ಭಾಲ್ಕಿ :
ಭಾಲ್ಕಿ ಶ್ರೀಮಠದಲ್ಲಿ ಸೋಮವಾರ ೫೦೪ ನೆಯ ಶಿವಾನುಭವಗೋಷ್ಠಿ ಹಾಗೂ ಶರಣೆ ಗಂಗಾಂಬಿಕಾ ಜಯಂತಿ ಆಚರಣೆ ಜರುಗಿತು.

ಸಾನಿಧ್ಯ ವಹಿಸಿದ, ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು, ಶಿವಾನುಭವವೆಂದರೆ ಸುಖ-ದುಃಖ, ನೋವು-ನಲಿವು, ಮಾನ-ಅಪಮಾನ, ಹಾನಿ-ವೃದ್ದಿ ಮುಂತಾದಗಳೆಲ್ಲವು ಸಮಸ್ಥಿತಿಯಲ್ಲಿ ಕಾಣುವ ಮನಸ್ಥಿತಿ ಬೆಳೆಸಿಕೊಳ್ಳುವುದು.
ನಾವು ಸುಖ ಬಂದರೆ ಅತಿ ಹಿಗ್ಗುತ್ತೇವೆ. ದುಃಖ ಬಂದರೆ ಅತಿ ಕುಗ್ಗುತ್ತೇವೆ. ದುಃಖದ ಪ್ರಸಂಗದಲ್ಲಿ ಧೈರ್ಯ ಕಳೆದುಕೊಂಡು ಜೀವನವೇ ಸಾಕು ಎನ್ನುವಂತೆ ವರ್ತಿಸುತ್ತೇವೆ ಇದು ಸರಿ ಅಲ್ಲ. ಜೀವನದಲ್ಲಿ ಸುಖ-ದುಃಖ ಬರುತ್ತವೆ. ಸುಖ ನಾವು ಎಷ್ಟು ಹರ್ಷದಿಂದ ಪ್ರೀತಿಯಿಂದ ಸ್ವಾಗತಿಸುತ್ತೇವೊ ಹಾಗೆ ದುಃಖವನ್ನು ನಾವು ಪ್ರೀತಿಯಿಂದ ಸ್ವಾಗತಿಸಬೇಕು.
ಎಲ್ಲವೂ ನಮ್ಮ ಮನಸ್ಸಿನ ಪ್ರಕಾರ ಆಗುವುದಿಲ್ಲ. ಕೆಲವೊಮ್ಮೆ ಶಿವನಿಚ್ಛೆಯಂತೆ ಕೆಲವು ಘಟನೆಗಳು ನಡೆಯುತ್ತವೆ. ಅಂತಹ ಸಂದರ್ಭದಲ್ಲಿ ನಾವು ಧೈರ್ಯಗೆಡದೆ ಮುಂದೆ ಸಾಗಬೇಕು. ಅಂತಹ ಆತ್ಮಬಲ ನಮ್ಮಲ್ಲಿ ಬರಬೇಕಾದರೆ ನಾವು ನಿರಂತರ ಇಷ್ಟಲಿಂಗಪೂಜೆ ಹಾಗೂ ವಚನ ಪಾರಾಯಣ ಮಾಡುತ್ತಿರಬೇಕು.
ಲಿಂಗಪೂಜೆಯಿಂದ ಆತ್ಮಬಲ ಹೆಚ್ಚಾಗುತ್ತದೆ. ವಚನ ಪಾರಾಯಣದಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ನಮಗೆ ಪ್ರತಿನಿತ್ಯ ಶಿವಾನುಭವ ಮಾಡಲು ಅಥವಾ ಶರಣರ ಸಂಗ ದೊರೆಯುವುದಿಲ್ಲ. ಆದರೆ ಲಿಂಗಪೂಜೆ, ವಚನಗಳ ಸಂಗ ಮಾಡಿದಾಗ ನಮಗೆ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಪೂಜ್ಯರು ಆಶೀರ್ವಚನ ನೀಡಿದರು.
ಪೂಜ್ಯ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು. ಪೂಜ್ಯ ಪ್ರಭುಲಿಂಗ ಸ್ವಾಮಿಗಳು ಹಾಗೂ ಪೂಜ್ಯ ಸಿದ್ಧಬಸವ ಸ್ವಾಮಿಗಳು ಸಮ್ಮುಖ ವಹಿಸಿದ್ದರು.
ಪೂಜ್ಯ ಶಿವಬಸವ ಸ್ವಾಮಿಗಳು, ಶರಣೆ ಗಂಗಾಂಬಿಕೆಯ ಕುರಿತು ಅನುಭಾವ ನೀಡಿದರು. ಶ್ರೀದೇವಿ ಶರಣಪ್ಪ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಸೂರ್ಯಕಲಾ ಗುಂಡಪ್ಪ ಬೆಲ್ಲಾಳೆ ಅವರಿಂದ ಬಸವ ಗುರುಪೂಜೆ ಜರುಗಿತು.

ಸಂಗಮೇಶ ಜ್ಯಾಂತೆ, ಶೈಲಜಾ ಶಿವಕುಮಾರ ನಾರಾ, ಶೋಭಾ ವಿಜಯಕುಮಾರ ಪನ್ನಶೆಟ್ಟೆ, ಸರಸ್ವತಿ ವೈಜಿನಾಥ ಬರದಾಪೂರೆ, ರೇಖಾ ಹುಲೆಪ್ಪ ಮಾನಕಾರ, ಬೇಬಾವತಿ ಶರಣಪ್ಪ ಬಬಚಡೆ, ಶಾಂತಾ ಜೈರಾಜ ಖಂಡ್ರೆ, ಜೈಶ್ರೀ ಶಿವಕುಮಾರ ಪಾಟೀಲ, ಪೂಜಾ ದೇವೇಂದ್ರ ಕರಂಜೆ, ಕಲ್ಪನಾ ಶಿವಶಂಕರ ಕಾರಬಾರಿ, ಕಲ್ಪನಾ ಮಲ್ಲಿಕಾರ್ಜುನ ಕೋಟೆ, ಸಂಗೀತಾ ಸಂಗಮೇಶ ಗುಮ್ಮೆ, ಬಸವಲಿಂಗಮ್ಮ ಸಂತೋಷ ಜೊತೆಪ್ಪನೊರ, ಮಂಗಲಾ ಸುಭಾಷ ಬಿರಾದಾರ, ರೇಣುಕಾ ಚಂದ್ರಕಾಂತ ಪೋಲಿಸಪಾಟೀಲ, ಭಾಗಿರಥಿಬಾಯಿ ಬಾಬುರಾವ ಜಾಂತೆ, ಪ್ರೇಮಲತಾ ಗುಂಡಪ್ಪ ಬಿರಾದಾರ, ಶೇಕಮ್ಮ ಬಕ್ಕಪ್ಪ ಮೂಲಗೆ, ಕಾವೇರಿ ಶಿವಕುಮಾರ ಬಿರಾದಾರ, ಲಕ್ಷ್ಮೀಬಾಯಿ ಕಾಶಿನಾಥ ಪಟ್ನೆ, ಕಲ್ಪನಾ ಸಂತೋಷ ಪಾಟೀಲ, ಮಹಾದೇವಿ ಗಣೇಶ ಪಾಟೀಲ, ಉಷಾ ಸಂತೋಷ ಧಬಾಲೆ, ರೇಣುಕಾ ರಾಜಕುಮಾರ ಬಿರಾದಾರ, ರಾಜೇಶ್ವರಿ ಸಿದ್ರಾಮಪ್ಪ ಸ್ವಾಮಿ, ಶಶಿಕಲಾ ಚಂದ್ರಕಾಂತ ಕೋಸಂಬೆ, ರೂಪಾವತಿ ಮಲ್ಲಿಕಾರ್ಜುನ ತುಗಶೆಟ್ಟೆ, ಜ್ಯೋತಿ ನೀಲಕಂಠ ಬಿರಾದಾರ, ಸುಧಾರಾಣಿ ಜಾಲೇಂದ್ರ ಭೌರಾ ಅವರಿಗೆ ಪೂಜ್ಯರಿಂದ ಸನ್ಮಾನಿಸಲಾಯಿತು.
ಬಾಬು ಬೆಲ್ದಾಳ ನಿರೂಪಿಸಿದರು. ಸಂಗಮೇಶ ಡೋಣಗಾಪೂರೆ, ವಿಜಯಕುಮಾರ ನಿಟ್ಟೂರೆ ಅವರಿಂದ ವಚನ ಗಾಯನ ನಡೆಯಿತು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
