ವಿವಿಧ ಬಸವ ಸಂಘಟನೆಗಳ ಯುವ ಸದಸ್ಯರು ರೂಪಿಸಿರುವ ‘ಚಲೋ ಬಸವಕಲ್ಯಾಣ ಹೋರಾಟ ಸಮಿತಿ’
ಬಸವ ಕಲ್ಯಾಣ
ನೆನ್ನೆ ರಾತ್ರಿ ನಡೆದ ಹಠಾತ್ ಬೆಳವಣಿಗೆಯಲ್ಲಿ ವಿವಿಧ ಬಸವ ಸಂಘಟನೆಗಳ ಯುವ ಸದಸ್ಯರು ಒಟ್ಟಾಗಿ ನಾಳಿನ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.
ತಡ ರಾತ್ರಿಯವರೆಗೆ ನಡೆದ ಗೂಗಲ್ ಮೀಟ್ ಸಭೆಯಲ್ಲಿ 200 ಯುವಕರು ಭಾಗವಹಿಸಿ ‘ಚಲೋ ಬಸವಕಲ್ಯಾಣ ಹೋರಾಟ ಸಮಿತಿ’ ರಚಿಸಿ, ಆರ್ ಜಿ ಶೆಟಗಾರ, ಮೀನಾಕ್ಷಿ ಬಾಳಿ ಮುಂತಾದವರು ಕರೆದಿರುವ ಪ್ರತಿಭಟನೆಗೆ ಕೈ ಜೋಡಿಸಲು ನಿರ್ಧರಿಸಿದರು.
ನಾಳೆಯ ಹೋರಾಟಕ್ಕೆ ಸ್ಥಳೀಯ ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಭರದಿಂದ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
“ನಾಳೆಯ ಹಿಂದೂ ಸಮಾವೇಶಕ್ಕೆ ಹಿರಿಯರು ಪ್ರತಿಭಟನೆ ರೂಪಿಸುತ್ತಾರೆಂದು ನಾವು ಸುಮ್ಮನಿದ್ದೆವು. ಅವರು ಹೋರಾಟದಿಂದ ಹಿಂದೆ ಸರಿದಿದ್ದು ನೋಡಿ, ನಾವು ಮುಂದೆ ಬಂದಿದ್ದೇವೆ,” ಎಂದು ‘ಚಲೋ ಬಸವಕಲ್ಯಾಣ’ದ ಸಂಚಾಲಕ ಸಮಿತಿಯ ಸಿದ್ದಪ್ಪ ಮೂಲಗೆ ಹೇಳಿದರು.
ಬಸವ ಕಲ್ಯಾಣದಲ್ಲಿ ಬಸವಣ್ಣನವರಿಗೆ ಅವಮಾನವಾಗುತ್ತಿದೆ. ಅದನ್ನು ಪ್ರತಿಭಟಿಸದಿದ್ದರೆ ನಾವು ಬದುಕಿದ್ದೂ ಸತ್ತಂತೆ.
“ಬಸವ ಕಲ್ಯಾಣದಲ್ಲಿ ಬಸವಣ್ಣನವರಿಗೆ ಅವಮಾನವಾಗುತ್ತಿದೆ. ಅದನ್ನು ಪ್ರತಿಭಟಿಸದಿದ್ದರೆ ನಾವು ಬದುಕಿದ್ದೂ ಸತ್ತಂತೆ.
ನಮ್ಮ ಮುಖ್ಯ ವಿರೋಧವಿರುವುದು ಹಿಂದೂ ಸಮಾವೇಶದ ಜೊತೆ ಬಸವಾದಿ ಶರಣರ ಹೆಸರನ್ನು ಜೋಡಿಸುತ್ತಿರುವುದಕ್ಕೆ. ಇದನ್ನು ಜೋರಾಗಿ ಪ್ರತಿಭಟಿಸದಿದ್ದರೆ ಈ ಹೆಸರು ದಾಖಲಾಗಿ ಶಾಶ್ವತವಾಗಿ ಉಳಿದುಬಿಡತ್ತೆ. ನಾವು ಅದಕ್ಕೆ ಅವಕಾಶ ಕೊಡುವುದಿಲ್ಲ,” ಎಂದು ಹೇಳಿದರು.
ಇಲ್ಲಿಯವರೆಗೆ ಹೋರಾಟದ ಮುಂಚೂಣಿಯಲ್ಲಿದ್ದ ಬಸವ ರಾಜ ಧನ್ನೂರ, ಭಾಲ್ಕಿ ಸ್ವಾಮೀಜಿ ಮುಂತಾದವರು ತಮ್ಮ ವಿರೋಧ ಹಿಂದೂ ಸಮಾವೇಶಕ್ಕಲ್ಲ ಕನ್ನೇರಿ ಸ್ವಾಮಿಗೆ ಮಾತ್ರ ಸೀಮಿತ ಎಂದು ಹೇಳುತ್ತಿದ್ದರು.
“ಕನ್ನೇರಿ ಸ್ವಾಮಿ ಒಬ್ಬ ಬಕರಾ ಅಷ್ಟೇ. ಅಂತಹ ಸಾವಿರ ಬಕರಾಗಳನ್ನ ಆರೆಸ್ಸೆಸ್ ನವರು ತರುತ್ತಾರೆ. ನಮಗೆ ವೈಯಕ್ತಿಕ ವಿರೋಧಕ್ಕಿಂತಲೂ ಸೈದ್ಧಾಂತಿಕ ವಿರೋಧ ಮುಖ್ಯ. ಬಸವಣ್ಣನವರನ್ನ ಆಪೋಶನ ತೆಗೆದುಕೊಳ್ಳಲು ಹಿಂದುತ್ವ ಸಂಘಟನೆಗಳಿಗೆ ಬಿಡುವುದಿಲ್ಲ,” ಎಂದು ಮೂಲಗೆ ಹೇಳಿದರು.
‘ಕನ್ನೇರಿ ಸ್ವಾಮಿ ಒಬ್ಬ ಬಕರಾ ಅಷ್ಟೇ. ಈ ಹಿಂದೂ ಸಮಾವೇಶಕ್ಕೆ ನಮ್ಮ ವಿರೋಧವಿದೆ.’
ಸಿದ್ದು ಶಟಕಾರ, ರವಿ ಪಾಪಡೆ, ರವಿ ಕೋಳಕೂರ, ಆಕಾಶ ಖಂಡಾಳೆ, ಚನ್ನಬಸವ ಹಂಗರಗಿ,
ಸುರೇಶ ಚನಶೆಟ್ಟಿ, ಶಿವಶರಣಪ್ಪ ಹುಗ್ಗೆ ಪಾಟೀಲ, ಜಗದೀಶ ಪಾಟೀಲ, ಪ್ರವೀಣ ಎಕಲಾರೆ, ನಿರಂಹಕಾರ ತುಪ್ಪದ, ರಾಜಕುಮಾರ ಪಾಟೀಲ, ಯೋಗೀಶ್ ಸಿರಿಗಿರೆ, ಬಸವ ಪಾಟೀಲ ಮತ್ತಿತರರು ಹೋರಾಟದ ಮುಂಚೂಣಿಯಲ್ಲಿದ್ದಾರೆ.

