ಲಿಂಗಾಯತ ಸಂಘಟನೆಯಿಂದ ದಾಂಪತ್ಯ ಧರ್ಮ ಕುರಿತು ಉಪನ್ಯಾಸ

ಬೆಳಗಾವಿ :

ಲಿಂಗಾಯತ ಸಂಘಟನೆ ವತಿಯಿಂದ ಡಾ. ಫ.ಗು. ಹಳಕಟ್ಟಿ ಭವನದಲ್ಲಿ ವಾರದ ಉಪನ್ಯಾಸ ಹಾಗೂ ಸಾಮೂಹಿಕ ಪ್ರಾರ್ಥನೆ ನಡೆಯಿತು.

ದಾಂಪತ್ಯ ಜೀವನ ಕುರಿತು ಶಿಕ್ಷಕಿ ಗಂಗಾ ಚಕ್ರಸಾಲಿ ಉಪನ್ಯಾಸ ನೀಡುತ್ತ, ಗೃಹಸ್ಥ ಜೀವನದ ಮಹತ್ವ, ಶರಣರ ವಚನಗಳಲ್ಲಿ ಸತಿ-ಪತಿ ಧರ್ಮ ಮತ್ತು ಅವರಲ್ಲಿರಬೇಕಾದ ಸಮಾನತೆಯ ಅಂಶಗಳು ಕುರಿತಾಗಿ, ಬಸವಾದಿ ಶರಣರ ವಚನಗಳನ್ನು ಉದಾಹರಿಸುವುದರ ಮೂಲಕ ಮಾತನಾಡಿದರು.

ದಾಂಪತ್ಯ ಜೀವನದಲ್ಲಿ ಸತಿ ಪತಿಗಳಿಬ್ಬರ ನಡುವೆ ಇರಬೇಕಾದ ನಂಬಿಕೆ, ಸಹಬಾಳ್ವೆ, ಹೊಂದಾಣಿಕೆ, ತಾಳ್ಮೆ, ಪರಸ್ಪರ ಸ್ವೀಕಾರ ಮನೋಭಾವ ಇತ್ಯಾದಿ ವಿಷಯಗಳ ಕುರಿತಾಗಿಯೂ ಅವರು ತಿಳಿಸಿದರು.

ಆರoಭದಲ್ಲಿ ಮಹಾದೇವಿ ಅರಳಿ ವಚನ ಪ್ರಾಥ೯ನೆ ನಡೆಸಿಕೊಟ್ಟರು. ಶಿವಕುಮಾರ ಪಾಟೀಲ ಹಾಗೂ ಮಹದೇವ ಕೆoಪಿಗೌಡರ ವಚನಗಳನ್ನು ಪ್ರಸ್ತುತಪಡಿಸಿದರು.

ಈಚೆಗೆ ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಿಂಗಾಯತ ಸಂಘಟನೆಯ ಶಿವಕುಮಾರ ಹಾಗೂ ಮೀನಾಕ್ಷಿ ಅರಳಿ ಅವರನ್ನು ಇದೇ ಸoದಭ೯ದಲ್ಲಿ ಸತ್ಕರಿಸಲಾಯಿತು.

ಅಧ್ಯಕ್ಷತೆಯನ್ನು ಈರಣ್ಣ ದೇಯಣ್ಣವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜೋತಿ ಬಾದಾಮಿ ಭಾಗವಹಿಸಿದ್ದರು.

ದಾಸೋಹ ಸೇವೆಯನ್ನು ವಿಜಯ ಹುದಲಿಮಠ ಸಲ್ಲಿಸಿದರು. ಸುರೇಶ ನರಗುoದ ಸ್ವಾಗತಿಸಿದರು. ಸoಗಮೇಶ ಅರಳಿ ನಿರೂಪಿಸಿದರು. ಎಂ. ವೈ. ಮೆಣಸಿನಕಾಯಿ ಅತಿಥಿಗಳನ್ನು ಪರಿಚಯಿಸಿದರು.

ಕಾಯ೯ಕ್ರಮದಲ್ಲಿ ಸುಜಾತಾ ಮತ್ತಿಕಟ್ಟಿ, ನೇತ್ರಾ ರಾಮಾಪೂರಿ, ಅಕ್ಕಮಹಾದೇವಿ ತೆಗ್ಗಿ, ಲಕ್ಷ್ಮಿ ಜೇವಣಿ, ಶಿವಾನoದ ನಾಯಕ, ಸಿದ್ದಪ್ಪ ಸಾರಾಪುರಿ, ಬಸವರಾಜ ಬಿಜ್ಜರಗಿ, ಶಶಿಭೂಷಣ ಪಾಟೀಲ, ಆನoದ ಕರಕಿ, ಲಕ್ಷ್ಮೀಕಾoತ ಗುರವ, ವಿ. ಕೆ. ಪಾಟೀಲ, ಶೇಖರ ವಾಲಿಇಟಗಿ, ವಿರೂಪಾಕ್ಷ ದೊಡ್ಡಮನಿ, ಶಂಕರಪ್ಪ ಮೆಣಸಗಿ, ಮ.ಬಿ. ಖಾಡೆ, ಗುರುಸಿದ್ದಪ್ಪ ರೇವಣ್ಣವರ, ಸುದೀರ ರಘಶೆಟ್ಟಿ, ಮ. ಬ. ಕರಿಕಟ್ಟಿ ಮತ್ತಿತರರು ಭಾಗಿಯಾಗಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *