ಆಹ್ವಾನದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಸಿಟ್ಟಿನ ಪ್ರತಿಕ್ರಿಯೆ ನೋಡಿದ್ದೇನೆ ಎಂದು ಪರಿಷತ್ತಿನ ಅಧ್ಯಕ್ಷ ಸಿ ಸೋಮಶೇಖರ್ ಹೇಳಿದರು.
ಮೈಸೂರು
ಸುತ್ತೂರು ಶ್ರೀಮಠ ಸ್ಥಾಪಿಸಿರುವ ಶರಣ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ಭಾಗವಹಿಸಲು ‘ವಚನ ದರ್ಶನ’ ತಂಡದ ಮಲ್ಲೇಪುರಂ ವೆಂಕಟೇಶ್ ಅವರಿಗೆ ಆಹ್ವಾನ ನೀಡಿರುವುದು ದೊಡ್ಡ ಚರ್ಚೆ ಹುಟ್ಟು ಹಾಕಿದೆ.
ಮಾರ್ಚ್ 23ರಂದು ನಗರದಲ್ಲಿ ನಡೆಯುತ್ತಿರುವ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಓ ಎಲ್ ನಾಗಭೂಷಣಸ್ವಾಮಿ, ಶಂಕರ ದೇವನೂರು, ರಾಜೇಂದ್ರ ಚೆನ್ನಿ, ಡಿ ಪಿ ಪ್ರಕಾಶ್ ಮುಂತಾದ ಚಿಂತಕರು ಹಲವಾರು ವಿಷಯಗಳ ಮೇಲೆ ಮಾತನಾಡಲಿದ್ದಾರೆ.
ನಂತರ ಸಂಜೆ ಬೇಲಿ ಮಠದ ಶ್ರೀಗಳ ದಿವ್ಯಸಾನಿದ್ಯದಲ್ಲಿ ಮಲ್ಲೇಪುರಂ ವೆಂಕಟೇಶ್ ಸಮಾರೋಪ ಭಾಷಣ ಮಾಡಲಿದ್ದಾರೆ.
ಪರಿಷತ್ತಿನ ಮೈಸೂರು ಜಿಲ್ಲಾ ಘಟಕ ಮೊದಲ ಬಾರಿ ಆಯೋಜಿಸುತ್ತಿರುವ ದೊಡ್ಡ ವಚನ ಜಾಗೃತಿ ಕಾರ್ಯಕ್ರಮವಿದು. ಜಿಲ್ಲಾ ಮಂತ್ರಿ ಎಚ್ ಸಿ ಮಹದೇವಪ್ಪ ಸ್ವಾಗತ ಸಮಿತಿಯ ಅಧ್ಯಕ್ಷರು. ಇಬ್ಬರು ಸ್ಥಳೀಯ ಶಾಸಕರು, ಇಬ್ಬರು ವಿಧಾನ ಪರಿಷತ್ತಿನ ಸದಸ್ಯರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ವಚನ ಜಾಗೃತಿ ಜಾಥಾ ಮತ್ತು ಸಮಾವೇಶದಲ್ಲಿ 3000 ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಆಯೋಜಕರು ಹೇಳುತ್ತಾರೆ.
ಇಷ್ಟು ದೊಡ್ಡ ಕಾರ್ಯಕ್ರಮದಲ್ಲಿ ಸಾವಿರಾರು ಜನ ಬಸವ ಅನುಯಾಯಿಗಳ ಮುಂದೆ ಮಲ್ಲೇಪುರಂ ವೆಂಕಟೇಶ್ ಅವರಿಗೆ ವೇದಿಕೆ ಕಲ್ಪಿಸಿ ಕೊಟ್ಟಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಸಾವಿರಾರು ಜನ ಬಸವ ಅನುಯಾಯಿಗಳ ಮುಂದೆ ಮಲ್ಲೇಪುರಂ ವೆಂಕಟೇಶ್ ಅವರಿಗೆ ವೇದಿಕೆ ಕಲ್ಪಿಸಿ ಕೊಟ್ಟಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಕಳೆದ ಒಂದು ವರ್ಷದಿಂದ ಶರಣ ಸಮಾಜದಲ್ಲಿ ದೊಡ್ಡ ಬಿರುಗಾಳಿಯೆಬ್ಬಿಸಿರುವ ವಚನ ದರ್ಶನ ತಂಡದ ಮುಖ್ಯ ಸದಸ್ಯ ಮಲ್ಲೇಪುರಂ ವೆಂಕಟೇಶ್. ಅವರು ಬರೆದಿರುವ ಮುನ್ನುಡಿಯಲ್ಲಿ ಪುಸ್ತಕದ ಮುಖ್ಯ ವಾದಗಳನ್ನು ಅನುಮೋದಿಸಿದ್ದಾರೆ. ಪುಸ್ತಕದ ಸರಣಿ ಲೋಕಾರ್ಪಣೆ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಂಡು ಭಾಷಣ ಮಾಡಿದ್ದಾರೆ.
ಕಲ್ಯಾಣದಲ್ಲಿ ಕ್ರಾಂತಿ ನಡೆಯಲೇ ಇಲ್ಲ, ವಚನಗಳೆಲ್ಲ ದೈವೀ ಶಕ್ತಿಯಿಂದ ಸ್ವಯಂ ಉದ್ಬವವಾಗಿವೆ, ಲಿಂಗಾಯತ ಹಿಂದೂ ಧರ್ಮದ ಭಾಗ ಮುಂತಾದ ವಚನ ದರ್ಶನದ ವಾದಗಳ ವಿರುದ್ಧ ಹಲವಾರು ನಗರಗಳಲ್ಲಿ ಶರಣ ಸಮಾಜದ ಪ್ರತಿಭಟನೆಗಳು ನಡೆದಿವೆ.
ಶರಣ ಹೋರಾಟಗಾರರು ಪುಸ್ತಕದ ಮುಖಪುಟ ಸುಟ್ಟಿದ್ದಾರೆ, ಪುಸ್ತಕ ಮುಟ್ಟುಗೋಲು ಹಾಕಲು ಒತ್ತಾಯಿಸಿದ್ದಾರೆ, ದೊಡ್ಡ ಮೆರವಣಿಗೆ ನಡೆಸಿದ್ದಾರೆ, ಪ್ರತಿಭಟನೆ ಮಾಡಿ ಪೊಲೀಸರಿಂದ ಬಂಧನಕ್ಕೂ ಒಳಗಾಗಿದ್ದಾರೆ.


ಕಳೆದ ವರ್ಷ ಚಿತ್ರದುರ್ಗ ಮಠದ ಕಾರ್ಯಕ್ರಮವೊಂದರಲ್ಲಿ ಮಲ್ಲೇಪುರಂ ವೆಂಕಟೇಶ್ ಕಾಣಿಸಿಕೊಂಡಾಗಲೂ ವ್ಯಾಪಕವಾದ ವಿರೋಧ ವ್ಯಕ್ತವಾಗಿತ್ತು.
ಬಸವ ಮೀಡಿಯಾದೊಂದಿಗೆ ಮಾತನಾಡುತ್ತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ ಸೋಮಶೇಖರ್ ಸಾಮಾಜಿಕ ಜಾಲತಾಣಗಳಲ್ಲಿ ಮಲ್ಲೇಪುರಂ ವೆಂಕಟೇಶ್ ಅವರಿಗೆ ನೀಡಿರುವ ಆಹ್ವಾನದ ವಿರುದ್ಧ ಬಂದಿರುವ ಸಿಟ್ಟಿನ ಪ್ರತಿಕ್ರಿಯೆಗಳನ್ನು ನೋಡಿದ್ದೇನೆ ಎಂದು ಹೇಳಿದರು.
“ಆದರೆ ಇದು ಜಿಲ್ಲಾ ಮಟ್ಟದಲ್ಲಿ ತೆಗೆದುಕೊಂಡಿರುವ ನಿರ್ಧಾರ. ನನಗೆ ವಿಷಯ ತಿಳಿದ ಮೇಲೆ ಸಂಬಂಧ ಪಟ್ಟವರನ್ನು ಕೇಳಿದೆ. ಆದರೆ ಆಗಲೇ ಅಹ್ವಾನ ಪತ್ರಿಕೆ ಮುದ್ರಣವಾಗಿ ಹಂಚಿಕೆಯಾಗಿತ್ತು, ಅದಕ್ಕೆ ಏನೂ ಮಾಡಲಾಗಲಿಲ್ಲ,” ಎಂದರು.
“ಶರಣ ಸಾಹಿತ್ಯ ಪರಿಷತ್ ಬಸವತತ್ವಕ್ಕೆ ಬದ್ಧವಾಗಿದೆ, ನಮಗೆ ಬಸವ ತತ್ವ ಬಿಟ್ಟರೆ ಬೇರೆ ಏನಿದೆ ಹೇಳಿ,” ಎಂದು ಹೇಳಿದರು.
ಸಮಾರೋಪ ಭಾಷಣದಲ್ಲಿ ವೆಂಕಟೇಶ್ ಅವರು ವಚನ ದರ್ಶನದ ವಾದ ಮೆಲಕು ಹಾಕಿದರೆ ಮಿಥ್ಯ ಸತ್ಯ ಕಾರ್ಯಕ್ರಮದಲ್ಲಿ ಶಂಕರ ಬಿದರಿ ಅವರಿಗೆ ಬಂದ ಪ್ರತಿಕ್ರಿಯೆ ಬರಬಹುದೇ ಎಂದು ಕೇಳಿದೆ.
“ನಾನು ಮಿಥ್ಯ ಸತ್ಯ ಕಾರ್ಯಕ್ರಮದಲ್ಲಿರಲಿಲ್ಲ, ಅಲ್ಲಿ ಏನಾಯಿತು ಎಂದು ಗೊತ್ತಿಲ್ಲ. ಇಲ್ಲಿ ಆ ರೀತಿ ಆಗಬಾರದು. ಒಂದು ಸಂವಾದ ನಡೆಯಲಿ,” ಎಂದರು.
ಶರಣ ಸಾಹಿತ್ಯ ಅಧ್ಯಕ್ಷರು ಸಂವಾದ ನಡೆಯಲಿ ಅನ್ನುವುದು ನೋಡಿದರೆ, ಅವರು ವಚನ ದರ್ಶನದ ಪರವಾಗಿ ಇದ್ದಂತೆ ಕಾಣುತ್ತದೆ. ವಚನ ದರ್ಶನದ ಪರವಾಗಿ ಹಲವು ಅಡನಾಡಿ ಲಿಂಗಾಯತರು, RSS ಪರ ಗುಲಾಮಿ ಲಿಂಗಾಯತರು ಇರುವ ಕಾರಣ ಇಂತಹ ಸಂಗತಿಗಳು ನಡೆಯುತ್ತವೆ.
ಸಂವಾದ ನಡೆಯಲಿ ಅನ್ನುವುದು ಆದರೆ *ಶ್ರೀಮತಿ ಮೀನಾಕ್ಷಿ ಬಾಳಿ* ಅವರಿಗೂ ಆಹ್ವಾನ ಮಾಡಲಿ.
ಸಂವಾದಕ್ಕೆ ಅವಕಾಶ ಕೊಡಲಿ.
ಅಧ್ಯಕ್ಷರ ಗಮನಕ್ಕೆ ತಾರದೆ ಕಾರ್ಯಕ್ರಮ ರೂಪಿಸಲು ಸಾಧ್ಯವಿಲ್ಲ. ಅಧ್ಯಕ್ಷರು ಸುಳ್ಳು ಹೇಳುತ್ತಿದ್ದಾರೆ. ಉದ್ದೇಶ ಪೂರಕವಾಗಿಯೇ ಮಲ್ಲೇಪುರಂ ವೆಂಕಟೇಶ್ ರವರನ್ನು ಅಹ್ವಾನಿಸಿ ಸುಳ್ಳು ಹೇಳುತ್ತಿದ್ದಾರೆ. ಆರ್ ಎಸ್ ಎಸ್‌ಓಲೈಸಲು ಅವರಿಗೆ ಪ್ರಮುಖವೇಧಿಕೆ ಕೊಟ್ಟಿದ್ದಾರೆ. ಇದು ನಿಜವಾಗಿಯೂ ಶರಣಸಾಹಿತ್ಯಕ್ಕೆ ಅದರ ಪರಿಷತ್ತೇ ಮಾಡಿರುವ ಹಾಗು ಮಾಡುತ್ತಿರುವ ಅವಮಾನ.
https://vachanamandara.in/ಭಾಗ-02-ಪ್ರೊ-ಮಲ್ಲೇಪುರಂ-ಜಿ-ವೆಂ/
ಬಸವ ಅನುಯಾಯಿಗಳಲಿ ಇಷ್ಟು ವಿರೋಧ ನಡೆದಾಗಲೂ ಈ ಮಲ್ಲೆಪುರಂ ವೆಂಕಟೇಶ್ ಎನುವ ಕುತಂತ್ರಿ ಗೆ ಪರಿಷತ್ನಲ್ಲಿ ಏಕೆ ಸೇರಿಸಿದರು. ಇದು ಎಂಥ ನಾಚಿಕೆಗೇಡಿನ ಕೆಲಸ. ಯಾಕೆ ಹೀಗೆಲ್ಲಾ.
ಆತನನ್ನು ವೇದಿಕೆ ಹತ್ತಲಿಕ್ಕೆ ಬಿಡಬಾರದು
…………. ಅಷ್ಟೇ.
ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿರುವ ಮನುವಾದಿ ಮನಸ್ಸಿನ ಸೋಮಶೇಖರ ಇವರಿಗೆ ತಿಳಿಯದೆ ಪತ್ರಿಕೆ ಮುದ್ರಿಸಲು ಸಾಧ್ಯವೆ? ಹೊಣೆಗಾರಿಕೆಯಿಂದ ಜಾರಿಕೊಳ್ಳುವ ಜಾಣತನದ ಮಾತು ಹೊರಗೆ ಬಸವಣ್ಣ ಒಳಗೆ ರಾಮಣ್ಣ
ಸಂವಾದ ನಡೆಯಲಿ ಎನ್ನುವುದಾದರೆ ಶ್ರೀಯುತ ಎಸ್.ಎಂ. ಜಾಮದಾರ್, ಮೀನಾಕ್ಷಿ ಬಾಳಿ, ಡಾ|| ಜೆ.ಎಸ್. ಪಾಟೀಲ್ ಮುಂತಾದವರೊಟ್ಟಿಗೆ ನಡೆಯಲಿ.
ಅದು ಬಿಟ್ಟು ಅಗ್ರಹಾರದ ಕಾವಲುಗಾರರನ್ನ ಮಾತ್ರ ಸಂವಾದಕ್ಕೆ ಆಹ್ವಾನಿಸುವುದು ಸರಿಯಲ್ಲ.
ಕಾವಿ ತೊಟ್ಟ ಲಿಂಗಾಯತ ವಿರಕ್ತರು ತಾವು ಪ್ರಯಾಗದಲ್ಲಿ ಮಿಂದೆದ್ದು ಬಂದ ವಿಡಿಯೊ/ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬೇಕೆಂದೇ ಪ್ರಚುರಪಡಿಸುವುದು…ನನ್ನ ಮಠಕ್ಕೆ ಸೇರಿದ ಸಂಸ್ಥೆಯ ಮೂಲಕ ಬಸವತತ್ವ ಭಾಷಣ/ಸೆಮಿನಾರ್ ಗೆ ವಿರುದ್ಧ ದಿಕ್ಕಿನಲ್ಲಿ ನಿಂತ ಜನಿವಾರಿಗರನ್ನು ಮಾತನಾಡಲು ಕರೆಸೇ ಕರೆಸುತ್ತೇನೆ… ಇದಕ್ಕೆ ನನಗೆ ಯಾವ ಪುಟಗೋಸಿ ಬಸವ ಭಕ್ತರ ಅಪ್ಪಣೆ ಬೇಕಿಲ್ಲ ಎಂಬಂತೆ ವರ್ತಿಸುತ್ತಿರುವುದು ಲಿಂಗಾಯತ ಸಮಾಜದಲ್ಲಿ ಅದರಲ್ಲೂ ಮುಖ್ಯವಾಗಿ ಮೈಸೂರು ಆಸುಪಾಸಿನ ಜಿಲ್ಲೆಗಳ ಬಸವ ಭಕ್ತರ ಸಹನೆ ಪರೀಕ್ಷಿಸಿ… ಇಂತಹ ಧಾರ್ಮಿಕ ರೌಡಿತನದಂತಹ ಬೆಳವಣಿಗೆಗಳ ಬಗ್ಗೆ ಒಳಗೊಳಗೇ ಛೀ
ಥೂ… ಎ೦ದುಕೊಳ್ಳುವಂತೆ ಮಾಡುತ್ತಿರುವುದು ಬಹಿರಂಗ ಸತ್ಯ..!
ಆತನನ್ನು ವೇದಿಕೆ ಹತ್ತಲಿಕ್ಕೆ ಬಿಡಬಾರದು
…………. ಅಷ್ಟೇ.