ಬೆಳಗಾವಿ :
ಗುರು ಬಸವ ಜಯಂತಿ ಹಾಗೂ ಮೇ 1- ಕಾರ್ಮಿಕ ದಿನಾಚರಣೆ ನಿಮಿತ್ತ ಮಹಾಂತೇಶನಗರ ರಹವಾಸಿಗಳ ಸಂಘದ ಕನ್ನಡ ಮಾಧ್ಯಮಿಕ ಶಾಲೆಯಲ್ಲಿ ರವಿವಾರ ಸಂಚಾರಿ ಗುರುಬಸವ ಬಳಗದಿಂದ ಬೆಳಗಾವಿ ಶೈಕ್ಷಣಿಕ ಜಿಲ್ಲಾಮಟ್ಟದ ವಚನ ಕಂಠಪಾಠ ಸ್ಪರ್ಧೆ ನಡೆಯಿತು.

ಮಹಾನಗರ ಪಾಲಿಕೆಯ ಸದಸ್ಯರಾದ ರಾಜಶೇಖರ ಡೋಣಿ ಅವರು ವಚನ ಹೇಳುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ ಸಂಚಾರಿ ಗುರುಬಸವ ಬಳಗದ ಸಂಚಾಲಕರಾದ ಮಹಾಂತೇಶ ತೋರಣಗಟ್ಟಿಯವರು ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಬಸವರಾಜ ಜಕಾತಿ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಶೈಲಜಾ ಹಂಪಿಹೊಳಿ, ಬಿ.ಪಿ. ಜೇವನಿ, ಪ್ರವೀಣ ಚಿಕಲಿ ಉಪಸ್ಥಿತರಿದ್ದರು.

ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾದ ಬಸವರಾಜ ರೊಟ್ಟಿ ಅವರ ವಹಿಸಿದ್ದರು. ಅತಿಥಿಗಳಾಗಿ ಕಾರ್ಯದರ್ಶಿಗಳಾಗಿ ಅಶೋಕ ಮಳಗಲಿ ಆಗಮಿಸಿದ್ದರು.
ಪ್ರಾರ್ಥನೆಯನ್ನು ಮಹಾನಂದಾ ಪುರುಶೆಟ್ಟಿ, ನಿರೂಪಣೆಯನ್ನು ಶಿವಾನಂದ ಲಾಳಸಿಂಗಿ, ವಂದನಾರ್ಪಣೆಯನ್ನು ಪ್ರವೀಣ ರೊಟ್ಟಿ ಮಾಡಿದರು.
ಸ್ಪರ್ದಾಳುಗಳ ನೋಂದಣಿ ಕಾರ್ಯವನ್ನು ಸುನಿತಾ ಮ. ತೋರಣಗಟ್ಟಿ, ಬಾಬು ತಿಗಡಿ, ಕೆಂಪಣ್ಣ ರಾಮಪುರಿ ನಿರ್ವಹಿಸಿದರು.

ಕಾರ್ಯಕ್ರಮದ ಮೇಲ್ವಿಚಾರಕರಾಗಿ ಶಿವಾನಂದ ನಾಯಕ, ರಾಜು ಕುಂದಗೋಳ, ಗುರುನಗೌಡ್ರು ಕರಿಗೌಡರ, ಸಿದ್ದರಾಮ ಸಾವಳಗಿ, ಮಲ್ಲಣ್ಣ ಮಾಳಗಿ, ಬಸವರಾಜ ಪಾಟೀಲ, ನಾಗೇಶ ಕಾಮಕರ ನಿರ್ವಹಿಸಿದರು.
ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಎಲ್ಲ ತಾಲೂಕುಗಳಿಂದ 100ಕ್ಕಿಂತ ಹೆಚ್ಚು ವಚನ ಹೇಳುವ 30 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಿಲ್ಲೆಯ ಬೇರೆ ಬೇರೆ ಭಾಗಗಳಿಂದ 26 ವಚನಾಸಕ್ತರು ನಿರ್ಣಾಯಕರಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

1 ಗಂಟೆಯಲ್ಲಿ 366 ವಚನ ಹೇಳುವುದರ ಮೂಲಕ ಪ್ರಥಮ ಸ್ಥಾನವನ್ನು13 ವರ್ಷದ ಖುಷಿ ಅನಿಲಕುಮಾರ ಹಿರೇಮಠ, 263 ವಚನ ಹೇಳುವುದರ ಮೂಲಕ ದ್ವಿತೀಯ ಸ್ಥಾನವನ್ನು 35ವರ್ಷದ ಲಕ್ಷ್ಮಿ ಖಣಗಾರ, 236 ವಚನ ಹೇಳುವುದರ ಮೂಲಕ ತೃತೀಯ ಸ್ಥಾನ 14 ವರ್ಷದ ಸಂಕೇತ ಮೇಟಿ ಪಡೆದುಕೊಂಡರು.
1) 8 ವರ್ಷದ ಸ್ಪೂರ್ತಿ ಬಸಪ್ಪ ದುರ್ಗಣ್ಣವರ (200 ವಚನ) 2) 8 ವರ್ಷದ ಸುಮೀತ್ ಬಸಪ್ಪ ಮುದೇನ್ನವರ (180ವಚನ) 3) 14 ವರ್ಷದ ಸಮರ್ಥ ಸಿದ್ರಾಮ ರಾಮದುರ್ಗ (145) 4) 14 ವರ್ಷದ ದಿವ್ಯಾ ಯಲ್ಲಪ್ಪ ಕೊಂತಿ (136 ವಚನ) 5) 51 ವರ್ಷದ ಶಕುಂತಲಾ ಚನ್ನಪ್ಪ ನರಸಣ್ಣವರ (133ವಚನ) 6)13 ವರ್ಷದ ಅಮೃತ ಮಡಿವಾಳಪ್ಪ ತಡಸಲ (125ವಚನ) ಈ 6 ಜನ ಸಮಾಧಾನಕರ ಬಹುಮಾನಕ್ಕೆ ಆಯ್ಕೆಯಾದರು.

ವಿಜೇತರೆಲ್ಲರಿಗೂ ಎಪ್ರೀಲ್ 17, 2026ರಂದು ಸಾಯಂಕಾಲ 6 ಗಂಟೆಗೆ ಮಹಾಂತ ಭವನದಲ್ಲಿ ನಡೆಯುವ ಮಾಸಿಕ ಅನುಭಾವ ಗೋಷ್ಠಿಯಲ್ಲಿ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಗುವುದು.
