ಮತ್ತೆ ಈ ರೀತಿ ವಿವಾದವಾಗದಂತೆ ಸುತ್ತೋಲೆ ಕಳಿಸುತ್ತೇನೆ: ಸಿ ಸೋಮಶೇಖರ್

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ಸಮ್ಮೇಳನಕ್ಕೆ ವಚನ ದರ್ಶನ ತಂಡದ ಮಲ್ಲೇಪುರಂ ವೆಂಕಟೇಶ್ ಅವರನ್ನು ಆಹ್ವಾನಿಸಿರುವುದರ ವಿರುದ್ಧ ಶರಣ ಸಮಾಜದಿಂದ ಸಿಟ್ಟಿನ ಪ್ರತಿಕ್ರಿಯೆ ಬಂದಿದೆ.

ಇಂದು ಬಸವ ಮೀಡಿಯಾಗೆ ಕರೆ ಮಾಡಿದ ಪರಿಷತ್ತಿನ ರಾಜ್ಯಾಧ್ಯಕ್ಷ ಅಧ್ಯಕ್ಷ ಸಿ ಸೋಮಶೇಖರ್ ಅಹ್ವಾನ ದೊಡ್ಡ ವಿವಾದವೆಬ್ಬಿಸಿದೆ, ಈ ರೀತಿ ಮತ್ತೆ ಆಗದಂತೆ ನಿರ್ದೇಶನ ನೀಡುತ್ತೇನೆ, ಎಂದು ಹೇಳಿದರು.

ಬಸವ ಅಭಿಮಾನಿಗಳ ಮನಸ್ಸಿಗೆ ನೋವಾಗದ ರೀತಿಯಲ್ಲಿ ಮತ್ತು ಪರಿಷತ್ತಿನ ಆಶಯಕ್ಕೆ ದಕ್ಕೆ ಬಾರದ ರೀತಿಯಲ್ಲಿ ಸಭೆ ಸಮಾರಂಭಗಳನ್ನು ಏರ್ಪಡಿಸಬೇಕೆಂದು ಸುತ್ತೋಲೆ ಕಳಿಸುತ್ತೇನೆ, ಎಂದು ಹೇಳಿದರು.

ಮಾರ್ಚ್ 23 ಮೈಸೂರಿನಲ್ಲಿ ನಡೆಯುತ್ತಿರುವ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಸುಮಾರು 3,000 ಜನ ಭಾಗವಹಿಸುವ ನಿರೀಕ್ಷೆ ಆಯೋಜಕರಿಗಿದೆ. ಇಂತಹ ದೊಡ್ಡ ಸಮ್ಮೇಳನದಲ್ಲಿ ವಚನಗಳನ್ನು ತಿರುಚಲು ಪ್ರಕಟವಾಗಿರುವ ವಚನ ದರ್ಶನದ ತಂಡದ ಮಲ್ಲೇಪುರಂ ವೆಂಕಟೇಶ್ ಅವರಿಗೆ ವೇದಿಕೆ ಕೊಟ್ಟಿರುವುದಕ್ಕೆ ಅನೇಕ ಚಿಂತಕರು ಶರಣ ಸಾಹಿತ್ಯ ಪರಿಷತ್ತಿನ ಬಸವ ನಿಷ್ಠೆಯನ್ನೂ ಪ್ರಶ್ನಿಸಿದ್ದಾರೆ.

ನಾನು ಮುಂಚೆ ಹೇಳಿದ ಹಾಗೆ ನಮ್ಮದು ಬಸವ ತತ್ವಕ್ಕೆ ನಿಷ್ಠವಾಗಿರುವ ಸಂಘಟನೆ. ಇದಕ್ಕೆ ವಿರುದ್ಧವಾಗಿ ನಡೆಯುವುದಿಲ್ಲ, ಎಂದು ಸೋಮಶೇಖರ್ ಹೇಳಿದರು.

ಅತಿಥಿಗಳ ಆಯ್ಕೆಯನ್ನು ಜಿಲ್ಲಾ ಘಟಕ ಸ್ವತಂತ್ರವಾಗಿ ಕೆಲಸ ಮಾಡಿದೆ. ನನ್ನನ್ನು ಸಂಪರ್ಕಿಸಿಲ್ಲ, ಇದು ಸತ್ಯ, ಎಂದರು. ಜಿಲ್ಲಾ ಸಮ್ಮೇಳನದಲ್ಲಿ ನನ್ನ ಯಾವುದೇ ಪಾತ್ರವಿಲ್ಲ.

ನನ್ನ ಅಧ್ಯಕ್ಷತೆಯನ್ನು ಬೆಳಗಿನ ಉದ್ಘಾಟನೆಗೆ ಮಾತ್ರ ಹಾಕಿದ್ದಾರೆ, ಸಮಾರೋಪಕ್ಕೆ ಹಾಕಿಲ್ಲ. ಸಾಮಾನ್ಯವಾಗಿ ಎರಡೂ ಸಂದರ್ಭಗಳಲ್ಲಿ ರಾಜ್ಯ ಅಧ್ಯಕ್ಷರು ಇರಬೇಕು, ಎಂದು ಹೇಳಿದರು. (ಮಲ್ಲೇಪುರಂ ವೆಂಕಟೇಶ್ ಅವರು ಸಮಾವೇಶದ ಸಮಾರೋಪ ಭಾಷಣ ಮಾಡಲಿದ್ದಾರೆ.)

ತಾವು ಕಳಿಸಲಿರುವ ನಿರ್ದೇಶನದ ಬಗ್ಗೆ ಮತ್ತೆ ಮಾತನಾಡುತ್ತ ಸೋಮಶೇಖರ್ ಅವರು ಒಂದು ಸಾಮಾನ್ಯ ಸುತ್ತೋಲೆ ತಕ್ಷಣ ಕಳಿಸುತ್ತೇವೆ. ಆದರೆ ಪದೇ ಪದೇ ಜಿಲ್ಲಾ ಘಟಕಗಳ ಕೆಲಸವನ್ನು ಪ್ರಶ್ನೆ ಮಾಡಿದರೆ, ಅವರು ನಿಷ್ಕ್ರಿಯರಾಗುತ್ತಾರೆ ಎಂದು ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/GavGlyNxCLf7iBbDBH8P5b

Share This Article
9 Comments
  • ಇವರು ಸಂಘಿ ಸಾಂಗ್ಯತ್ಯದ ಕುಂ ಕುಂ ದಾರಿ ಸ್ತ್ರೀ ಅಲ್ಲ ಪುರುಷರೇ.
    ಬಸವ ತತ್ವ ಅಂತ ಬಾಯಿ ತುಂಬ ಹೇಳಿ, ಕುಂ ಕುಂ ಧರಿಸುವವರ ಕರಾಳತನಇಷ್ಟೇ.

  • ಇಂತಹ ಪ್ರಮುಖ ಸಮ್ಮೇಳನಕ್ಕೆ ರಾಜ್ಯಾಧ್ಯಕ್ಷರ ಅನುಮತಿ ಇಲ್ಲದೆ ಸಮಾರೋಪ ಸಮಾರಂಭಕ್ಕೆ ಶರಣ ಸಾಹಿತ್ಯ ವಿರೋಧಿಗಳನ್ನು ಆಹ್ವಾನಿಸಿದ್ದಾರೆ ಅನ್ನುವುದನ್ನು ನಂಬಲು ಸ್ವಲ್ಪ ಕಷ್ಟವಾಗುತ್ತೆ. ಹಾಗೆ ಆಗಿರಲೂಬಹುದು ಎಂದು ನಂಬುತ್ತಲೇ ಇನ್ನೂ ಮುಂದೆ ಇಂತಹ ಪ್ರಮಾದ ಆಗದಂತೆ ನೋಡಿಕೊಳ್ಳುತ್ತೇನೆ ಎನ್ನುವ ಅವರ ಮಾತುಗಳನ್ನು ಗೌರವಿಸೋಣ.

  • ಶರಣ ಸಾಹಿತ್ಯ ಪರಿಷತ್ ನ ರಾಜ್ಯಧ್ಯಕ್ಷರು ಮಾತಿನಲ್ಲಿ
    ಪ್ರವೀಣರು, ಮಾಡಿದ ಪ್ರಮಾದ ತಿದ್ದಿಕೊಳ್ಳಲು ಈಗಲೂ
    ಅವಕಾಶವಿದೆ. ಬಸವ ನಿಷ್ಟರಾದರೆ ಈ ಪ್ರಯತ್ನ ಆಗಲಿ.

  • ಶರಣ ಸಾಹಿತ್ಯ ಪರಿಷತ್ತಿನ ನಡೆ ಮತ್ತು ನುಡಿ ಎರಡೂ Diagonally opposite ಅದಾವ. ಹೇಳೋದು ಪುರಾಣ. ತಿನ್ನೋದು ಬದನೆಕಾಯಿ ಅಂತಾರಲ್ಲಾ ಹಂಗ ಇವರ ನಡವಳಿಕೆ.

    ಸುತ್ತೂರು ಶ್ರೀಗಳು ಅಮೇರಿಕಾದಲ್ಲಿ ಲಕ್ಷ್ಮೀನಾರಾಯಣ ಗುಡಿ ಕಟ್ಟಿ money collection center ತಗದಾರ. ಶರಣ ಸಾಹಿತ್ಯ ಪರಿಷತ್ತಿನ ಧ್ವಜಧಾರಿ ಯಾವ ಬಸವ ತತ್ವ ಪಾಲನೆ ಮಾಡಿದಾರೆ ಸರ್. Please visit their official website, if I am wrong.

    Contact Us – JSS Spiritual Mission
    https://jssmission.org/contact-us/

    Totally disgusting activities.

  • ನೀವು ರಾಜ್ಯಾಧ್ಯಕ್ಷರು ಎಂದ ಮೇಲೆ ನಿಮಗೆ ಸಂಪೂರ್ಣ ಅಧಿಕಾರವಿರುತ್ತದೆ. ಕೂಡಲೆ ಆ ಸಂಘಿ ಗೇಟ್ ಕೀಪರ್ ಮಾಡುವ ಸಮಾರೋಪ ಭಾಷಣ ರದ್ದುಗೊಳಿಸಿ. ಅದಾಗದಿದ್ದರೆ ಕಾರ್ಯಕ್ರಮವನ್ನ ಸ್ವತಃ ನೀವೆ ಭಹಿಷ್ಕರಿಸಿ.

    • ದೇಶ ವಿದೇಶದಲ್ಲಿ ಹಣದ ಮೆಷಿನ್ ಇಟ್ಟಾರ ನಮ್ಮ ಶ್ರೀಗಳು ಬಸವಣ್ಣನವರ ಹೆಸರು ಸಾಕು ಶ್ರೀಗಳು ಏಳ್ಗೆಗೆ

  • ಈ ಸೋಮಶೇಖರ್ ಹಣೆಗೆ ಕುಂಕುಮ ಬಳಿದುಕೊಂಡು ಯಾವ ಶರಣ ಸಾಹಿತ್ಯ ಪರಿ ಸತ್ ಅಧ್ಯಕ್ಷ…..

  • ಸನ್ಮಾನ್ಯ ಸಿ. ಸೋಮಶೇಖರ್, ಸಾರ್ ಇವರು ಬಸವತತ್ತ್ವನ್ನು ಪೂರ್ಣವಾಗಿ ಅರಿತುಕೊಂಡಿದ್ದರೆ ಕುಂಕುಮಧಾರಿ ಆಗುತ್ತಿರಲಿಲ್ಲ. ಕುಂಕುಮ ಇಟ್ಟುಕೊಂಡು ಇವರು ಶರಣರಿಗೆ ಯಾವ ಸಂದೇಶ ಕೊಡುತ್ತಾರೆ. ಶರಣ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದ ಸನ್ಮಾನ್ಯ ಶ್ರೀ ಗೊ ರು ಚ ರವರು ಅಲ್ಲೇ ಬೆಂಗಳೂರಲ್ಲೇ ಇದ್ದಾರೆ. ದಯಮಾಡಿ ಅಧ್ಯಕ್ಷರೇ ಅವರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ.

Leave a Reply

Your email address will not be published. Required fields are marked *