ಬೆಳಗಾವಿ ಜಿಲ್ಲಾಮಟ್ಟದ ವಚನ ಕಂಠಪಾಠ ಸ್ಪರ್ಧೆ: ಕರಪತ್ರ ಬಿಡುಗಡೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಳಗಾವಿ :

ವಚನಗಳು ಬದುಕಿನ ಸಾರಸತ್ವವನ್ನು ಒಳಗೊಂಡಿವೆ ಎಂದು ಪೂಜ್ಯ ವಾಗ್ದೇವಿ ತಾಯಿ ಅವರು ಹೇಳಿದರು.

ಅವರು ಬೆಳಗಾವಿ ನಗರದ ಆಂಜನೇಯ ನಗರದ ಬಸವತತ್ವ ಅನುಭಾವ ಕೇಂದ್ರದಲ್ಲಿ ವಾರದ ವಚನ ಚಿಂತನ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾಮಟ್ಟದ ವಚನ ಕಂಠಪಾಠ ಸ್ಪರ್ಧೆಯ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಗುರು ಬಸವ ಬಳಗದ ಸಂಚಾಲಕರಾದ ಮಹಾಂತೇಶ ತೋರಣಗಟ್ಟಿ ಅವರು ಕಂಠಪಾಠ ಸ್ಪರ್ಧೆಯ ನಿಯಮಗಳನ್ನು ವಿವರಿಸಿದರು. ಪೂಜ್ಯ ಕುಮುದಿನಿ ತಾಯಿ ಅವರು ಉಪಸ್ಥಿತರಿದ್ದರು.

ಹಿರಿಯರಾದ ಕೆಂಪಣ್ಣ ರಾಮಪುರೆ, ಯೋಗ ಗುರುಗಳಾದ ಸಾರಾಪುರೆ, ಗಂಗಾಧರಯ್ಯ ವಸ್ತ್ರದ, ಉಪನ್ಯಾಸಕರಾದ ಅ.ಬ. ಇಟಗಿ, ಪ್ರೀತಿ ಮಠದ, ಮಹಾದೇವಿ ಅರಳಿ ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *