(ಬಸವಶಕ್ತಿ ಗೂಗಲ್ ಮೀಟ್ ಸರಣಿ ಉಪನ್ಯಾಸದ ವಿಡಿಯೋ)
ಬೆಂಗಳೂರು
ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿದ್ದ ಸಿದ್ದರಾಮಯ್ಯ ರಾಜಿನಾಮೆ ನೀಡಿದ್ದಾರೆ.
ಅವರ ನಿರ್ಗಮನದಿಂದ ಬದಲಾಗುತ್ತಿರುವ ರಾಜಕೀಯ ಚಿತ್ರಣದ ಬಗ್ಗೆ ಬಸವ ಸಂಘಟನೆಗಳು, ಕಾರ್ಯಕರ್ತರು ಜಾಗೃತರಾಗುವ ಅನಿವಾರ್ಯತೆಯಿದೆ.
ಈ ಬೆಳವಣಿಗೆಗಳನ್ನು ವಿಶ್ಲೇಷಿಸಲು ಬಸವ ರೇಡಿಯೋ ಹೆಸರಾಂತ ಚಿಂತಕರನ್ನು ಆಹ್ವಾನಿಸಿ ಐದು ದಿನಗಳ ಚರ್ಚೆ ನಡೆಸಿತು.
ಜೂನ್ 1 ಹಿರಿಯ ಶರಣ ಸಾಹಿತಿ ಡಾ. ಟಿ ಆರ್ ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಬಂದು ಚರ್ಚೆಯಲ್ಲಿ ಭಾಗವಹಿಸಿದರು.
ಸಿದ್ದರಾಮಯ್ಯ ಅವಧಿಯಲ್ಲಿ ಲಿಂಗಾಯತ ಚಳುವಳಿಗೆ ಪೂರಕವಾದ ವಾತಾವರಣವಿದ್ದಿದ್ದು ಸತ್ಯ. ಅವರ ನಿರ್ಗಮನದ ನಂತರ ಬಸವಪರ ಸಂಘಟನೆಗಳ ಜವಾಬ್ದಾರಿ ಹೆಚ್ಚಿದೆ.
ಎರಡು ಮೂರು ವರ್ಷಗಳಿಂದ ಲಿಂಗಾಯತ ಧರ್ಮ, ಸಮಾಜದ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ವಚನದರ್ಶನ, ಕನ್ನೇರಿ ಸ್ವಾಮಿಯ ವಿಕೃತಿ ಇದಕ್ಕೆ ಕಾಣುವ ಕೆಲವು ಉದಾಹರಣೆಗಳಷ್ಟೇ.
ಇಂದು ಲಿಂಗಾಯತ ಧರ್ಮದ ಅಸ್ತಿತ್ವವನ್ನೇ ಪ್ರಶ್ನಿಸುವ ಕುತಂತ್ರ ನಡೆಯುತ್ತಿದೆ. ಲಿಂಗಾಯತ ಸಮುದಾಯವನ್ನು ಹೆದರಿಸುವಂತಹ ವಾತಾವರಣ ಬೆಳದಿದೆ. ಸಿದ್ದರಾಮಯ್ಯ ನಿರ್ಗಮನದ ನಂತರ ಅದು ಹೆಚ್ಚಾಗುವ ಸಾಧ್ಯತೆಯಿದೆ.
ಇದನ್ನು ವಿರೋಧಿಸಿ ಬಸವ ತತ್ವ ಬಿತ್ತಲು, ಬಸವಪರ ಸಂಘಟನೆಗಳ ರಾಜಕೀಯ ಪ್ರಜ್ಞೆ ಜಾಗೃತವಾಗಬೇಕು.
ರಾಜಕೀಯ ಪ್ರಜ್ಞೆಗೂ ಪಕ್ಷ ರಾಜಕೀಯಕ್ಕೂ ವ್ಯತ್ಯಾಸವಿದೆ. ಎಲ್ಲರ ಹಕ್ಕನ್ನು ಕೇಳುವುದು ರಾಜಕೀಯ ಪ್ರಜ್ಞೆ. ಸಮಾಜದಲ್ಲಿ ಏನಾಗುತ್ತಿದೆ ಎಂದು ಅರ್ಥಮಾಡಿಕೊಂಡು ಪ್ರಶ್ನಿಸುವುದು ರಾಜಕೀಯ ಪ್ರಜ್ಞೆ.
ಇದರ ಕೊರತೆಯಿರುವುದರಿಂದ ಲಿಂಗಾಯತ ರಾಜಕಾರಣಿಗಳು ಲಿಂಗಾಯತದ ವಿರುದ್ಧ ಕೆಲಸ ಮಾಡಲು ಸಾಧ್ಯವಾಗಿರುವುದು.
ಲಿಂಗಾಯತ ಮೇಲೆ ದಾಳಿಯಾದಾಗ ಯಾವ ರಾಜಕಾರಣಿಯೂ ತುಟಿ ಬಿಚ್ಚುವುದಿಲ್ಲ. ಕನ್ನೇರಿ ಸ್ವಾಮಿಗೆ ಬೆಂಬಲವಾಗಿ ನಿಲ್ಲುತ್ತಾರೆ.
ರಾಜ್ಯದಲ್ಲಿ ನೂರಾರು ಬಸವಪರ ಸಂಘಟನೆಗಳಿವೆ ಅವರು ರಾಜಕೀಯವಾಗಿ ಜಾಗೃತರಾದರೆ ಮಾತ್ರ ಇದಕ್ಕೆ ಕಡಿವಾಣ ಹಾಕಬಹುದು

ಹೌದು ಸರ್ ನಮ್ಮ ನಿಷ್ಠಾವಂತ ಲಿಂಗಾಯತ ಜನ ಜಾಗ್ರತಿ ಆಗಬೇಕು 💐👏🏻
ಪಂಜಾಬಿನಲ್ಲಿ ಸಿಖ್ಖರ ಹಿತಾಸಕ್ತಿ ರಕ್ಷಿಸುವ ಅಕಾಲಿದಳದಂತ ಲಿಂಗಾಯತರ ಧರ್ಮ, ತತ್ವ ರಕ್ಷಣೆಯ, ಧರ್ಮ ಮಾನ್ಯತೆಗೆ ರಾಜಕೀಯವಾಗಿ ಸ್ಪಂದಿಸುವ ಪಕ್ಷವೊಂದರ ಅವಶ್ಯಕತೆ ಇದೆ. ಹೊಸದಾಗಿ ಬಸವಾಭಿಮಾನಿಗಳೆ ಕಟ್ಟಬೇಕು.
ತಾವು ಹೇಳಿದ ಹಾಗೆ ಕೆಲವು ಲಿಂಗಾಯತ ಧರ್ಮ ದ್ರೋಹಿಗಳು ಹೆಚ್ಚಾಗಿದ್ದಾರೆ …ಬಸವ ಪರ ಸಂಘಟನೆಗಳು ಹೋರಾಟ ಮಾಡಲೇಬೇಕು. ಆ ಪರಿಸ್ಥಿತಿ ನಿರ್ಮಾಣವಾಗಿದೆ.. ಜೈ ಬಸವಣ್ಣ ಜೈ ಲಿಂಗಾಯತ.. ಶರಣು ಶರಣಾರ್ಥಿಗಳು 🙏 🙏 🌺