ಮಲೆ ಮಹದೇಶ್ವರ ಬೆಟ್ಟ
ಸಾಲೂರು ಬೃಹನ್ಮಠದ ಆವರಣದಲ್ಲಿ ಮಲೆ ಮಹದೇಶ್ವರರು ಮತ್ತು ಸಮಕಾಲೀನರು ವಿಷಯದ ಮೇಲೆ ವಿಚಾರ ಸಂಕಿರಣ ಆಯೋಜಿಸಲಾಗಿತ್ತು.
ಮೈಸೂರು-ಚಾಮರಾಜನಗರ ಜಿಲ್ಲಾ ವೀರಶೈವ-ಲಿಂಗಾಯತ ಮಠಾಧಿಪತಿಗಳ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದವನ್ನು ಕರ್ನಾಟಕ ಹೈಕೋರ್ಟ್ ನ್ಯಾ. ಇ.ಎಸ್. ಇಂದ್ರೇಶ್ ಉದ್ಘಾಟಿಸಿದರು.
ಸುತ್ತೂರು ಮಠದ ಪೂಜ್ಯ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಮಾತನಾಡಿ, ಮಲೆ ಮಹದೇಶ್ವರರು ಶ್ರೀಶೈಲದಿಂದ ಬಂದು ಬಿಲ್ವಗಿರಿ ಕಾಡಿನಲ್ಲಿ ತಪಸ್ಸು ಮಾಡಿ ಹಲವು ಪವಾಡಗಳನ್ನು ಮಾಡಿದ್ದಾರೆ.
ಈ ಭಾಗದ ಭಕ್ತಾರು ಮಹದೇಶ್ವರ ಮಹಿಮೆಯನ್ನು ಕಂಸಾಳೆ ಹಾಡುಗಳ ಮೂಲಕ ಸತರೂಪದಲ್ಲಿ ವಿಸ್ತರಿಸುತ್ತಿದ್ದಾರೆ. ಈ ಜನಪದ ಸಂಪ್ರದಾಯವನ್ನು ಮು೦ದುವರಿಸಲು ಮಹದೇಶ್ವರರು ಆಶೀರ್ವಾದ ಮಾಡಿದ್ದಾರೆ.

ಸಿದ್ದಪ್ಪಾಜಿ ಮತ್ತು ಮಂಟೇಸ್ವಾಮಿಯವರ ಕಾವ್ಯಗಳು ಸಹ ಪ್ರಸಿದ್ಧವಾಗಿವೆ ಎಂದು ತಿಳಿಸಿದರು.
ಮಹದೇಶ್ವರ ಸಮಕಾಲೀನರಾದ ಕೊಂಗಳ್ಳಿ ಮಲ್ಲಿಕಾರ್ಜುನ ಬ್ರಹೇಶ್ವರ ಜಡೆ ಸ್ವಾಮಿ ಮತ್ತು ಹೊಂಡರಬಾಳ ಸಿದ್ದೇಶ್ವರರು ತಪೋಬಲದಿಂದ ಜನರ ಕಷ್ಟಗಳನ್ನು ಪರಿಹರಿಸಿದ್ದಾರೆ ಎಂದರು.
ಸಿದ್ದಗಂಗಾ ಕ್ಷೇತ್ರದ ಪೀಠಾಧಿಪತಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ ಲಿಂಗಾಯತ ತತ್ವಗಳಾದ ಕಾಯಕ, ದಾಸೋಹ, ಸರ್ವರ ಸಮಾನತೆಯನ್ನು ಯುವಪೀಳಿಗೆಗೆ ತಲುಪಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ವಿಸ್ತ್ರತ ಚರ್ಚೆ ನಡೆಯಿತು.

ಈ ಸಂದರ್ಭದಲ್ಲಿ ಎಡೆಯೂರು ತೊಂಟದ ಸಿದ್ದಲಿಂಗೇಶ್ವರ ಕೃತಿಯನ್ನು ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಲೋಕಾರ್ಪಣೆಗೊಳಿಸಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀ ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು, ಸಾಲೂರು ಬೃಹನ್ ಮಠದ ಪೀಠಾಧಿಪತಿಗಳಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಶಾಸಕ ಎಚ್.ಎಂ. ಗಣೇಶ್ ಪ್ರಸಾದ್, ಮಾಜಿ ಶಾಸಕಿ ಪರಿಮಳ ನಾಗಪ್ಪ, ಜನಧ್ವನಿ ಟ್ರಸ್ಟ್ ಅಧ್ಯಕ್ಷರಾದ ವೆಂಕಟೇಶ್, ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ, ಡಾ. ದತ್ತೇಶ್ ಕುಮಾರ್, ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ್ ಸೇರಿದಂತೆ ಹಲವು ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.
