ಚಿಕ್ಕಮಗಳೂರು
ಕೃಷಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬುಧವಾರ ನಗರಕ್ಕೆ ಬಂದಿದ್ದ ಕನ್ನೇರಿ ಸ್ವಾಮಿಯನ್ನು ದಬಾಯಿಸಿ ಬಸವ ಕಾರ್ಯಕರ್ತ ಬಾಣೂರು ಚನ್ನಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮಗಳಲ್ಲಿ ವರದಿಯಾಗಿರುವ ಈ ಘಟನೆಯ ಬಗ್ಗೆ ಬಾಣೂರು ಚನ್ನಪ್ಪ ಹಾಗು ಜಾಗತಿಕ ಲಿಂಗಾಯತ ಮಹಾಸಭಾದ ಗಂಗಾಧರಪ್ಪ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಬಾಣೂರು ಚನ್ನಪ್ಪ
ಬಸವ ದಳದ ಅಧ್ಯಕ್ಷ, ನಿವೃತ್ತ ಇತಿಹಾಸ ಪ್ರಧ್ಯಾಪಕ, ಯೋಗ ಪ್ರಚಾರಕ.
ಕಾರ್ಯಕ್ರಮದಲ್ಲಿ ಏನಾಯಿತು?
ನಾನು ಸಭಾಂಗಣದ ಮೂರನೇ ಸಾಲಿನಲ್ಲಿ ಕುಳಿತಿದ್ದೆ. ಕನ್ನೆರಿ ಸ್ವಾಮಿ ಮುಂದಿನ ಸಾಲಿನಲ್ಲಿ ಕುಳಿತಿದ್ದ, ಇನ್ನೂ ವೇದಿಕೆ ಹತ್ತಿರಲಿಲ್ಲ.
ಅವನನ್ನು ನೋಡುತ್ತಿದ್ದಂತೆ ನನಗೆ ಅವನು ಬಸವ ಅನುಯಾಯಿಗಳ ಬಗ್ಗೆ ಮಾತನಾಡಿದ್ದು ನೆನಪಿಗೆ ಬಂದು ಸುಮ್ಮನೆ ಕೂಡಲು ಆಗಲಿಲ್ಲ. ಅವನು ಕುಳಿತ ಕಡೆ ಹೋಗಿ ನಾವು ಬಸವ ಅನುಯಾಯಿಗಳು ತಾಲಿಬಾನಿಗಳಾ, ನೀನು ಆ ರೀತಿ ಮಹಿಳೆಯರ ಬಗ್ಗೆ ಮಾತನಾಡಿದ್ದು ಸರೀನಾ, ನಿನಗೆ ಸ್ವತಂತ್ರವಾಗಿ ವಿಚಾರ ಮಾಡಲು ಬರುವುದಿಲ್ಲವಾ, ಒಂದು ಸಂಘಟನೆಯ ಗುಲಾಮನಾಗಲು ನಿನಗೆ ನಾಚಿಕೆ ಬರುವುದಿಲ್ಲವಾ, ಎಂದು ಕೇಳಿದೆ.
ಅವನು ತೆಪ್ಪಗೆ ಮುಖ ನೋಡುತ್ತಾ ಕುಳಿತಿದ್ದ.
ಅಷ್ಟರಲ್ಲಿ ಪೊಲೀಸರು ಬಂದು ನನ್ನ ಸೊಂಟ ಹಿಡಿದು ಎಳೆದರು. ನಾನು ಒಬ್ಬ ಹಿರಿಯ ನಾಗರಿಕರ ನನ್ನ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಸಾಮಾನ್ಯ ಜ್ಞಾನವು ನಿಮಗೆ ಇಲ್ಲವಾ ಎಂದೆ. ಅದಕ್ಕೆ ಅವರು ಬನ್ನಿ ಎಂದು ಕಾರ್ಯಕ್ರಮದಿಂದ ಹೊರಗೆ ಕರೆದುಕೊಂಡು ಬಂದರು.
ಯಾರ ಯಾರ ಜೊತೆ ಹೋಗಿದ್ರಿ…
ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ರಾಷ್ಟ್ರೀಯ ಬಸವ ದಳದವರ ಜೊತೆ ಹೋಗಿದ್ದೆ. ಕನ್ನೇರಿ ಏನಾದರು ಬಸವಣ್ಣನವರ ಬಗ್ಗೆ ಮಾತನಾಡಿದರೆ ಅವನನ್ನು ತಡೆಯಲು ಹೋಗಿದ್ವಿ.
ನಿಮ್ಮ ಸಾಹಸಕ್ಕೆ ಬಂದ ಪ್ರತಿಕ್ರಿಯೆ…
ಎಲ್ಲರೂ ಪ್ರಶಂಶಿಸಿದರು. ನಮಗೂ ಅವನನ್ನು ನೋಡಲು ಆಗುತ್ತಿರಲಿಲ್ಲ. ನೀವು ಮಾತನಾಡಿದ್ದು ಒಳ್ಳೆಯದೇ ಆಯಿತು ಎಂದು ಬಹಳ ಜನ ಹೇಳಿದರು. ಇನ್ನೂ ಫೋನ್ ಕರೆಗಳು ಬರುತ್ತಿವೆ.
ಪೊಲೀಸರು ಏನು ಹೇಳಿದರು?
ನೀವು ಮಾತನಾಡಿದ್ದರಲ್ಲಿ ತಪ್ಪಿಲ್ಲ. ಆದರೆ ನಾವು ಅಧಿಕಾರಿಗಳು ಹೇಳಿದಂತೆ ಕೇಳಬೇಕು ಎಂದು ಹೇಳಿ ಕಾಫಿ ಕುಡಿಸಿದರು.
ಗಂಗಾಧರಪ್ಪ
ಅಧ್ಯಕ್ಷ, ಜಾಗತಿಕ ಲಿಂಗಾಯತ ಮಹಾಸಭಾ, ಚಿಕ್ಕಮಗಳೂರು
ಚಿಕ್ಕಮಗಳೂರಿಗೆ ಕನ್ನೇರಿ ಸ್ವಾಮಿ ಬಂದಿದ್ದು…
ಯಾರೋ ರೈತರು ಈ ಕಾರ್ಯಕ್ರಮಕ್ಕೆ ಕನ್ನೇರಿ ಸ್ವಾಮಿಯನ್ನು ಕರೆಸಿಕೊಂಡಿದ್ದರು. ಅದು ಅವರಿಗೆ ಬಿಟ್ಟ ವಿಚಾರ. ಆದರೆ ಆ ಸ್ವಾಮಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಬಗ್ಗೆ ಆಗಲಿ, ಶರಣರ ಬಗ್ಗೆಯಾಗಲಿ, ವಚನ ಸಾಹಿತ್ಯದ ಬಗ್ಗೆಯಾಗಲಿ ಏನಾದರು ಅಸಂಬದ್ಧವಾಗಿ ಮಾತನಾಡುವ, ತಿರುಚುವ, ಅಪಚಾರ ಎಸಗುವ ಸಾಧ್ಯತೆಯಿತ್ತು.
ಅದನ್ನು ತಡೆಯಲು ನಾವು ಸಿದ್ದರಾಗಿದ್ವಿ. ಇದರ ಬಗ್ಗೆ ನಾವು ಮೊದಲು ಪತ್ರಿಕಾಗೋಷ್ಠಿ ಮಾಡಿ ಎಚ್ಚರಿಕೆ ನೀಡಿದ್ವಿ.
ಕಾರ್ಯಕ್ರಮಕ್ಕೆ ಯಾರು ಯಾರು ಹೋಗಿದ್ರಿ
ರಾಷ್ಟ್ರೀಯ ಬಸವದಳ, ಜಾಗತಿಕ ಲಿಂಗಾಯತ ಮಹಾಸಭಾದ ಆಯ್ದ 25 ಸದಸ್ಯರು ಹೋಗಿದ್ದೆವು. ಏನಾದರು ತಪ್ಪು ನಡೆದರೆ ಪ್ರತಿಭಟಿಸಬೇಕು, ಘೋಷಣೆ ಹಾಕಬೇಕು ಎಂದೇ ಹೋಗಿದ್ದೆವು.
ಕಾರ್ಯಕ್ರಮದಲ್ಲಿ ಏನಾಯಿತು
ನಾವು ಕಾರ್ಯಕ್ರಮ ಶುರುವಾಗುವ ಮೊದಲೇ ಹೋಗಿದ್ದೆವು. ಸಭಾಂಗಣದಲ್ಲಿ ಬೇರೆ ಬೇರೆ ಕಡೆ ಕುಳಿತಿದ್ದೆವು. ಒಂದೇ ಗುಂಪಲ್ಲಿ ಒಂದೇ ಕಡೆ ಕುಳಿತಿರಲಿಲ್ಲ.
ಬಾಣೂರು ಚೆನ್ನಪ್ಪ ನಮ್ಮ ಜೊತೆ ಕುಳಿತ್ತಿದ್ದರು.
ಅವರು ನನಗೆ ತಡೆದುಕೊಳ್ಳಲು ಆಗುತ್ತಿಲ್ಲ, ನಾನು ಆ ಸ್ವಾಮಿಯನ್ನು ಕೇಳಿಯೇ ಬಿಡುತ್ತೇನೆ ಎಂದು ಎದ್ದರು. ಆವಾಗಿನ್ನು ಕಾರ್ಯಕ್ರಮ ಶುರು ಆಗಿರಲಿಲ್ಲ. ಕನ್ನೇರಿ ಸ್ವಾಮಿ ಇನ್ನೂ ವೇದಿಕೆ ಏರಿರಲಿಲ್ಲ. ವೇದಿಕೆಯ ಕೆಳಗೆ ಕುಳಿತಿದ್ದರು.
ಈಗ ಶಾಂತವಾಗಿರಿ ಎಂದು ನಾವು ಚೆನ್ನಪ್ಪನವರನ್ನು ವಿನಂತಿಸಿದೆವು. ಆದರೆ ಅವರು ನಮ್ಮ ಮಾತು ಕೇಳದೆ ಸ್ವಾಮಿ ಇದ್ದಲ್ಲಿಗೆ ಹೋಗಿಯೇ ಬಿಟ್ಟರು. “ಏನ್ರೀ ನೀವು ಬಸವಣ್ಣನವರನ್ನು, ಬಸವಾನುಯಾಯಿಗಳನ್ನು ತಾಲಿಬಾನ್ ಎಂದು ಕರೆದಿದ್ದೀರಿ. ನೀವು ಸರಿ ಇಲ್ಲ ನೋಡ್ರಿ,” ಎಂದು ಹೇಳಿದ್ದು ಕೇಳಿಸಿತು.
ಅಷ್ಟರಲ್ಲಿ ಏಳೆಂಟು ಜನ ಧಡೂತಿ ಆಸಾಮಿಗಳು ಬಂದು ಅವರನ್ನು ಎತ್ತಿ ಹಾಕಿಕೊಂಡು ಹೋದರು. ನಾವು ಅವರ ರಕ್ಷಣೆಗೆ ಹೋಗಬೇಕೆನ್ನುತ್ತಲೇ ಮಿಕ್ಕ ಪೊಲೀಸರು ನಮ್ಮನ್ನು ತಡೆದರು. ನೀವು ಹೋಗೋದು ಬೇಡ ನಾವೆಲ್ಲಾ ಅವರನ್ನು ಸಮಾಧಾನ ಮಾಡಿಕೊಂಡು ಕರ್ಕೊಂಡು ಬರ್ತೇವೆ ಎಂದರು.
ಆದರೆ ನಂತರ ಚೆನ್ನಪ್ಪ ಅವರು ನಾನು ಬರೋದಿಲ್ಲ ಕಾರ್ಯಕ್ರಮಕ್ಕೆ ನನ್ನ ಬಹಿಷ್ಕಾರ ಎಂದು ಹೇಳಿ ಹೋಗಿಯೇ ಬಿಟ್ಟರು.
ಆದರೆ ನಾವು ಆ ಕಾರ್ಯಕ್ರಮ ಮುಗಿಯುವವರೆಗೆ ಇದ್ದೆವು.
ಬೇರೆ ಸಭಿಕರ ಪ್ರತಿಕ್ರಿಯೆ ಹೇಗಿತ್ತು…
ಕಾರ್ಯಕ್ರಮದ ನಂತರ 3-4 ಹಿರಿಯ ರೈತರು ನಮ್ಮ ಹತ್ತಿರ ಬಂದು ಭೇಟಿಯಾದರು. ಅವನು ಈ ಹಿಂದೆ ಬಸವೇಶ್ವರರ ಬಗ್ಗೆ ಕೆಟ್ಟದಾಗಿ ಮಾತಾಡಿದ್ದು ನಮಗೆಲ್ಲ ಗೊತ್ತಿತ್ತು. ನಿಮ್ಮ ಪತ್ರಿಕಾ ಹೇಳಿಕೆಯನ್ನೂ ಓದಿದ್ವಿ.
ಏನಾದರೂ ಬಸವಣ್ಣನವರ ಬಗ್ಗೆ ಕನ್ನೇರಿ ಸ್ವಾಮಿ ಕೆಟ್ಟದಾಗಿ ಮಾತಾಡಿದ್ರೆ ನಾವೂ ಕೂಡ ಪ್ರತಿಭಟಿಸಬೇಕು ಎಂದೇ ಕೂತಿದ್ವಿ ಎಂದು ಅವರೂ ಹೇಳಿದರು.
ಕಾರ್ಯಕ್ರಮದ ಸ್ಥಳದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಚ್.ಸಿ. ಕಲವಾಡಪ್ಪ ಅವರು ನಮ್ಮನ್ನು ನೋಡಿ ಮಾತನಾಡಿದರು. ನೀವು ಪತ್ರಿಕೆಯಲ್ಲಿ ಹೇಳಿದಂತೆ ಅಲ್ಲಿ ಏನೂ ನಡೆಯಲ್ಲ ನಾವೆಲ್ಲ ಆಯೋಜಕರಿಗೆ ಹೇಳಿದ್ದೀವಿ. ಅದಕ್ಕಾಗಿ ತಾವು ಶಾಂತವಾಗಿರಿ ಎಂದು ಹೇಳಿದರು.
ಅದಕ್ಕೆ ನಾವು ಯಾರಿಗೂ ತೊಂದರೆ ಮಾಡೋಕೆ ಬಂದಿಲ್ಲ, ಆದರೆ ಕನ್ನೇರಿ ಸ್ವಾಮಿ ಏನಾದರು ಹೆಚ್ಚು ಕಡಿಮೆ ಮಾತಾಡಿದ್ರೆ ಏನಾಗುತ್ತೆ, ಹೇಗಾಗುತ್ತೆ ಎಂದು ತೋರಿಸಲು ಬಂದಿದ್ದೇವೆ ಹೇಳಿದೆವು.
ಹಾಗೇನು ಆಗುವುದಿಲ್ಲ ಬಿಡಿ ಎಂದು ಹೇಳಿ ಅವರು ಕಾರ್ಯಕ್ರಮದ ಒಳಗೆ ಹೋದರು.
ಕನ್ನೇರಿ ಸ್ವಾಮಿ ಪ್ರತಿಕ್ರಿಯೆ ಏನಿತ್ತು
ವೇದಿಕೆಯಲ್ಲಿ ಕನ್ನೇರಿ ಸ್ವಾಮಿ ನಮ್ಮ ಬಗ್ಗೆ ಮಾತನಾಡಿದರು. “ನಾವು ಕಾರ್ಯಕ್ರಮಕ್ಕೆ ಬಂದರೆ ನಿಮಗೆಲ್ಲ ತೊಂದರೆ ಆಗುತ್ತೆ ಎಂದು ಆಯೋಜಕರಿಗೆ ಮೊದಲೇ ಹೇಳಿದ್ದೆ. ಆಯೋಜಕರು ತೊಂದರೆ ಆದರೂ ಪರವಾಗಿಲ್ಲ ಬನ್ನಿ ಅಂದಿದ್ದರು. ಅದಕ್ಕಾಗಿ ಬಂದೆ,” ಎಂದು ಹೇಳಿದರು.
ಕನ್ನೇರಿ ಸ್ವಾಮಿ ವಿರಕ್ತ ಮಠದ ಸ್ವಾಮಿಯಾದರೂ ಕಾರ್ಯಕ್ರಮದಲ್ಲಿ ಶರಣರ ಯಾವೊಂದು ವಚನವನ್ನು ಹೇಳಲಿಲ್ಲ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

ಕನ್ಹೆರಿ ಗುರು ಬಸವಣ್ಣವರ ಹೆಸರ ಜೊತೆ ತಾಲಿಬಾನ್ ಸೇರಿಸಿ ಬಸವ ತಾಲಿಬಾನ್ ಎಂದು ಕರೆದಿರುವುದು ಘೋರ ದುರಂತ, ಕನ್ಹೆರಿ ಕ್ಷಮೆ ಕೇಳುವವರೆಗೆ ಅವನನ್ನು ಪ್ರಶ್ನಿಸುತ್ತಲೆ ಇರಬೇಕು, ಬೆಂಗಳೂರಿ ನಲ್ಲಿ ಇವನಿಗೆ ಮುತ್ತಿಗೆ ಹಾಕಿದ್ದೆವು, ಈಗ ಚಿಕ್ಕಮಗಳೂರಿ ನಲ್ಲಿ ಪ್ರಶ್ನಿಸಿದ್ದೀರಿ, ರಾಜ್ಯದ ಎಲ್ಲ ಕಡೆ ಹೀಗೆ ಪ್ರತಿರೋಧ ತೋರಬೇಕು, ಸ್ಥಳೀಯ ಲಜ್ಜೆಗೆಟ್ಟ ರಾಜಕಾರಿಣಿಗಳಿಗೂ ಪ್ರಶ್ನಿಸೋಣ
ಸೂಪರ್ ಗುರುಗಳೇ
ಗುಂಡಾ kengeri
ಬಾಣೂರು ಚನ್ನಪ್ಪ ಶರಣರಿಗೆ ಹಾರ್ದಿಕ ಅಭಿನಂದನೆಗಳು. ವೀರ ಗಣಾಚಾರಿಯ ಗುಣ ಮೆಚ್ಚಬೇಕು ಬಸವಾದಿ ಶರಣರ ಭಕ್ತರು.
ಹಿರಿಯ ಶರಣರಾದ ತಮ್ಮಗೆ ಅನಂತ ಧನ್ಯವಾದಗಳು ಶರಣು ಶರಣಾರ್ಥಿ, ತಾವು ಕಣ್ಣೇರಿ ಸ್ವಾಮಿಗೆ ನೇರ ವಾಗಿ ಕೇಳಿ, ಗುರು ಬಸವಾದಿ ಶರಣರ ವಚನ ತತ್ವ ಸಿದ್ಧಾಂತದ ಲಿಂಗಾಯತ ಧರ್ಮದ ಮೇಲೆ ಕೆಟ್ಟ ದಾಗಿ ಹೇಳುತ್ತಿದೆ ಯಾಕೆ ಸರಿಯಾಗಿ ಸ್ವಾತಂತ್ರ್ಯ ವಾಗಿ ಮಾತನಾಡಲೀಕೆ ಬರುವುದಿಲ್ಲವಾ , ನಾನು ಬಸವ ತತ್ವ ದ ಮೇಲೆ ನಂಬಿ ಬಂದಿದ್ದೇನೆ,
ನಾನು ತಾಲಿಬಾನಿ ಯಾಗಿ ಕಾಣಿಸುತ್ತಿದ್ದೆಯ , ಎಂದು ವಿಚಾರಿಸಿದ್ದು ತುಂಬ ಸಂತೋಷ, ಶರಣು ಶರಣಾರ್ಥಿಗಳು