಿಸಿದರು.

ಕಾಯಕ ಮತ್ತು ಸಮಾನತೆಯ ತತ್ವವನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವುದನ್ನು ಕಾಣಬೇಕಾದರೆ ಆಸ್ಟ್ರೇಲಿಯ ಹಾಗೂ ನ್ಯೂಜಿಲ್ಯಾಂಡ್ ದೇಶಗಳಿಗೆ ಬರಬೇಕು ಎಂದು ಅಭಿಮಾನದೊಂದಿಗೆ ಪೂಜ್ಯರು ಮಾಮಿ೯ಕವಾಗಿ ಮಾತನಾಡಿದರು.

ಶರಣ ನಾಗರಾಜ ನಾವಲಗಟ್ಟಿ ಮೆಲ್ಬೋನ್೯, ಶರಣೆ ರತ್ನಾ ಹೇಮಂತ್ ಸಿಡ್ನಿ, ಶರಣೆ ರೂಪಾ ಹೆಬ್ಬಂಡಿ ಬ್ರಿಸ್ಬೇನ್, ಶರಣ ಷಡಕ್ಷರಿ ಅಡವಯ್ಯನಮಠ ಅಡಿಲೇಡ್, ಹಾಗೂ ಶರಣ ವಿಶುಕುಮಾರ ಲೋಕಪಾಲ ಆಕ್ಲೆಂಡ್, ನ್ಯೂಜಿಲ್ಯಾಂಡ್ ಇವರುಗಳ ಅಧ್ಯಕ್ಷತೆಯಲ್ಲಿ ಹಾಗೂ ಪದಾಧಿಕಾರಿಗಳ ಸಹಯೋಗದಲ್ಲಿ ಆಯಾ ಮಹಾನಗರಗಳಲ್ಲಿ ಬಸವ ಜಯಂತಿ ಕಾಯ೯ಕ್ರಮಗಳು ವಚನ ಪಠಣ, ವಚನ ಪ್ರಾಥ೯ನೆ, ವಚನ ನೃತ್ಯದೊಂದಿಗೆ ಅಭೂತಪೂವ೯ವಾಗಿ ಜರುಗಿದವು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *