ಶುಭಕೋರಲು ಬಂದವರು ಅನುಭವ ಮಂಟಪದ ಮಾದರಿಯ ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುತ್ತಿದ್ದು ವಿಶೇಷವಾಗಿತ್ತು.
ಹುಬ್ಬಳ್ಳಿ
ನಗರದ ಶಂಕರ ಕೋಳಿವಾಡ ಹಾಗೂ ದಾಕ್ಷಾಯಣಿ ಕೋಳಿವಾಡ ಅವರ ಮಾಲೀಕತ್ವದ ಕೋಳಿವಾಡ ಎಸ್ಟೇಟ್ಸ್ ನ ಒಂದು ಲಕ್ಷ ಚದರ ಅಡಿಯ ನೂತನ ಅತ್ಯಾಧುನಿಕ ಉಗ್ರಾಣ ಬಸವತತ್ವ ನಿಜಾಚರಣೆಯ ವಿಧಿಗಳ ಅನುಗುಣವಾಗಿ ಶನಿವಾರ ಉದ್ಘಾಟನೆಯಾಯಿತು.

ಮೊದಲು ಪ್ರೊಫೆಸರ್ ಜಿ.ಬಿ. ಹಳ್ಯಾಳ ಶರಣರು ಷಟಸ್ಥಲ ದ್ವಜಾರೋಹಣ ನೆರವೇರಿಸಿದರು.
ನಂತರ ಅಲ್ಲಿ ನೆರೆದವರೆಲ್ಲ ವಚನ ಗ್ರಂಥ ಕಟ್ಟುಗಳನ್ನು ತಲೆ ಮೇಲೆ ಇಟ್ಟುಕೊಂಡು ವಚನ ಸಾಹಿತ್ಯ ಸಂರಕ್ಷಿಸಿದ ಶರಣ ಅಮರಗಣಂಗಳನ್ನು ನೆನೆಯುತ್ತಾ, ಜಯಘೋಷ ಹಾಕುತ್ತ ನೂತನ ಭವ್ಯ ಉಗ್ರಾಣವನ್ನು ಪ್ರವೇಶಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಗದಗ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಮಹಾಸ್ವಾಮಿಗಳು ಪೂಜೆಗಿಂತ ಕಾಯಕ ಶ್ರೇಷ್ಟ ಎಂಬ ತತ್ವವನ್ನು ೩೦ ವರ್ಷಗಳಿಂದ ಶಂಕರ ಕೋಳಿವಾಡ ಅಕ್ಷರಶಃ ಪಾಲಿಸುತ್ತಿರುವುದರಿಂದ ಇಂದು ಕೋಳಿವಾಡ ಗ್ರಾನೈಟ್ & ಮಾರ್ಬಲ್ಸ್ ಉತ್ತರ ಕರ್ನಾಟಕದಲ್ಲಿ ಅತಿ ದೊಡ್ಡ ಶೋರೂಮ್ ಆಗಿ ಹೊರಹೊಮ್ಮಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಶ್ರೀ ಜೆ.ಎಸ್. ಗಡ್ಡದ್ದೇವರಮಠ ಅವರು ಉದ್ಘಾಟಿಸಿದರು. ವೇದಿಕೆಯಲ್ಲಿ ಹುಬ್ಬಳ್ಳಿಯ ಮೂರು ಸಾವಿರಮಠದ ಡಾ. ಗುರುಸಿಧ್ದ ರಾಜಯೋಗಿಂದ್ರ ಸ್ವಾಮೀಜಿ ಹಾಗೂ ಧಾರವಾಡ ಮುರಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಶ್ರೀ ಶಿವಣ್ಣ ಕೋಳಿವಾಡ ಹಾಗೂ ಎಸ್. ಎಸ್. ಹರ್ಲಾಪುರ ಉಪಸ್ಥಿತರಿದ್ದರು.


ಶುಭಕೋರಲು ಬಂದಿದ್ದವರೆಲ್ಲ ಅಲ್ಲಿ ನಿರ್ಮಿಸಲಾಗಿದ್ದ ಅನುಭವ ಮಂಟಪ ಮಾದರಿಯ ಮುಂದೆ ನಿಂತು ಫೋಟೋ ತೆಗೆದುಕೊಳ್ಳುತ್ತಿದ್ದುದು ವಿಶೇಷವಾಗಿತ್ತು.
ಡಾ. ಶಶಿಧರ ಹರ್ಲಾಪುರ ಕಾರ್ಯಕ್ರಮ ನಿರೂಪಣೆ ಮಾಡಿ, ಶರಣು ಸಮರ್ಪಣೆ ಮಾಡಿದರು.
ಸ್ಥಳೀಯ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ, ಮೋಹನ ಲಿಂಬಿಕಾಯಿ, ನಗರದ ವರ್ತಕರು, ಗಣ್ಯರು ಬಂದು ಶುಭಕೋರಿದರು.
ಕಲ್ಯಾಣ ನಗರದ ಮಹಿಳಾ ಮಂಡಳ, ಬಸವ ಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭಾ ಸಂಘಟನೆಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎಲ್ಲರಿಗೂ ಮಾದರಿಯಾಗುವಂತೆ ಈ ಕಾರ್ಯಕ್ರಮ ಮಾಡಿದ್ದೀರಿ. ನಿಮಗೆ ಅಭಿನಂದನೆಗಳು. ನಿಮಗೆ ಈ ಸಂದರ್ಭದಲ್ಲಿ ಶುಭಕೋರುತ್ತೇನೆ 💐🙏
ಬಸವ ತತ್ವದ ಪ್ರಕಾರ ಎಲ್ಲ ಕಾರ್ಯಕ್ರಮಗಳನ್ನು ಆಯೋಜಿಸಿದ್ದುದಕ್ಕೆ ಸಂತೋಷವಾಯಿತು. ಶುಭವಾಗಲಿ
ಗುರು ಬಸವ ತಮಗೆ ಒಳಿತನ್ನು ಉಂಟು ಮಾಡಲಿ ಅಭಿನಂದನೆಗಳು