ಬೇಲಿ ಮಠದ ಸ್ವಾಮೀಜಿಯವರು ಆಗಸ್ಟ್ 20 ರಂದು ಬೆಂಗಳೂರಿನ ‘ವಚನ ದರ್ಶನ’ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ಹೊಗದಿರಲು ನಿರ್ಧರಿಸಿದ್ದು ಒಳ್ಳೆಯ ಬೆಳವಣಿಗೆ.
ಅವರು ಆರೆಸ್ಸೆಸ್ ಪ್ರಾಯೋಜಿತ ಪುಸ್ತಕ ಬಿಡುಗಡೆಗೆ ಹೋಗಲು ಒಪ್ಪಿಕೊಂಡಾಗ ಸಹಜವಾಗಿ ಅವರ ನಡೆಗೆ ಬಸವ ಮಾರ್ಗಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಜನರ ವಿರೋಧದಲ್ಲಿ ಆತಂಕ ಮತ್ತು ಕಳಕಳಿ ಇತ್ತು. (ನಾನೂ ಕೂಡ ತುಸು ನಿಷ್ಠುರವಾಗಿಯೇ ಬರೆದಿದ್ದೆ) ಈಗ ಜನರ ಭಾವನೆಗೆ ಬೆಲೆ ಕೊಟ್ಟೋ ಅಥವಾ ಬೇರೆ ಇನ್ನಾವುದೋ ಕಾರಣಕ್ಕೋ ಅವರು ಹಿಂದೆಂಟು ಹಾಕಿರುವುದು ಸಮಾಧಾನಕರ ಸಂಗತಿ.
ಬಸವ ಮಾರ್ಗಿ ಮಠಾಧೀಶರು ತಮ್ಮ ಸೈದ್ಧಾಂತಿಕ ಶತ್ರುಗಳು ಯಾರು, ಮಿತ್ರರು ಯಾರು ಎಂದು ಗುರುತಿಸಲು ವಿಫಲವಾದರೆ ಲಿಂಗಾಯತ ಚಳವಳಿ ಹತ್ತು ವರ್ಷ ಹಿಂದಕ್ಕೆ ಹೊಗುತ್ತದೆ. ಅವರು ಯಾರೇ ಆಗಿರಲಿ ಸಾಧ್ಯವಾದರೆ ಲಿಂಗಾಯತ ರಥ ಮುಂದೆ ತೆಗೆದುಕೊಂಡು ಹೋಗಬೇಕು ಇಲ್ಲವೇ ಅಲ್ಲೇ ನಿಂತಲ್ಲೇ ನಿಲ್ಲಲು ಬಿಡಬೇಕು. ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ರಥವನ್ನು ಹಿಂದೆ ತಳ್ಳಿದ್ದರೆ ಚರಿತ್ರೆ ಅವರನ್ನು ಎಂದೆಂದೂ ಕ್ಷಮಿಸುವುದಿಲ್ಲ.
ಈ ವಿಷಯದಲ್ಲಿ ಬೇಲಿ ಮಠದ ಸ್ವಾಮೀಜಿಗಳು ಪ್ರಜಾತಂತ್ರದ ನಡೆ ಅನುಸರಿಸಿದ್ದಾರೆ. ಅವರು ತೆಗೆದುಕೊಂಡ ಈ ನಿಲುವನ್ನು ಸ್ವಾಗತಿಸುತ್ತೇನೆ.