ಕೊಪ್ಪಳ:
ಪ್ರತ್ಯೇಕ ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆಗಾಗಿ ಕೇಂದ್ರ ಸರ್ಕಾರಕ್ಕೆ ಮರು ಪ್ರಸ್ತಾವನೆಯನ್ನು ಕಳುಹಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಬೇಕೆಂಬ ನಿರ್ಣಯವನ್ನು ವಿವಿಧ ಬಸವ ಪರ ಸಂಘಟನೆಗಳು ರವಿವಾರ ತೆಗೆದುಕೊಂಡವು.
ಈ ಕುರಿತು ಪತ್ರ ಚಳುವಳಿಯನ್ನು ಶುರು ಮಾಡಿ ೫೦೦ ಅಂಚೆ ಪತ್ರಗಳನ್ನು ಬರೆದು ಮುಖ್ಯಮಂತ್ರಿಗಳ ವಿಳಾಸಕ್ಕೆ ಕಳುಹಿಸಲಾಯಿತು.

ಬಸವ ಚಿಂತನ ಪ್ರಭೆಯ ಮೂರನೇ ವರ್ಷದ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಬಸವದಳ (ರಿ), ಲಿಂಗಾಯತ ಧರ್ಮ ಮಹಾಸಭಾ, ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಗಲಾಂಬಿಕಾ ಮಹಿಳಾ ಗಣ ನೇತೃತ್ವದಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಕಳೆದ ಮೂರು ದಿನಗಳಿಂದ ನಡೆದ ಈ ಸಂಘಟನೆಗಳ ಪದಾಧಿಕಾರಿಗಳಾದ ವೀರಣ್ಣ ಲಿಂಗಾಯತ, ಸತೀಶ ಮಂಗಳೂರು, ಜಗದೇವಿ ಚಟ್ಟಿ, ಬಾಳಪ್ಪಣ್ಣ ವಿ.ಕೆ, ರತ್ನಮ್ಮ ಕಾದರವಳ್ಳಿ, ಮಮತಾ ಪ್ರವೀಣ, ಜ್ಯೋತಿ ಸದಾನಂದ, ಸತ್ಯಕ್ಕ ಬೆಂಗಳೂರು, ಶ್ರೀನಾಥ ಕೋರೆ, ಅನಸೂಯ ಮಹೇಶ, ಬಿಂದುರಾಜ ಬೆಂಗಳೂರು, ಜ್ಯೋತಿ ಶಿವರಾಜ, ಸುಂಕಪ್ಪ ಅಮರಪುರ, ವಿದ್ಯಾವತಿ ನಿಡುಗುಂದಿ, ಅಕ್ಕಮಹಾದೇವಿ ಚಿತ್ರದುರ್ಗ, ರತ್ನಮ್ಮ ಮಹಾಲಿಂಗಪ್ಪ, ವಿಜಯರಾಜು, ಗಂಗಾವತಿ ವೀರೇಶ, ಕೆ ಶರಣ ಪ್ರಸಾದ, ಆನಂದ ಗುಡಾಸ, ರವಿಶಂಕರ ಬಳ್ಳಾರಿ, ಗಣಪತಿ ಬಿರಾದಾರ, ಬಾಬುರಾವ ಪಂಕಶಾಲೆ ಮತ್ತೀತರ ಮುಖಂಡರು, ಸದಸ್ಯರು ಪಾಲ್ಗೊಂಡಿದ್ದರು.

ಸಮಾವೇಶದಲ್ಲಿ ಎಲ್ಲರಿಗೂ ವಚನ ಪುಸ್ತಕ, ರುದ್ರಾಕ್ಷಿ ಕಂಕಣ ನೀಡಲಾಯಿತು. ಸರ್ವರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮೊದಲ ಸಮಾವೇಶ ನೇಪಾಳದಲ್ಲಿ, ಎರಡನೆಯದು ಭದ್ರಾವತಿ, ಮೂರನೆಯದಾಗಿ ಕೊಪ್ಪಳದಲ್ಲಿ ನಡೆದಿರುವ ಕಾರ್ಯಕ್ರಮವಿದು.
